“ನನ್ನ ಮಗಳು ವರ್ಷಿತಾಳ ಹಂತಕರ ಗಲ್ಲಿಗೇರಿಸಿ ” -ಜ್ಯೋತಿ ತಿಪ್ಪೇಸ್ವಾಮಿ ಆಗ್ರಹ

ಚಿತ್ರದುರ್ಗ: ಇದ್ದೊಬ್ಬಳೇ ಮಗಳನ್ನು ಕಳೆದುಕೊಂಡು ತಾಯಿ ಜ್ಯೋತಿ ತಿಪ್ಪೇಸ್ವಾಮಿ ಅನುಭವಿಸುತ್ತಿರುವ ವೇದನೆ ಮತ್ತು ಯಾತನೆ ಅರ್ಥವಾಗುತ್ತದೆ. ದುರ್ಗದ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ ಅವರ ಮಗಳು 19-ವರ್ಷದ ವರ್ಷಿತಾಳನ್ನು ಕೊಲೆ ಮಾಡಿರುವ ಕೆಲ ದುರುಳರು ಆಕೆಯ ಗುರುತು ಸಿಗದಿರಲೆಂದು ಬೆಂಕಿಹಚ್ಚಿ ಸುಡುವ ಪ್ರಯತ್ನ ಕೂಡ ಮಾಡಿದ್ದಾರೆ. ಮೊನ್ನೆ ರಾತ್ರಿ ಜ್ಯೋತಿ, ದುರ್ಗದ ಹಾಸ್ಟೆಲೊಂದರಲ್ಲಿದ್ದ ಮಗಳಿಗೆ ಫೋನ್ ಮಾಡಿದ್ದಾರೆ, ಆದರೆ ವರ್ಷಿತಾ ಅಮ್ಮ ಅಂತ ಮಾತ್ರ ಹೇಳಿದಳಂತೆ. ಗಾಬರಿಗೊಂಡು ಅವರು ನಗರಕ್ಕೆ ಬಂದು ಹಾಸ್ಟೆಲ್ ಹೋದಾಗ ಮಗಳು ಕಣ್ಮರೆಯಾಗಿರುವ ವಿಷಯ ಗೊತ್ತಾಗಿದೆ. ಮತ್ತಷ್ಟು ಆತಂಕಗೊಂಡ ಅವರು ಪೊಲೀಸ್ ದೂರು ದಾಖಲಿಸಿದಾಗ ವರ್ಷಿತಾ ಕೊಲೆಯಾಗಿದ್ದು ತಿಳಿದು ಬಂದಿದೆ. ಹಂತಕರನ್ನು ಗಲ್ಲಿಗೇರಿಸಬೇಕೆಂದು ಜ್ಯೋತಿ ಹೇಳುತ್ತಾರೆ.
