Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿಗೂ ಕಾಲಿಟ್ಟಿದೆಯೇ ಭೀಕರ ‘ಜಾಂಬಿ ಡ್ರಗ್’? ಪೊಲೀಸರಿಗೆ ಮನವಿ ಮಾಡಿದ ನಟ ದುನಿಯಾ ವಿಜಯ್

Spread the love

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಲೋಕದ ಪರಿವೆ ಇಲ್ಲದೆ ನಿಂತಿದ್ದ ಕಡೆಯೇ ನಿಂತು, ವಾಲಾಡುತ್ತಾ ಇರುವ ಯುವಕರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವರ ಈ ಸ್ಥಿತಿಗೆ ಹೊಸದಾಗಿ ಬಂದಿರುವ ಜಾಂಬಿ ಡ್ರಗ್ (Zombie drug) ಕಾರಣ ಎನ್ನಲಾಗುತ್ತಿದೆ. ‘ಜಾಂಬಿ ಡ್ರಗ್’ ಮಾದಕ ವಸ್ತು ಸೇವಿಸಿದರೆ ಹೀಗೆ ಯುವಕರು ನಿಂತಿದ್ದ ಕಡೆಯೇ ನಿಂತಿರುತ್ತಾರೆ, ಸಿನಿಮಾಗಳ ಬರುವ ಜಾಂಬಿ ರೀತಿಯ ಸ್ಥಿತಿಗೆ ತಲುಪುತ್ತಾರೆ ಎನ್ನಲಾಗುತ್ತಿದೆ. ಈ ರೀತಿಯ ಮಾದಕ ವಸ್ತು ಬೆಂಗಳೂರಿಗೂ ಬಂದಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೀಗ ನಟ, ನಿರ್ದೇಶಕ ದುನಿಯಾ ವಿಜಿ (Duniya Vijay) ಈ ಬಗ್ಗೆ ಮಾತನಾಡಿದ್ದಾರೆ.
ದುನಿಯಾ ವಿಜಯ್ ಅವರು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ನಾವು ‘ಭೀಮ’ ಸಿನಿಮಾನಲ್ಲಿ ಗಾಂಜಾ, ಡ್ರೈಡಲ್ ಮತ್ತು ಇತರೆ ಕೆಲ ಡ್ರಗ್ ಬಗ್ಗೆ ಮಾತನಾಡಿದ್ದೆವು, ಅವುಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೆವು. ಈಗ ಜಾಂಬಿ ಹೆಸರಿನ ಡ್ರಗ್ ಬಂದಿದೆ ಎನ್ನಲಾಗುತ್ತಿದೆ. ಈ ಕುರಿತು ಯುವಕರು ಮತ್ತು ಪೋಷಕರು ಜಾಗೃತವಾಗಿರಬೇಕು’ ಎಂದಿದ್ದಾರೆ.
‘ಈ ಜಾಂಬಿ ಡ್ರಗ್ಸ್ ನಿಜವಾ? ಸುಳ್ಳಾ ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು, ಈಗಾಗಲೇ ಮಾದಕ ವಸ್ತು ನಿಗ್ರಹಕ್ಕೆ ಪೊಲೀಸರು ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಹೊಸ ರೀತಿಯ ಡ್ರಗ್ಸ್ ಬಗ್ಗೆ ಅವರು ತನಿಖೆ ನಡೆಸಿ ಇದರಿಂದ ಯುವಕರನ್ನು ರಕ್ಷಿಸಬೇಕು ಎಂದು ನಾನು ಕರ್ನಾಟಕ ಪೊಲೀಸರ ಬಳಿ ಮನವಿ ಮಾಡುತ್ತೇನೆ. ಮಾತ್ರವಲ್ಲದೆ, ಈ ರೀತಿ ಜಾಂಬಿ ಡ್ರಗ್ಸ್ ಅಥವಾ ಅದನ್ನು ತೆಗೆದುಕೊಂಡಿರುವವರು ನಿಮ್ಮ ಪ್ರದೇಶದಲ್ಲಿ ಕಂಡರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿರೆಂದು ನಾನು ಯುವಕರಲ್ಲಿ ಮನವಿ ಮಾಡುತ್ತೇನೆ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ದುನಿಯಾ ವಿಜಿ ಅವರು ತಮ್ಮ ಸಿನಿಮಾಗಳ ಮೂಲಕ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಅವರ ನಿರ್ದೇಶನದ ‘ಭೀಮ’ ಸಿನಿಮಾವು ಬೆಂಗಳೂರಿನ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿತ್ತು. ‘ಭೀಮ’ ಸಿನಿಮಾದ ಬಿಡುಗಡೆಗೆ ಮುಂಚೆ ಖುದ್ದು ದುನಿಯಾ ವಿಜಿ ಅವರು ಕೆಲವು ಡ್ರಗ್ಸ್​ಗಳು ಹೇಗೆ ಯಾವುದೇ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಸ್ಟೋರ್​​ಗಳವರು ಯುವಕರಿಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಸಹ ತೋರಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *