ಹರ್ಷಿತ್ ರಾಣಾ ಔಟ್: ಗಾಯದ ಕಾರಣ ಟಿ20 ವಿಶ್ವಕಪ್‌ನಿಂದ ಹೊರಕ್ಕೆ.

ಮುಂಬೈ: ಐಸಿಸಿ ಟಿ20 ವಿಶ್ವಕಪ್ 2026 ರ ಅಭಿಯಾನಕ್ಕೆ ಇಂದು (ಶನಿವಾರ, ಫೆ.07) ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಭಾರತ ತಂಡವೂ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಯುಎಸ್ಎ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.
ಇದೀಗ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಯುವ ವೇಗಿ ಹರ್ಷಿತ್ ರಾಣಾ ಗಾಯಗೊಂಡಿದ್ದು ತಂಡದಿಂದ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವೇಗಿ ಹರ್ಷಿತ್ ಗಾಯಗೊಂಡಿದ್ದರು. ರಾಣಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಇದೀಗ ಐಸಿಸಿ ಟಿ20 ವಿಶ್ವಕಪ್ ಕೂಟದಿಂದಲೇ ಹೊರಬಿದ್ದಿದ್ದಾರೆ.
ಇದೀಗ ರಾಣಾ ಬದಲಿಗೆ ವೇಗಿಯನ್ನು ಬಿಸಿಸಿಐ ನೇಮಿಸಿದೆ. ಹಿರಿಯ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.


ಈ ಬೆಳವಣಿಗೆ ಮೊದಲು ನಡೆದ ಪತ್ರಿಕಾಗೋಷ್ಟಿಯಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ರಾಣಾ ಬಗ್ಗೆ ಮಾಹಿತಿ ನೀಡಿದ್ದರು. “ಹರ್ಷಿತ್ ರಾಣಾ ಅವರನ್ನು ಇನ್ನೂ ಹೊರಗಿಡಲಾಗಿಲ್ಲ, ಫಿಸಿಯೋ ಅವರನ್ನು ನೋಡುತ್ತಿದ್ದಾರೆ ಆದರೆ ಅವರು ಉತ್ತಮವಾಗಿ ಕಾಣುತ್ತಿಲ್ಲ” ಎಂದು ಹೇಳಿದರು.
“ಚಿಂತಿಸಬೇಡಿ, ನಾಳೆಗೆ ನಮ್ಮಲ್ಲಿ 11 ಆಟಗಾರರಿದ್ದಾರೆ. ಆದರೆ ಇದು ಸ್ಪಷ್ಟವಾಗಿಯೂ ದೊಡ್ಡ ಹೊಡೆತವಾಗುತ್ತದೆ. ಯಾಕೆಂದರೆ ನಾವು ಸಾಕಷ್ಟು ಯೋಚಿಸಿದ ನಂತರ 15 ಜನರ ತಂಡವನ್ನು ರಚಿಸಿದ್ದೆವು” ಎಂದು ಸೂರ್ಯಕುಮಾರ್ ಹೇಳಿದರು.
ಭಾರತದ ವಿಶ್ವಕಪ್ ತಂಡ: ಸೂರ್ಯಕುಮಾರ್ ಯಾದವ್ (ನಾ), ಅಭಿಷೇಕ್ ಶರ್ಮಾ, ಸಂಜು ಸ್ಯಾಟ್ಸನ್
(ವಿ.ಕೀ), ಇಶಾನ್ ಕಿಶನ್ (ವಿ.ಕೀ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್ (ಉ.ನಾ), ರಿಂಕು ಸಿಂಗ್, ಜಸ್ಟ್ರೀತ್ ಬುಮ್ರಾ, ಅರ್ಶೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್ ಮತ್ತು ಮೊಹಮ್ಮದ್ ಸಿರಾಜ್.