Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಲ್ಫ್ ಬಿಕ್ಕಟ್ಟು: ಯುಎಇ, ಸೌದಿ ಅರೇಬಿಯಾ ವಿಮಾನಗಳ ಮಾರ್ಗ ತುರ್ತು ಬದಲಾವಣೆ

Spread the love

ಅಬುಧಾಬಿ/ದುಬೈ/ರಿಯಾದ್: ಗಲ್ಫ್ ಪ್ರದೇಶದಲ್ಲಿ ಉಲ್ಬಣಗೊಂಡಿರುವ ಭದ್ರತಾ ಪರಿಸ್ಥಿತಿಯ ನಡುವೆ ಯುಎಇ
ಹಾಗೂ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ಹಲವು ಅಂತರಾಷ್ಟ್ರೀಯ ವಿಮಾನಗಳ ಮಾರ್ಗಗಳನ್ನು ತುರ್ತಾಗಿ ಬದಲಿಸಲಾಗಿದೆ ಎಂದು ವಿಮಾನ ಸಂಚಾರ ಮಾನಿಟರಿಂಗ್ ಮೂಲಗಳು ತಿಳಿಸಿವೆ ಎಂದು Aljazeera ವರದಿ ಮಾಡಿದೆ.
ಅಬುಧಾಬಿಗೆ ಹೊರಟಿದ್ದ ಎತಿಹಾದ್ ಏರ್‌ವೇಸ್ ಸಂಸ್ಥೆಯ ಎರಡು ವಿಮಾನಗಳನ್ನು ಒಮಾನ್ ನ ರಾಜಧಾನಿ ಮಸ್ಕತ್ ಗೆ ತಿರುಗಿಸಲಾಗಿದೆ ಎಂದು ಫೈಟ್ ರಾಡಾರ್ ಮಾಹಿತಿ ನೀಡಿದೆ. ದುಬೈಗೆ ತೆರಳುತ್ತಿದ್ದ ಎಮಿರೇಟ್ಸ್ ಸಂಸ್ಥೆಯ ವಿಮಾನವೊಂದು ಭಾರತದ ಮುಂಬೈಗೆ ವಾಪಸ್ಸಾಗುತ್ತಿರುವುದು ಕಾಣಿಸಿಕೊಂಡಿದೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಹಲವಾರು ವಿಮಾನಗಳು ತಟಸ್ಥ ವಲಯಗಳಲ್ಲಿ ಲ್ಯಾಂಡ್ ಆಗಿರುವುದು ಅಥವಾ ತಮ್ಮ ಮೂಲ ವಿಮಾನ ನಿಲ್ದಾಣಗಳತ್ತ ಮರಳುತ್ತಿರುವುದು ಕಂಡುಬಂದಿದೆ. ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದಿದೆ ಎಂಬ ವರದಿಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾನಿಟ‌ರ್ ಸಂಸ್ಥೆಗಳು ಹೇಳಿವೆ.


Spread the love
Share:

administrator

Leave a Reply

Your email address will not be published. Required fields are marked *