ಕೋಲಾರದಲ್ಲಿ ಪೈಶಾಚಿಕ ಕೃತ್ಯ: ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಶಂಕೆ

ಶ್ರೀನಿವಾಸಪುರ: ಕರ್ನಾಟಕದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ನಡೆದಿದ್ದು, ವೃದ್ಧೆಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಕೋಲಾರ ಜಿಲ್ಲೆಯಲ್ಲಿ ವ್ಯಕ್ತವಾಗಿದೆ
ಕೋಲಾರದ ಶ್ರೀನಿವಾಸಪುರದ ಸಂತೆ ಮೈದಾನದ ಬಳಿ ಕೃತ್ಯ ನಡೆದಿದೆ. 2 ದಿನದ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ವೃದ್ಧೆಯನ್ನು ಹೆಚ್.ಜಿ. ಹೊಸೂರಿನ ಲಕ್ಷ್ಮೀದೇವಮ್ಮ ಎಂದು ಗುರುತಿಸಲಾಗಿದೆ.
ವೃದ್ಧೆಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗಫರ್ ಖಾನ್ ಮೊಹಲ್ಲಾದ ಬಾಬಾನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