ದೇವಾಲಯದ ವಿಳಾಸದಲ್ಲಿ ಎಡವಟ್ಟಾಗಿ ಮದುವೆ ಮುಹೂರ್ತ ತಪ್ಪಿಸಿದ ವರ

ತಿರುವಂತಪುರಂ: ಮದುವೆ ಸಂಭ್ರಮದ ದಿನ. ಆದರೆ ಈ ಸಂಭ್ರಮದ ದಿನವೇ ಮಂಗಳಾರತಿಯಾದರೆ ಹೇಗೆ? ಈ ಘಟನೆ ಸೀರಿಯಲ್ ಕತೆಗೂ ಯಾವುದೇ ಕಡಿಮೆ ಇಲ್ಲ. ವಿಪರ್ಯಾಸ ಎಂದರೆ ಶುಭ ಮುಹೂರ್ತ ತಪ್ಪಿ ಕೊನೆಗೆ ಇರುವ ಮುಹೂರ್ತದಲ್ಲಿ ಮದುವೆಯಾಗಬೇಕಾದ ಪರಿಸ್ಥಿತಿ ಬಂದೊದಗಿತ್ತು. ಆಹಾ ನನ್ನ ಮದುವೆಯಂತೆ ಎಂದು ಹಿರಿ ಹಿರಿ ಹಿಗ್ಗಿದ್ದಾನೆ. ಮದುವೆ ದಿನ ಬಂದೇ ಬಿಟ್ಟಿತು. ಫೇಶಿಯಲ್ ಸೇರಿದಂತೆ ಎಲ್ಲಾ ತಯಾರಿಯೊಂದಿಗೆ ವರ ರೆಡಿಯಾಗಿದ್ದಾನೆ. ಬೆಳಗ್ಗೆ 10.30ಕ್ಕೆ ಶುಭ ಮೂಹೂರ್ತ. ಇದಕ್ಕೆ ಸರಿಯಾಗಿ ಪ್ರಯಾಣದ ಸಮಯ ಎಲ್ಲಾ ಲೆಕ್ಕ ಹಾಕಿ 3 ಗಂಟೆ ಮೊದಲೇ ವರ ಹಾಗೂ ಆತನ ಕುಟುಂಬಸ್ಥರು ಹೊರಟಿದ್ದಾರೆ. ಆದರೆ ವರ ಮಂಟಪ ತಲುಪಿದ್ದು ಮುಹೂರ್ತ ಮುಗಿದು 3 ಗಂಟೆ ಬಳಿಕ. ಮಧ್ಯಾಹ್ನ 1.30ಕ್ಕೆ ವರ ಮಂಟಪ ತಲುಪಿ ರಂಪಾಟ ಆದ ಘಟನೆ ಕೇರಳದ ವಡಕ್ಕರ ಬಳಿ ನಡೆದಿದೆ. 2 ಗಂಟೆ ಮೊದಲೇ ಹೊರಟ ವರ
ತಿರುವನಂತಪುರದ ವರ. ಏಪ್ರಿಲ್ 29ಕ್ಕೆ ಮದುವೆ. ಬೆಳಗ್ಗೆ 10.30ಕ್ಕೆ ಮುಹೂರ್ತ. ಕೀಝೋರ್ ಮಹಾವಿಷ್ಣು ದೇವಸ್ಥಾನದಲ್ಲಿ ಮದುವೆ ನಿಶ್ಚಿಯಿಸಲಾಗಿತ್ತು. ಅರೇಂಜ್ ಮ್ಯಾರೇಜ್ ಇದು. ಇತ್ತ ವಧುವಿನ ಕುಟುಂಬಸ್ಥರು ದೇವಸ್ಥಾನದಲ್ಲಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 9 ಗಂಟೆಗೆ ವಧುವಿನ ಕುಟುಂಬಸ್ಥರು ದೇವಸ್ಥಾನದಲ್ಲಿ ಹಾಜರಿದ್ದಾರೆ. ಪೂಜ ಕಾರ್ಯಗಳು ನಡೆದಿದೆ. ಇತ್ತ ವರ ಹಾಗೂ ಆತನ ಕುಟುಂಬಸ್ಥರು ಕೂಡ ಮೂಹೂರ್ತಕ್ಕೆ ಸರಿಯಾಗಿ ತಲುಪಲು 2 ಗಂಟೆ ಮೊದಲೇ ಕಾರಿನಲ್ಲಿ ಹೊರಟಿದ್ದಾರೆ. ದೇವಸ್ಥಾನದಲ್ಲಿ ಸ್ವಾಗತಿಸಲು ಇರಲಿಲ್ಲ ಯಾರು
