ಕಾವೇರಿ ನದಿಗೆ ಹಾರಿ ಯುವತಿ ಆತ್ಮಹತ್ಯೆ, ಶೋಧ ಕಾರ್ಯ ಜಾರಿ!

ಮಂಡ್ಯ : ಕಾವೇರಿ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ದಕ್ಷಿಣ ಕಾವೇರಿ ಬಳಿ ಜರುಗಿದೆ.

ಸಿಂಚನ 23 ಕಾವೇರಿ ನದಿಗೆ ಜಿಗಿದ ಯುವತಿ. ಈಕೆ ಹಾಸನದ ಬೇಲೂರು ತಾಲ್ಲೂಕಿನ ಪ್ರಸಾದಿ ಹಳ್ಳಿಯ ಯುವತಿ ಎನ್ನಲಾಗಿದೆ.
ಶ್ರೀರಂಗಪಟ್ಟಣದಿಂದ ಮಂಡ್ಯ ಕಡೆಗೆ ಹೋಗುವಾಗ ದಕ್ಷಿಣ ಕಾವೇರಿ ಬ್ರಿಡ್ಜ್ ಮೇಲಿಂದ ಯುವತಿ ಜಿಗಿದಿದ್ದಾಳೆ ಎಂದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಯುವತಿಗಾಗಿ ಶೋಧಕಾರ್ಯ ನಡೆದಿದೆ.
