Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹರ್ದೋಯ್: ರಿವಾಲ್ವರ್ ಇಟ್ಟು ಬೆದರಿಸಿದ ಯುವತಿ, ತಂದೆಯೊಂದಿಗೆ ಅರೆಸ್ಟ್

Spread the love

Viral Video; ವಾಗ್ವಾದಕ್ಕಿಳಿದ ಪೆಟ್ರೋಲ್ ಪಂಪ್ ಸಿಬಂದಿ ಎದೆಗೆ ರಿವಾಲ್ವರ್ ಇಟ್ಟ ಯುವತಿ!

ಹರ್ದೋಯ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹರ್ದೋ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ತನ್ನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಯುವತಿಯೊಬ್ಬಳು ಪೆಟ್ರೋಲ್ ಪಂಪ್ ಉದ್ಯೋಗಿಯ ಎದೆಗೆ ರಿವಾಲ್ವರ್ ಇಟ್ಟು ಬೆದರಿಕೆ ಹಾಕಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಘಟನೆಯ ನಂತರ, ಪೆಟ್ರೋಲ್ ಪಂಪ್ ಸಿಬಂದಿ ರಜನೀಶ್ ಕುಮಾರ್ ಕೊತ್ವಾಲಿ ಪೊಲೀಸ್ ಠಾಣೆಗೆ ತೆರಳಿ ಔಪಚಾರಿಕ ದೂರು ದಾಖಲಿಸಿದ್ದಾರೆ. ಎಹ್ಸಾನ್ ಖಾನ್, ಪತ್ನಿ ಹುಸ್ನ್‌ಬಾನೊ ಮತ್ತು ರಿವಾಲ್ವರ್ ಇಟ್ಟ ಆರೋಪಿ ಅರಿಬಾ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಮತ್ತು ಕ್ರಿಮಿನಲ್ ಬೆದರಿಕೆ ಹಾಕಿದ ಆರೋಪಗಳು ಸೇರಿವೆ.

ವಾಗ್ವಾದದ ನಂತರ ತಂದೆಯನ್ನು ತಳ್ಳುವುದನ್ನು ನೋಡಿದ ನಂತರ ಕೋಪಗೊಂಡ ಅರಿಬಾ ಖಾನ್ ಕಾರಿನತ್ತ ಓಡಿಹೋಗಿ, ರಿವಾಲ್ವರ್ ತೆಗೆದುಕೊಂಡು ಅದನ್ನು ನೇರವಾಗಿ ಕೆಲಸಗಾರನ ಎದೆಗೆ ಗುರಿಯಿಟ್ಟು ನೋಡುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಂಡು ಬಂದಿದೆ. ಸ್ಥಳದಲ್ಲಿದ್ದವರು ತತ್ ಕ್ಷಣ ಮಧ್ಯಪ್ರವೇಶಿಸಿ, ಗುಂಡು ಹಾರಿಸುವ ಮೊದಲು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ವರದಿಗಳ ಪ್ರಕಾರ, ಅರಿಬಾ ಖಾನ್ ಉದ್ಯೋಗಿಗೆ ಬೆದರಿಕೆ ಹಾಕುತ್ತಾ, ‘ನಾನು ಗುಂಡುಗಳನ್ನು ಹಾರಿಸುತ್ತೇನೆ, ನಿಮ್ಮ ಕುಟುಂಬವೂ ಸಹ ನಿಮ್ಮ ದೇಹವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ’ ಎಂದು ಬೆದರಿಸಿದ್ದಾಳೆ. ಅರಿಬಾ ಖಾನ್ ಮತ್ತು ಅವಳ ತಂದೆಯನ್ನು ಬಂಧಿಸಿರುವ ಪೊಲೀಸರು ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *