ಕಬ್ಬಿನ ಜ್ಯೂಸ್ ಮಷಿನ್ಗೆ ಸಿಲುಕಿದ ಜಡೆ:ಮತ್ತೆ ಆಗಿದ್ದು ಏನು?- ವಿಡಿಯೋ ವೈರಲ್

ಕಬ್ಬಿನ ಹಾಲು ತೆಗೆಯುವ ಸಂದರ್ಭದಲ್ಲಿ ಆ ಯಂತ್ರಕ್ಕೆ ಕೈ ಸಿಲುಕಿ ಅವಘಡಗಳು ಸಂಭವಿಸಿದಂತಹ ಸುದ್ದಿಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಅಂತಹದ್ದೇ ಆಘಾತಕಾರಿ ಘಟನೆಯೊಂದು ಇದೀಗ ನಡೆದಿದ್ದು, ಕಬ್ಬಿನ ಜ್ಯೂಸ್ ಮಷಿನ್ಗೆ ಆಕಸ್ಮಿಕವಾಗಿ ಮಹಿಳೆಯೊಬ್ಬರ ಜಡೆ ಸಿಕ್ಕಿ ಹಾಕಿಕೊಂಡಿದೆ. ಅದೃಷ್ಟವಶಾತ್ ಕೂದಲೆಳೆಯುವ ಅಂತರದಲ್ಲಿ ಆ ಮಹಿಳೆ ಅಪಾಯದಿಂದ ಪಾರಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ತೆಲಂಗಾಣ, ಮಾ. 27: ಫ್ಯಾಕ್ಟರಿ ಕೆಲಸ ಮಾಡುವಾಗ ಅಥವಾ ಕೃಷಿ ಕಾರ್ಯಗಳನ್ನು ಯಂತ್ರಗಳ (Machine) ಸಹಾಯದಿಂದ ಮಾಡುತ್ತಿದ್ದೇವೆ ಎಂದಾದ್ರೆ ಆ ಸಂದರ್ಭದಲ್ಲಿ ಜಾಗರೂಕತೆಯಿಂದ ಇರುವುದು ತುಂಬಾನೇ ಮುಖ್ಯ. ಕೆಲವೊಂದು ಬಾರಿ ಈ ಯಂತ್ರಗಳಿಗೆ ಆಕಸ್ಮಿಕವಾಗಿ ಕೈ, ಕಾಲು ಸಿಲುಕಿ ಅವಘಡಗಳು ಸಂಭವಿಸುತ್ತದೆ. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಕಬ್ಬಿನ ಹಾಲು ತಯಾರಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರ ಜಡೆ (braid) ಕಬ್ಬಿನ ಜ್ಯೂಸ್ ಮಷಿನ್ಗೆ (sugarcane juice machine) ಸಿಕ್ಕಿ ಹಾಕಿಕೊಂಡಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಮಹಿಳೆ ಪಾರಾಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಈ ಆಘಾತಕಾರಿ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಡೋರ್ನಕಲ್ ಪಟ್ಟಣದಲ್ಲಿ ನಡೆದಿದ್ದು, ಇಲ್ಲಿನ ಅಂಚೆ ಕಚೇರಿಯ ಬಳಿ ಕಬ್ಬಿನ ಜ್ಯೂಸ್ ಮಾರಿ ಜೀವನ ಸಾಗಿಸುತ್ತಿದ್ದ ಮಹಿಳೆಯೊಬ್ಬರ ಕೂದಲು ಕಬ್ಬಿನ ಜ್ಯೂಸ್ ಮಷಿನ್ಗೆ ಸಿಲುಕಿದಂತಹ ಘಟನೆ ನಡೆದಿದೆ. ಕಬ್ಬಿನ ಹಾಲು ತಯಾರಿಸುತ್ತಿದ್ದ ವೇಳೆ ಯಂತ್ರದ ಚಕ್ರಕ್ಕೆ ಮಹಿಳೆಯ ಜಡೆ ಸಿಕ್ಕಿ ಹಾಕಿಕೊಂಡಿದ್ದು, ತಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಅಲ್ಲಿದ್ದವರು ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
