Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸರ್ಕಾರಿ ಶಾಲೆಯ ಗತ್ತು: 32 ಮಕ್ಕಳನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದೊಯ್ದ ಮುತ್ತಿಗೆಪುರ ಶಾಲೆ!

Spread the love

ಚಿಕ್ಕಮಗಳೂರು: ಸರ್ಕಾರಿ ಶಾಲೆ (Government School) ಅಂದ್ರೆ ಮೂಗು ಮುರಿಯೋ ಪೋಷಕರೇ ಹೆಚ್ಚು. ಅಯ್ಯೋ. ಮಕ್ಳು ಇಂಗೀಷ್ ಕಲಿಯಲ್ಲ. ಡೀಸೆನ್ಸಿ ಇರಲ್ಲ. ನೀಟ್ ಇರಲ್ಲ ಅಂತೆಲ್ಲಾ ಪೋಷಕರು ಖಾಸಗಿ ಶಾಲೆಗಳನ್ನ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಆದರೆ, ಈವರೆಗೆ ಯಾವ ಖಾಸಗಿ ಶಾಲೆಯೂ ಮಾಡದ ಹೊಸದೊಂದು ಸಾಧನೆ ಮಾಡಿ ಸರ್ಕಾರಿ ಶಾಲೆ ಮಕ್ಕಳ ಮುಖದಲ್ಲಿ ಹೊಸದೊಂದು ನಗು ಕಂಡಿದೆ.

ಎಲ್ಲದಕ್ಕೂ ಫೀಸ್ ಲೆಕ್ಕ ಹಾಕೋ ಖಾಸಗಿ ಶಾಲೆಗೆ ಸೆಡ್ಡು ಹೊಡೆದಿರೋ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಕುಗ್ರಾಮದ ಸರ್ಕಾರಿ ಶಾಲೆ 32 ಮಕ್ಕಳನ್ನ ಫ್ಲೈಟ್‍ನಲ್ಲಿ ಪ್ರವಾಸಕ್ಕೆ (Flight Trip) ಕರೆದೊಯ್ದಿದ್ದಾರೆ.

ಕೈಯಲ್ಲಿ ಫ್ಲೈಟ್ ಟಿಕೆಟ್ ಹಿಡಿದು ಕೂತಿರೋ ಈ ಮಕ್ಕಳ ಮುಖದ ಸಂತೋಷಕ್ಕೆ ಬೆಲೆ ಕಟ್ಟೋರು ಯಾರೂ ಇಲ್ಲ. ಅಸಲಿಗೆ ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಸರ್ಕಾರಿ ಶಾಲೆ. ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 420 ಜನ ಮಕ್ಕಳಿದ್ದಾರೆ. ಈ ಶಾಲೆಯಲ್ಲಿ 5-6-7ನೇ ತರಗತಿಯ ಮಕ್ಕಳನ್ನ ವಾರ್ಷಿಕ ಶೈಕ್ಷಣಿಕ ಪ್ರವಾಸಕ್ಕೆಂದು ಮಕ್ಕಳನ್ನ ಫ್ಲೈಟ್ ಕರೆದೊಯ್ದು ಸರ್ಕಾರಿ ಶಾಲೆಗಳಂದ್ರೆ ಮೂಗು ಮುರಿಯೋ ಪೋಷಕರು ಇಲ್ಲಿನ ಶಿಕ್ಷಕರು ಒಳ್ಳೆ ಪಾಠ ಮಾಡಿದ್ದಾರೆ.

ಕೆಲ ಪೋಷಕರು ಮಕ್ಕಳನ್ನ ಕಳಿಸಲ್ಲ ಎಂದಿದ್ದಾರೆ. ಕೆಲವರು ಸಣ್ಣ ಮಕ್ಕಳು ಬೇಡ ಎಂದಿದ್ದಾರೆ. ಪೋಷಕರ ಒಪ್ಪಿಗೆ ಮೇರೆಗೆ ಶಿಕ್ಷಕರು 32 ಜನ ಮಕ್ಕಳನ್ನ ಫ್ಲೈಟ್‍ನಲ್ಲಿ ಪ್ರವಾಸಕ್ಕೆ ಕರೆದೊಯ್ದು ಸರ್ಕಾರಿ ಶಾಲೆ ಯಾರಿಗೂ-ಯಾವುದಕ್ಕೂ ಕಡಿಮೆ ಇಲ್ಲ ಅನ್ನೋದನ್ನ ನಿರೂಪಿಸಿದ್ದಾರೆ. ಈ ಫ್ಲೈಟ್ ಪ್ರವಾಸದಿಂದ ಮಕ್ಕಳು-ಪೋಷಕರು ಕೂಡ ಫುಲ್ ಖುಷ್ ಆಗಿದ್ದಾರೆ. ಮಕ್ಕಳು ಕೂಡ ಖುಷಿಯಿಂದ ಸ್ನೇಹಿತರನ್ನ ಫ್ಲೈಟ್ ನಲ್ಲಿ ಪ್ರವಾಸಕ್ಕೆ ಕಳಿಸಿ ಖುಷಿ ಪಟ್ಟಿದ್ದಾರೆ.

