ಕ್ಯಾನ್ಸರ್ ನಿಂದ ಬಳಲಿದ ಅಜ್ಜಿಯನ್ನು ಕಸದ ರಾಶಿಗೆ ಎಸೆದ ಮೊಮ್ಮಗ

ಮುಂಬೈ:ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಯನ್ನು ಮೊಮ್ಮಗನೊಬ್ಬ ಕಸದ ರಾಶಿ ಬಳಿ ಎಸೆದುಹೋಗಿರುವ ಕ್ರೋರ ಘಟನೆ ಮುಂಬೈನಲ್ಲಿ ವರದಿಯಾಗಿದೆ.

ಶನಿವಾರದಂದು ಮುಂಬೈ ಪೊಲೀಸರು ನಗರದ ಆರೆ ಕಾಲೋನಿಯ ರಸ್ತೆಯ ಕಸದ ರಾಶಿಯ ಬಳಿ 60 ವರ್ಷದ ಮಹಿಳೆ ಯಶೋದಾ ಗಾಯಕ್ವಾಡ್ ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಕಂಡುಬಂದಾಗ ಘಟನೆ ಬೆಳಕಿಗೆ ಬಂದಿದೆ.

ಆಕೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಇತರ ಆಸ್ಪತ್ರೆಗಳು ಆಕೆಗೆ ದಾಖಲಾತಿಯನ್ನು ನಿರಾಕರಿಸಿದ ನಂತರ ಆಕೆಯನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮಹಿಳೆ ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಯಸ್ಸಾದ ಮಹಿಳೆ ತನ್ನ ಕುಟುಂಬದ ಸದಸ್ಯರ ಎರಡು ವಿಳಾಸಗಳನ್ನು ಹಂಚಿಕೊಂಡಿದ್ದಾಳೆ – ಒಂದು ಮಲಾಡ್ನಲ್ಲಿ ಮತ್ತು ಇನ್ನೊಂದು ಕಾಂದಿವಲಿಯಲ್ಲಿ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕುಟುಂಬದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಸಂಬಂಧಿಕರನ್ನು ಪತ್ತೆಹಚ್ಚಲು ಆಕೆಯ ಚಿತ್ರವನ್ನು ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ.