ಕಾರು ವೇಗವಾಗಿ ಸಾಗಿದೆ. ವರನ ಕಾರನ್ನು ಹಿಂಬಾಲಿಸಿಕೊಂಡು ಆತನ ಕುಟುಂಬಸ್ಥರ ವಾಹನ ಕೂಡ ಸಾಗಿದೆ. ಸರಿಸುಮಾರು 10 ಗಂಟೆ ಹೊತ್ತಿಗೆ ವರನ ಕಾರು ಹಾಗೂ ಆತನ ಕುಟುಂಬಸ್ಥರ ವಾಹನ ದೇವಸ್ಥಾನ ತಲುಪಿದೆ. ಕಾರು ನಿಲ್ಲಿಸಿ ದೇವಸ್ಥಾನದ ಬಳಿ ಬಂದರೆ ಭಕ್ತರಿದ್ದಾರೆ. ಆದರೆ ವಧುವಿನ ಕುಟುಂಬಸ್ಥರಿಲ್ಲ. ಸ್ವೀಕರಿಸಲು, ಸ್ವಾಗತ ಕೋರಲು ಯಾರೂ ಇಲ್ಲ. 10 ಗಂಟೆ ಆಗಿರುವ ಕಾರಣ ದೇವಸ್ಥಾನದ ಒಳಗಿರಬೇಕು ಎಂದು ಪದ್ಧತಿಯಂತೆ ದೇವಸ್ಥಾನದ ಒಳಗೆ ಪ್ರವೇಶಿಸಿದ್ದಾರೆ. ಕೆಲ ಭಕ್ತರು ತಮ್ಮ ಪಾಡಿದೆ ದೇವರ ದರ್ಶನ ಮಾಡುತ್ತಿದ್ದಾರೆ. ಆದರೆ ಮದುವೆಯ ಯಾವುದೇ ಲಕ್ಷಣ ಕಾಣುತ್ತಿಲ್ಲ, ಆಪ್ತರು, ವಧುವಿನ ಕುಟುಂಬಸ್ಥರು ಯಾರೂ ಇಲ್ಲ.

ವಧುವಿಗೆ ಫೋನ್ ಮಾಡಿದ ವರ
ಸುತ್ತ ಮುತ್ತ ನೋಡಿದರೂ ಯಾರೂ ಇಲ್ಲ. ಅಷ್ಟೊತ್ತಿಗೆ ಕುಟುಂಬಸ್ಥರು ಕರೆ ಮಾಡಿ ವಿಚಾರಿಸಲು ಸೂಚಿಸಿದ್ದಾರೆ. ಇದರಂತೆ ವಧುವಿಗೆ ಕರೆ ಮಾಡಿದ ವರ, ನಾವು ತಲುಪಿದ್ದೇವೆ, ಆದರೆ ನೀವು ಯಾರು ಕಾಣುತ್ತಿಲ್ಲ ಎಂದಿದ್ದಾನೆ. ವಧುವಿನ ಕುಟುಂಬಸ್ಥರು ಪಡೆದು ನೀವು ನಿಜವಾಗಿಯೂ ತಲುಪಿದ್ದೀರಾ? ನಾವೆಲ್ಲಾ ಇಲ್ಲೇ ಕಾಯುತ್ತಿದ್ದೇವೆ ಎಂದಿದ್ದಾರೆ. ಬಳಿಕ ನಿಮ್ಮ ಲೋಕೇಶನ್ ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ.
