Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹರೀಶ್ ರಾಣಾ ದಯಾಮರಣ: ಏಮ್ಸ್ ಆಸ್ಪತ್ರೆಯ ಅಂತಿಮ ಕ್ಷಣಗಳ ವಿಡಿಯೋ ವೈರಲ್

Spread the love

ಕಳೆದ 13ವರ್ಷಗಳಿಂದ ಕೋಮಾದಲ್ಲಿರುವ ಮಗನಿಗೆ ದಯಾಮರಣ ನೀಡುವಂತೆ ಕೋರ್ಟ್ ತೀರ್ಪು ನೀಡಿದ ಬಳಿಕ ಇದೀಗ ಹರೀಶ್ ರಾಣಾರ ಕೊನೆಯ ಗಳಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2013ರಲ್ಲಿ ನಾಲ್ಕನೇ ಮಹಡಿಯ ಕಟ್ಟಡದಿಂದ ಬಿದ್ದು ಕೋಮಾಕ್ಕೆ ಜಾರಿದ ಮಗನಿಗೆ ದಯಾಮರಣ ನೀಡುವಂತೆ ಹರೀಶ್ ರಾಣಾ ತಂದೆ ಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಸುಪ್ರೀಂ ಕೋರ್ಟ್‌ ತೀರ್ಪನ್ನು ನೀಡಿದ್ದು, ಹರೀಶ್ ರಾಣಾಗೆ ನೀಡುತ್ತಿದ್ದ ಜೀವರಕ್ಷಕ ಚಿಕಿತ್ಸೆಯನ್ನು ತಡೆದು, ದಯಾಮರಣಕ್ಕೆ ಅನುಮತಿ ನೀಡಿದೆ.

ರೋಗಿಯ ಅಂತಿಮ ಹಂತವನ್ನು ಆರಾಮ ಮತ್ತು ಘನತೆಯಿಂದ ನಿರ್ವಹಿಸುವುದನ್ನು ಖಾತ್ರಿಪಡಿಸುವ ಉಪಶಾಮಕ ಅಂತ್ಯ-ಜೀವನದ ಆರೈಕೆ ಯೋಜನೆಯನ್ನು ಜಾರಿಗೊಳಿಸಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಇದೀಗ ಆಸ್ಪತ್ರೆಯಲ್ಲಿ ಹರೀಶ್ ರಾಣಾರ ಕೊನೆ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹರೀಶ್ ರಾಣಾ ಅವರನ್ನು ದೆಹಲಿಯ ಏಮ್ಸ್‌ಗೆ ಕರೆತರಲಾಗಿದೆ. ಇದುವರೆಗೂ ನೀಡಲಾಗುತತ್ತಿದ್ದ ಚಿಕಿತ್ಸೆಯನ್ನು ಇದೀಗ ನಿಲ್ಲಿಸಲಾಗಿದೆ. 13 ವರ್ಷಗಳ ಕುಟುಂಬದ ಭರವಸೆ, ಪ್ರಾರ್ಥನೆ ಮತ್ತು ತ್ಯಾಗ ಇದೀಗ ಕೊನೆಗೊಳ್ಳುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *