ಕಿರುಕುಳ ಆರೋಪ: ನೆಲಮಂಗಲದ ಗ್ರಾಮ ಗ್ರಂಥಪಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಬೆಂಗಳೂರು : ಪಿಡಿಒ ಕಿರುಕುಳಕ್ಕೆ ಬೇಸತ್ತು ಗ್ರಾಮಪಂಚಾಯಿತಿ ಗ್ರಂಥಪಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಳಲುಘಟ್ಟದಲ್ಲಿ ನಡೆದಿದೆ.

ಕಳಲುಘಟ್ಟ ಗ್ರಾಮಪಂಚಾಯಿತಿ ಗ್ರಂಥಪಾಲಕ ರಾಮಚಂದ್ರಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕಾಗಿದ್ದ ರಾಮಚಂದ್ರಪ್ಪಗೆ ಕಳಲುಘಟ್ಟ ಗ್ರಾಮಪಂಚಾಯತ್ ಪಿಡಿಒ ಗೀತಾಮಣಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.