ಆರೋಗ್ಯದ ಗೂಡು: ಗೇರು ಹಣ್ಣಿನ ವಿಶಿಷ್ಟ ಗುಣಗಳು

ಸಾಮಾನ್ಯವಾಗಿ ತೂಕ ಇಳಿಸಬೇಕೆನ್ನುವವರು ಈ ಗೇರು ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಇದರಲ್ಲಿ ನಾರಿನಾಂಶ ಅಧಿಕವಾಗಿದ್ದು ಇದು ಹೆಚ್ಚು ಆಹಾರ ಸೇವನೆಯನ್ನು ತಡೆಯುತ್ತದೆ. ಅದಲ್ಲದೇ ಬೊಜ್ಜಿನ ಸಮಸ್ಯೆಯಿರುವವರಿಗೆ ಈ ಹಣ್ಣು ಬಹಳ ಉತ್ತಮ ಎನ್ನಬಹುದು.
ಈ ಹಣ್ಣಿನಲ್ಲಿ ಕಬ್ಬಿನಾಂಶ ಸಮೃದ್ಧವಾಗಿದ್ದು, ಇದರ ನಿಯಮಿತ ಸೇವನೆಯು ರಕ್ತ ಹೀನತೆ ಸಮಸ್ಯೆಯನ್ನು ದೂರವಾಗಿಸುತ್ತದೆ.
ಗೇರುಹಣ್ಣಿನಲ್ಲಿರುವ ಕ್ಯಾಲ್ಸಿಯಂ ಅಂಶವು ಮೂಳೆಗಳ ಬೆಳವಣಿಗೆಯನ್ನು ಹೆಚ್ಚಿಸಿ ಸ್ನಾಯುಗಳನ್ನು ಬಲಪಡಿಸುತ್ತದೆ.
ಕ್ಯಾನ್ಸರ್ ಕಾಯಿಲೆ ಬರದಂತೆ ತಡೆಯಲು ಈ ಗೇರು ಹಣ್ಣು ಸಹಕಾರಿಯಾಗಿದೆ. ಇದರಲ್ಲಿರುವ ಪ್ರೊಆಂಥೋಸಯಾನಿಡಿನ್ ಸಂಯುಕ್ತಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಸಿಗುವ ಈ ಹಣ್ಣನ್ನು ಸೇವಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು.
ಗೇರು ಹಣ್ಣಿನಲ್ಲಿ ಜೀವಸತ್ವಗಳು, ಸತು ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಇದರ ನಿಯಮಿತವಾದ ಸೇವನೆಯಿಂದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಕಾಯಿಲೆಗಳು ಬರದಂತೆ ತಡೆಯುತ್ತದೆ.
ಗೇರು ಹಣ್ಣು ಸೇವನೆಯಿಂದ ಹೃದಯ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಹಣ್ಣು ಒಳ್ಳೆಯ ಕೊಬ್ಬುಗಳನ್ನು ಹೊಂದಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.