Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

H1B ವೀಸಾ ಸಿಸ್ಟಂ ರದ್ದು: ಹೊಸ ನಿಯಮ ತರಲು ಅಮೆರಿಕ ಸರ್ಕಾರ ನಿರ್ಧಾರ

Spread the love

US H-1B visa programme updates: ಎಚ್1ಬಿ ವೀಸಾ ಸಿಸ್ಟಂನಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡಲು ಅಮೆರಿಕ ಮುಂದಾಗಿದೆ. ಎಚ್1ಬಿ ವೀಸಾಗೆ ಶುಲ್ಕವನ್ನು ಒಂದು ಲಕ್ಷ ಡಾಲರ್​ಗೆ ಏರಿಸಿದ್ದ ಸರ್ಕಾರ ಇದೀಗ ಹೊಸ ನಿಯಮ ಮಾಡಹೊರಟಿದೆ. ವೀಸಾ ನೀಡಲು ಸಂಪೂರ್ಣ ಲಾಟರಿ ವ್ಯವಸ್ಥೆ ಬದಲು ವೇತನ ಆಧಾರಿತವಾದ ಆಯ್ಕೆ ಇರುವ ನಿಯಮ ಜಾರಿಗೊಳಿಸಲು ಪ್ರಸ್ತಾಪಿಸಿದೆ.US H-1B visa programme updates: ಎಚ್1ಬಿ ವೀಸಾ ಸಿಸ್ಟಂನಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡಲು ಅಮೆರಿಕ ಮುಂದಾಗಿದೆ. ಎಚ್1ಬಿ ವೀಸಾಗೆ ಶುಲ್ಕವನ್ನು ಒಂದು ಲಕ್ಷ ಡಾಲರ್​ಗೆ ಏರಿಸಿದ್ದ ಸರ್ಕಾರ ಇದೀಗ ಹೊಸ ನಿಯಮ ಮಾಡಹೊರಟಿದೆ. ವೀಸಾ ನೀಡಲು ಸಂಪೂರ್ಣ ಲಾಟರಿ ವ್ಯವಸ್ಥೆ ಬದಲು ವೇತನ ಆಧಾರಿತವಾದ ಆಯ್ಕೆ ಇರುವ ನಿಯಮ ಜಾರಿಗೊಳಿಸಲು ಪ್ರಸ್ತಾಪಿಸಿದೆ.

ಇತ್ತೀಚೆಗಷ್ಟೇ ಎಚ್1ಬಿ ವೀಸಾಗೆ (H-1B visa) ಪಾವತಿಸುವ ಶುಲ್ಕವನ್ನು 1,00,000 ಡಾಲರ್​ಗೆ ಏರಿಸಿದ್ದ ಅಮೆರಿಕ ಸರ್ಕಾರ ಇದೀಗ ಎಚ್1ಬಿ ವೀಸಾ ಯೋಜನೆಯಲ್ಲಿ ಮತ್ತಷ್ಟು ಬದಲಾವಣೆ ತರಲು ಯೋಜಿಸುತ್ತಿರುವುದು ತಿಳಿದುಬಂದಿದೆ. ಎಚ್1ಬಿ ವೀಸಾ ನೀಡಲು ಪ್ರಸಕ್ತ ಇರುವ ಲಾಟರಿ ಸಿಸ್ಟಂ ಬದಲು ಕೌಶಲ್ಯ ಮತ್ತು ಸಂಬಳ ಆಧಾರಿತವಾಗಿ ವೀಸಾ ಕೊಡುವ ಒಂದು ವ್ಯವಸ್ಥೆ ರೂಪಿಸಲು ಹೊರಟಿದೆ.

‘ಹೆಚ್ಚು ಕೌಶಲ್ಯದ ಮತ್ತು ಅಧಿಕ ಸಂಬಳದ ವಿದೇಶಿಗರಿಗೆ ಎಚ್1ಬಿ ವೀಸಾ ಸಿಗಲು ಆದ್ಯತೆ ನೀಡುವ ಉದ್ದೇಶ ಇದೆ’ ಎಂದು ಅಮೆರಿಕದ ಗೃಹ ಇಲಾಖೆ ಹೇಳಿದೆ.

ಉದ್ಯೋಗಿಗಳನ್ನು ನಾಲ್ಕು ಸಂಬಳ ಸ್ತರದಲ್ಲಿ ವರ್ಗೀಕರಿಸಲಾಗುತ್ತದೆ. ಅತ್ಯಧಿಕ ಸಂಬಳದ ಪ್ರತಿಯೊಬ್ಬರಿಗೂ ವೀಸಾ ಆಯ್ಕೆ ಲಿಸ್ಟ್​ನಲ್ಲಿ ನಾಲ್ಕು ಎಂಟ್ರಿ ಸಿಗುತ್ತದೆ. ಅತ್ಯಂತ ಕಡಿಮೆ ಸ್ತರದ ಸಂಬಳದವರಿಗೆ ಒಂದೇ ಎಂಟ್ರಿ ಸಿಗುತ್ತದೆ. ಇದರಿಂದ ಅಧಿಕ ಸಂಬಳದವರಿಗೆ ಎಚ್1ಬಿ ವೀಸಾ ಸಿಗುವ ಅವಕಾಶ ಹೆಚ್ಚು ಇರುತ್ತದೆ.

ಪ್ರಸ್ತಾವಿತ ಎಚ್1ಬಿ ವೀಸಾ ನಿಯಮ ಬದಲಾವಣೆಯಿಂದ ಮೆಟಾ, ಅಮೇಜಾನ್, ಓಪನ್​ಎಐ, ಎನ್​ವಿಡಿಯಾ ಇತ್ಯಾದಿ ಟೆಕ್ನಾಲಜಿ ಕಂಪನಿಗಳಿಗೆ ತುಸು ಹಿನ್ನಡೆಯಾಗಬಹುದು. ಈ ಕಂಪನಿಗಳು ಜಾಗತಿಕವಾಗಿ ಇರುವ ತಮ್ಮ ಕೆಪಾಸಿಟಿ ಸೆಂಟರ್​ಗಳ ಮೂಲಕ ಕೆಲಸಗಳನ್ನು ಔಟ್​ಸೋರ್ಸ್ ಮಾಡಬಹುದು. ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಐಟಿ ಕಂಪನಿಗಳಿಗೆ ಸೀಮಿತ ಮಟ್ಟದಲ್ಲಿ ಪರಿಣಾಮ ಬೀರುವ ನಿರೀಕ್ಷೆ ಇದೆ.


Spread the love
Share:

administrator

Leave a Reply

Your email address will not be published. Required fields are marked *