Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮನೆ ಕಟ್ಟುವವರಿಗೆ ಖುಷಿ ಸುದ್ದಿ – ಗೃಹ ಸಾಲದ ಬಡ್ಡಿಯಲ್ಲಿ ಭರ್ಜರಿ ಸಬ್ಸಿಡಿ!

Spread the love

ದೆಹಲಿ: ಮನೆ ಕಟ್ಟುವ ಕನಸು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, 8 ಲಕ್ಷ ರೂ.ಗಳ ಗೃಹ ಸಾಲದ ಮೇಲೆ ಶೇಕಡಾ 4 ಬಡ್ಡಿ ಸಬ್ಸಿಡಿ ನೀಡುತ್ತಿದೆ.

ಮನೆ ಹೊಂದಬೇಕೆಂಬ ಕನಸು ಎಲ್ಲರಿಗು ಇರುತ್ತದೆ. ಆದರೆ ಅದನ್ನು ಸಾಕಾರಗೊಳಿಸುವುದು ಸುಲಭವಲ್ಲ. ಈ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ಅಡಿಯಲ್ಲಿ, ಫಲಾನುಭವಿಗಳಿಗೆ ಗೃಹ ಸಾಲದ ಮೇಲಿನ ಬಡ್ಡಿ ಸಬ್ಸಿಡಿ ನೀಡಲಾಗುತ್ತಿದೆ.

ಬಡ್ಡಿ ಸಬ್ಸಿಡಿ ವಿವರಗಳು

ಈ ಯೋಜನೆಯಡಿಯಲ್ಲಿ, ಸರ್ಕಾರವು EWS/LIG ಮತ್ತು MIG ಕುಟುಂಬಗಳಿಗೆ ಗೃಹ ಸಾಲದ ಮೇಲಿನ ಸಬ್ಸಿಡಿಯನ್ನು ನೀಡುತ್ತದೆ. ₹35 ಲಕ್ಷದವರೆಗಿನ ಮನೆಗಳಿಗೆ, ₹25 ಲಕ್ಷದವರೆಗಿನ ಗೃಹ ಸಾಲ ಪಡೆಯುವವರು ಈ ರಿಯಾಯಿತಿಗೆ ಅರ್ಹರಾಗಿರುತ್ತಾರೆ. 12 ವರ್ಷಗಳ ಅವಧಿಗೆ, ಮೊದಲ 8 ಲಕ್ಷ ರೂ.ಗಳ ಸಾಲದ ಮೇಲೆ ಶೇಕಡಾ 4 ಬಡ್ಡಿ ಸಬ್ಸಿಡಿ ದೊರಕಲಿದೆ.

ಅರ್ಹ ಫಲಾನುಭವಿಗಳಿಗೆ ₹1.80 ಲಕ್ಷದ ಸಬ್ಸಿಡಿ, 5 ವಾರ್ಷಿಕ ಕಂತುಗಳಾಗಿ, ಪುಶ್ ಬಟನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಈ ಮಾಹಿತಿಯನ್ನು ಫಲಾನುಭವಿಗಳು ವೆಬ್‌ಸೈಟ್, OTP ಅಥವಾ ಸ್ಮಾರ್ಟ್ ಕಾರ್ಡ್ ಮೂಲಕ ಪಡೆಯಬಹುದು.

ಯಾರು ಅರ್ಹರು?

EWS (ಆರ್ಥಿಕವಾಗಿ ದುರ್ಬಲ ವರ್ಗ): ವಾರ್ಷಿಕ ಆದಾಯ ₹3 ಲಕ್ಷದವರೆಗೆ

LIG (ಕಡಿಮೆ ಆದಾಯ ಗುಂಪು): ವಾರ್ಷಿಕ ಆದಾಯ ₹3 ಲಕ್ಷದಿಂದ ₹6 ಲಕ್ಷದವರೆಗೆ

MIG (ಮಧ್ಯಮ ಆದಾಯ ಗುಂಪು): ವಾರ್ಷಿಕ ಆದಾಯ ₹6 ಲಕ್ಷದಿಂದ ₹9 ಲಕ್ಷದವರೆಗೆ

ಅರ್ಹ ಫಲಾನುಭವಿಗಳು ದೇಶದ ಯಾವ ಕೋಣೆಯಲ್ಲಿಯೂ ಸ್ವಂತ ಶಾಶ್ವತ ಮನೆ ಹೊಂದಿರಬಾರದು.

PMAY-U 2.0 ಯ ಪ್ರಮುಖ 4 ಘಟಕಗಳು

  1. ಫಲಾನುಭವಿ ಆಧಾರಿತ ನಿರ್ಮಾಣ (BLC)
  2. ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ (AHP)
  3. ಕೈಗೆಟುಕುವ ಬಾಡಿಗೆ ವಸತಿ (ARH)
  4. ಬಡ್ಡಿ ಸಹಾಯಧನ ಯೋಜನೆ (ISS)

PMAY-U 2.0 ಯ BLC, AHP, ಮತ್ತು ARH ಘಟಕಗಳನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಮತ್ತು ISS ಘಟಕವನ್ನು ಕೇಂದ್ರ ವಲಯ ಯೋಜನೆಯಾಗಿ ಕಾರ್ಯಗತಗೊಳಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ತಮ್ಮ ಆದ್ಯತೆ ಮತ್ತು ಅಗತ್ಯವನ್ನು ಅನುಸರಿಸಿ ಈ ನಾಲ್ಕು ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.


Spread the love
Share:

administrator

Leave a Reply

Your email address will not be published. Required fields are marked *