ಪಾಪಿ ಪಾಕಿಸ್ತಾನದ ವಿರುದ್ಧ ಭಾರತ ಘೋಷಿಸಿತಾ ಯುದ್ಧ ?

ಭಾರತ :ಜಗತ್ತಿನ ಶಕ್ತಿಶಾಲಿ ದೇಶ, ಆದರೂ ಭಾರತದ ವಿರುದ್ಧ ಪಾಪಿ ಪಾಕಿಸ್ತಾನ ಪದೇ ಪದೇ ಉಗ್ರರ ಮೂಲಕ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಪಾಪಿ ಪಾಕಿಸ್ತಾನದ ಈ ವರ್ತನೆ ಬಗ್ಗೆ ನಮ್ಮ ಭಾರತ ಕೂಡ ವಾರ್ನಿಂಗ್ ಕೊಡುತ್ತಲೇ ಬಂದಿತ್ತು. ಆದರೂ ಭಾರತದ ವಿರುದ್ಧ ಪಾಪಿಗಳ ಅಟ್ಟಹಾಸ ಮುಂದುವರಿದಿರುವ ಸಮಯದಲ್ಲೇ, ಭಾರತೀಯ ಸೇನೆ ಯುದ್ಧ ಶುರು ಮಾಡಿದೆ.
ಅಮೆರಿಕ, ಚೀನಾ, ರಷ್ಯಾ ರೀತಿಯ ದೇಶಗಳ ಸಾಲಿನಲ್ಲಿ ಭಾರತೀಯ ಸೇನೆ ಕೂಡ ಇದ್ದು, ನಮ್ಮ ಭಾರತೀಯ ಸೇನೆ ಸಾಕಷ್ಟು ಶಕ್ತಿಶಾಲಿ ಆಗಿದೆ. ಹೀಗಿದ್ದಾಗ ಶತ್ರುಗಳನ್ನು ಕ್ಷಣಮಾತ್ರದಲ್ಲಿ ಉಡಾಯಿಸುವ ಶಕ್ತಿ ಕೂಡ ನಮ್ಮ ಭಾರತೀಯ ಸೇನೆಗೆ ಇದೆ. ಈಗಾಗಲೇ ಪಾಪಿ ಪಾಕಿಸ್ತಾನಕ್ಕೆ ಕೂಡ 4 ಬಾರಿ ನಮ್ಮ ತಾಕತ್ ಏನು ಅನ್ನೋದನ್ನ ತೋರಿಸಿದೆ ಭಾರತ. ಇಷ್ಟಾದರೂ ಪಾಪಿ ಪಾಕಿಸ್ತಾನ ಮಾತ್ರ ಬದಲಾಗಲೇ ಇಲ್ಲ, ಉಗ್ರರ ಮೂಲಕ ಭಾರತಕ್ಕೆ ತೊಂದರೆ ಕೊಡುತ್ತಲೇ ಇರುವ ಪಾಪಿಗಳಿಗೆ ಇದೀಗ ತಕ್ಕ ಶಾಸ್ತಿ ಶುರುವಾಗಿದೆ.
ಯುದ್ಧ ಶುರು ಮಾಡಿದ ಭಾರತ!
ಹೌದು, ಭಾರತ ಇದೀಗ ಅಧಿಕೃತವಾಗಿ ಯುದ್ಧ ಶುರು ಮಾಡಿದೆ. ಪಾಪಿ ಪಾಕಿಸ್ತಾನ ಮೂಲಕ ಭಾರತಕ್ಕೆ ಬಂದು, 26 ಜನ ಭಾರತೀಯರನ್ನ ಕೊಲೆ ಮಾಡಿದ್ದ ಪಾಪಿ ಪಾಕಿಸ್ತಾನದ ಉಗ್ರರ ಬುಡಕ್ಕೆ ಬೆಂಕಿ ಹಚ್ಚಿದೆ ಭಾರತ. ಜಾಗತಿಕ ಮಟ್ಟದಲ್ಲಿ ತನ್ನ ಶಕ್ತಿ ಏನು ಅನ್ನೋದನ್ನ ಶತ್ರು ದೇಶಗಳಿಗೆ ತೋರಿಸಲು ಇದೀಗ ಭಾರತೀಯ ಸೇನೆ ಮುಂದೆ ನುಗ್ಗಿದ್ದು, ಭಾರತೀಯ ಸೇನೆಯ ಯುದ್ಧ ಕಂಡು ಪಾಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ.
ಪಾಪಿ ಪಾಕಿಸ್ತಾನಕ್ಕೆ ನುಗ್ಗಿದರೆ ಉಡೀಸ್!
ಭಾರತ ಯುದ್ಧ ಸಾರಿದರೆ ಎದುರಿಗೆ ನಿಲ್ಲುವ ಯಾವುದೇ ದೇಶ ಉಡೀಸ್ ಆಗಿ ಹೋಗುತ್ತದೆ. 26 ಜನ ಭಾರತೀಯರನ್ನ ಗುಂಡು ಹಾರಿಸಿ ಕೊಲೆ ಮಾಡಿದ್ದ ಉಗ್ರರ ಮನೆಗಳನ್ನು ಹುಡುಕಿ ಹುಡುಕಿ ಬೆಂಕಿ ಹಚ್ಚಲಾಗುತ್ತಿದೆ. ಅದೇ ರೀತಿ ಇದೀಗ ಕಾಶ್ಮೀರದಲ್ಲಿ ಇರುವ ಉಗ್ರರ 2 ಮನೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಲಾಗಿದೆ. ಅದರಲ್ಲೂ ಪಾಪಿ ಪಾಕಿಸ್ತಾನದ ಜೊತೆಗೆ ಸೇರಿ ಈ ರೀತಿ ದಾಳಿ ನಡೆಸಿರುವ ಉಗ್ರರನ್ನ ಹುಡುಕಲಾಗುತ್ತಿದ್ದು, ಕಾಶ್ಮೀರದಲ್ಲಿ ಇರುವ ಉಗ್ರರ ಮನೆ ಉಡೀಸ್ ಆಗುತ್ತಿವೆ. ಅದರಲ್ಲೂ ಭಯೋತ್ಪಾದಕರಿಗೆ ಈ ಮೂಲಕ ಖಡಿಕ್ ವಾರ್ನಿಂಗ್ ಕೂಡ ನೀಡಲಾಗಿದ್ದು, ಈ ಮೂಲಕ ಯುದ್ಧಕ್ಕೆ ರಣಕಹಳೆ ಮೊಳಗಿದೆ. ಇನ್ನೇನು ಪಾಪಿ ಪಾಕಿಸ್ತಾನಕ್ಕೆ ಕೂಡ ನುಗ್ಗಿ ಭಾರತೀಯ ಸೇನೆ ಸರಿಯಾದ ಪಾಠ ಕಲಿಸಲು ಸನ್ನದ್ಧವಾಗಿದೆ.