ಕೀಝೋರ್ ಮಹಾವಿಷ್ಣು ದೇವಸ್ಥಾನ ಬದಲು ಕಿಝೋರ್ ಶಿವದೇವಸ್ಥಾನಕ್ಕೆ ಎಂಟ್ರಿ
ಲೋಕೇಶನ್ ನೋಡಿದ ವಧುವಿನ ಕುಟುಂಬಸ್ಥರು ಅದು ಶಿವ ದೇವಸ್ಥಾನ, ನೀವು ಬರಬೇಕಿರುವುದು ವಿಷ್ಣು ದೇವಸ್ಥಾನ ಎಂದಿದ್ದಾರೆ. ಅಲ್ಲಿಂದ ಲೋಕೇಶನ್ ಹಾಕಿ ನೋಡಿದರೆ ಬರೋಬ್ಬರಿ 3 ಗಂಟೆ ಪ್ರಯಾಣವಿದೆ. ಎಲ್ಲಿ ಎಡವಟ್ಟಾಯಿತು ಎಂದು ನೋಡಿದರೆ ಅದೇ ಒಂದೇ ಕ್ಲಿಕ್. ರೂಟ್ ಮ್ಯಾಪ್ ಹಾಕಿದ್ದಾನೆ. ಕೀಝೋರ್ ಎಂದು ಟೈಪ್ ಮಾಡಿದ ತಕ್ಷಣ ಮೊದಲಿಗೆ ಕಿಝೋರ್ ಶಿವ ದೇವಸ್ಥಾನ ಕಾಣಿಸಿದೆ. ಆದರೆ ಎರಡನೇ ಸಾಲಿನಲ್ಲಿದ್ದ ಕಿಝೋರ್ ವಿಷ್ಣು ದೇವಸ್ಥಾನ ಕ್ಲಿಕ್ ಮಾಡಬೇಕಿತ್ತು. ಆದರೆ ವರ ಮಾಡಿದ ಎಡವಟ್ಟಿಗೆ ಬೇರೆ ದೇವಸ್ಥಾನಕ್ಕೆ ತೆರಳಿದ್ದಾನೆ.
10.30ಕ್ಕೆ ಮುಹೂರ್ತ, 1.30ಕ್ಕೆ ಮಂಟಪ ತಲುಪಿದ ವರ
ಮುಹೂರ್ತ ಸಮಯದ ವೇಳೆ ಶಿವ ದೇವಸ್ಥಾನದಲ್ಲಿದ್ದ ವರ, ವಿಷ್ಣು ದೇವಸ್ಥಾನಕ್ಕೆ ಬರಲು 3 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಸರಿಯಾದ ಲೋಕೇಶನ್ ಹಾಕಿ ತೆರಳಿದ ವರ ಕೊನೆಗೆ ಮದುವೆ ನಿಶ್ಚಯಿಸಿದ್ದ ದೇವಸ್ಥಾನ ತಲುಪಿದ್ದಾನೆ. ಇಷ್ಟೊತ್ತಿಗೆ ವಧು ಕಣ್ಣೀರ ಕೋಡಿಯಾಗಿದ್ದಾಳೆ. ಇತ್ತ ವದುವಿನ ಕುಟುಂಬಸ್ಥರು, ವರನ ಕುಟುಂಬಸ್ಥರು ತಲೆನೋವಿನಿಂದ ಬಳಲಿದ್ದಾರೆ. ಕಾರಣ ಮುಹೂರ್ತ ತಪ್ಪಿ ಹೋಗಿದೆ. ಅತ್ತ ದೇವಸ್ಥಾನದ ಅರ್ಜಕರು ಎಲ್ಲರನ್ನು ಸಮಾಧಾನ ಮಾಡಿದ್ದಾರೆ. ಸುಮಾರು 1.30ರ ವೇಳೆಗೆ ವರ ಮಂಟಪ ತಲುಪಿದ್ದಾನೆ. ಬಳಿಕ ಮದುವೆ ನಡೆದಿದೆ.