ಮಕ್ಕಳ ಈ ಫ್ಲೈಟ್ ಪ್ರವಾಸಕ್ಕೆ ಶಾಲೆಯ ದೈಹಿಕ ಶಿಕ್ಷಕ ಸುರೇಶ್ ಎಂಬುವರೇ 60 ಸಾವಿರ ಹಣ ಹಾಕಿ ಮಕ್ಕಳನ್ನ ಕರೆದೊಯ್ದಿದ್ದಾರೆ. ಶಾಲೆಯ ಓರ್ವ ವಿದ್ಯಾರ್ಥಿಗೆ ಪೋಷಕರೇ ಇಲ್ಲ. ಆತನಿಗೆ ಪ್ರವಾಸಕ್ಕೆ ಹೋಗೋದಕ್ಕೆ ಆಸೆ ಇತ್ತು. 4-5 ಶಿಕ್ಷಕರು-ದಾನಿಗಳುಲೇ ಹಣ ಹಾಕಿ ಆ ವಿದ್ಯಾರ್ಥಿಯನ್ನು ಫ್ಲೈಟ್ ನಲ್ಲಿ ಪ್ರವಾಸಕ್ಕೆ ಕಳಿಸಿದ್ದಾರೆ. ಒಂದು ಟಿಕೆಟ್ ಹತ್ರತ್ರ 4,000 ರೂ. ಹಣ ಇದೆ. 32 ಮಕ್ಕಳಿಗೆ ಒಂದೂಕಾಲು ಲಕ್ಷಕ್ಕಿಂತ ಹೆಚ್ಚು ಹಣವಾಗಲಿದೆ. ಮಕ್ಕಳ ಖುಷಿಗಿಂತ ದೊಡ್ಡದ್ದು ಯಾವುದೂ ಇಲ್ಲ ಎಂದು ಶಿಕ್ಷಕರ ಕೂಡ ಹಣ ಹಾಕಿ ಮಕ್ಕಳನ್ನ ಪ್ರವಾಸಕ್ಕೆ ಕಳಿಸಿದ್ದಾರೆ. ಆದರೆ, ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುತ್ತಿದ್ದ ಪೋಷಕರಿಗೆ ಇಂದು ಸರ್ಕಾರಿ ಶಾಲೆ ಶಿಕ್ಷಕರೇ ಒಳ್ಳೆಯ ಪಾಠ ಮಾಡಿದ್ದಾರೆ. 4 ಗೋಡೆಗಳ ಮಧ್ಯ ಕಲಿಸುವ ಪಾಠವೇ ಬೇರೆ. ಸಮಾಜ ಕಲಿಸುವ ಪಾಠವೇ ಬೇರೆ ಎಂಬುದನ್ನ ಇಂದು ಸರ್ಕಾರಿ ಶಾಲೆ ಶಿಕ್ಷಕರು ಮಕ್ಕಳ ಮೂಲಕ ಸಮಾಜಕ್ಕೆ ತೋರಿಸಿದ್ದಾರೆ.

ಸರ್ಕಾರಿ ಶಾಲೆ ಅಂದ್ರೆ ಪೋಷಕರಿಗೆ ಅದೇನೋ ತಾತ್ಸಾರ ಭಾವನೆ. ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದಿರೋ ಪೋಷಕರಿಗೆ ಪ್ರೈವೇಟ್ ಸ್ಕೂಲ್ ಮೇಲೆ ಲವ್. ವ್ಯಾಮೋಹ. ಆದರೆ, ಸರ್ಕಾರಿ ಶಾಲೆಯೊಂದು ಮಕ್ಕಳನ್ನ ಫ್ಲೈಟ್ ನಲ್ಲಿ ಪ್ರವಾಸಕ್ಕೆ ಕರೆದೊಯ್ದಿದೆ ಅಂದ್ರೆ ಅದು ಸರ್ಕಾರಿ ಶಾಲೆಯ ಗತ್ತು ಅಂದ್ರು ತಪ್ಪಿಲ್ಲ. ಆಧುನಿಕ ಭವ್ಯ ಭಾರತದಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದು ನಿಂತಿರುವುದು ಸಂತಸದ ಸಂಗತಿ.


Spread the love
Share:

administrator

Leave a Reply

Your email address will not be published. Required fields are marked *