ದೀಪಾವಳಿಗೆ ಗೂಗಲ್ ಮೆಗಾ ಆಫರ್: 2TB ವರೆಗಿನ ಕ್ಲೌಡ್ ಸ್ಟೋರೇಜ್ ಕೇವಲ ₹11 ರೂಪಾಯಿಗೆ ಲಭ್ಯ!

ನವದೆಹಲಿ : ದೀಪಾವಳಿ ಹಬ್ಬಕ್ಕೆ ಹಲವು ಆಫರ್ ಚಾಲ್ತಿಯಲ್ಲಿದೆ. ಇಗೀಗ ಭಾರತದಲ್ಲಿ ಗೂಗಲ್ ಕೂಡ ಮೆಗಾ ಆಫರ್ ನೀಡಿದೆ. ಪ್ರತಿಯೊಬ್ಬರಿಗೂ ಗೂಗಲ್ ಸ್ಟೋರೇಜ್ ಅತ್ಯವಶ್ಯಕ. ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಸ್ಟೋರೇಜ್ ಮಾಡಲು, ಜಿಮೇಲ್, ವ್ಯಾಟ್ಸಾಪ್ ಸೇರಿದಂತೆ ಇತರ ಡಾಕ್ಯುಮೆಂಟ್ ಕ್ಲೌಡ್‌ನಲ್ಲಿ ಸ್ಟೋರ್ ಮಾಡಲು ಸ್ಟೋರೇಜ್ ಬೇಕೆ ಬೇಕು. ಫ್ರೀ ಸ್ಟೋರೇಜ್ ಭರ್ತಿಯಾದರೆ ಒಂದಾ ಡಿಲೀಟ್ ಮಾಡಬೇಕು, ಇಲ್ಲಾ ಸ್ಟೋರೇಜ್ ಖರೀದಿಬೇಕು. ತಿಂಗಳಿಗೆ 130 ರೂಪಾಯಿಯಿಂದ 210 ರೂಪಾಯಿವರೆಗೂ ಚಾರ್ಜ್ ಮಾಡಲಾಗುತ್ತದೆ. ಆದರೆ ದೀಪಾವಳಿ ಆಫರ್ ಮೂಲಕ ಗೂಗಲ್ 2ಟಿಬಿ ಸ್ಟೋರೇಜ್‌ಗೆ ಕೇವಲ 11 ರೂಪಾಯಿಗೆ ನೀಡುತ್ತಿದೆ.

ಹೊಸ ಬಳಕೆದಾರರು, ಹಳೇ ಬಳಕೆದಾರರಿಗೂ ಲಭ್ಯ
ಗೂಗಲ್ ದೀಪಾವಳಿ ಆಫರ್ ಹೊಸ ಬಳಕೆದಾರರು ಹಾಗೂ ಹಳೇ ಬಳಕೆದಾರರಿಗೂ ಲಭ್ಯವಿದೆ. ಸ್ಟೋರೇಜ್ ಭರ್ತಿಯಾಗುತ್ತಿದೆ, ಡೀಲೀಟ್ ಮಾಡಲು ಗೂಗಲ್ ಹೇಳುತ್ತಿದ್ದರೆ, ನೀವು ಈ ದೀಪಾವಳಿ ಸಮಯದಲ್ಲಿ ಸ್ಟೋರೇಜ್ ಖರೀದಿಸುವುದು ಉತ್ತಮ. ಕಾರಣ ಅತೀ ಕಡಿಮೆ ಬೆಲೆಯಲ್ಲಿ ಗೂಗಲ್ ಸ್ಟೋರೇಜ್ ಖರೀದಿ ಸಾಧ್ಯವಾಗುತ್ತಿದೆ.
ಗೂಗಲ್ ದೀಪಾವಳಿ ಆಫರ್ ವಿವರ
ಗೂಗಲ್ ಒನ್ ದೀಪಾವಳಿ ಆಫರ್ ಎಲ್ಲಾ ಗೂಗಲ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. 30 ಜಿಬಿಯಿಂದ 2 ಟಿಬಿ ವರೆಗೆ ಪ್ಲಾನ್ ಲಭ್ಯವಿದೆ. ಗೂಗಲ್ ಒನ್ ಲೈಟ್ ಪ್ಲಾನ್ 30 ಜಿಬಿ ಸ್ಟೋರೇಜ್ ನೀಡಲಿದೆ. ಇದರ ಬೆಲೆ ತಿಂಗಳಿಗೆ 30 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದೀಗ ಕೇವಲ 11 ರೂಪಾಯಿಗೆ ಲಭ್ಯವಿದೆ. ಇಷ್ಟೇ ಅಲ್ಲ ಬೇಸಿಕ್ ಹಾಗೂ ಸ್ಟಾಂಡರ್ಡ್ ಪ್ಲಾನ್ ಕೂಡ ಇದೀಗ 11 ರೂಪಾಯಿಗೆ ಲಭ್ಯವಿದೆ. ಬೇಸಿಕ್ ಹಾಗೂ ಸ್ಟಾಂಡರ್ಡ್ ಪ್ಲಾನ್‌ನಲ್ಲಿ 100 ಜಿಬಿ ಹಾಗೂ 200 ಜಿಬಿ ಸ್ಟೋರೇಜ್ ಪ್ಲಾನ್ ನೀಡಲಾಗುತ್ತದೆ.
2ಟಿಬಿ ಸ್ಟೋರೇಜ್ ಆಫರ್ ಕೂಡ ಕೇವಲ 11 ರೂಪಾಯಿ
ಗೂಗಲ್ ಒನ್ ಪ್ರೀಮಿಯಂ ಪ್ಲಾನ್ 2ಟಿಬಿ ಸ್ಟೋರೇಜ್ ನೀಡುತ್ತದೆ. ದೀಪಾವಳಿ ಆಫರ್ ಮೂಲಕ ಈ ಪ್ಲಾನ್ ಖರೀದಿಸಿದರೆ ಈಗ ಕೇವಲ 11 ರೂಪಾಯಿಗೆ ಮಾತ್ರ ಲಭ್ಯವಿದೆ. ದೀಪಾವಳಿ ಆಫರ್ ಮುಗಿದ ಬಳಿಕ ಇದರ ಎಂದಿನ ದರ 650 ರೂಪಾಯಿ ಆಗಲಿದೆ. 2ಟಿಬಿಯ 650 ರೂಪಾಯಿ ಪ್ಲಾನ್ ದೀಪಾವಳಿಗೆ 11 ರೂಪಾಯಿಗೆ ನೀಡಲಾಗುತ್ತದೆ.
ಅಕ್ಟೋಬರ್ 31ರ ವರೆಗೆ ಆಫರ್
ನೀವು ಗೂಗಲ್ ಪ್ಲಾನ್ ಖರೀದಿಗೆ ಮುಂದಾಗಿದ್ದರೆ ಅಕ್ಟೋಬರ್ 31ರ ವರೆಗೆ ಲಭ್ಯವಿದೆ. ಬಳಿಕ ಆಫರ್ ಬೆಲೆಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಗೂಗಲ್ ಸ್ಟೋರೇಜ್ ಖರೀದಿಸಲು ಬಯಸಿದ್ದರೆ ಅಕ್ಟೋಬರ್ 31ರ ಒಳಗೆ ಆಫರ್ ಬೆಲೆಯಲ್ಲಿ ಲಭ್ಯವಿದೆ.
ಗೂಗಲ್ ವಾರ್ಷಿಕ ಪ್ಲಾನ್
- ಗೂಗಲ್ ಒನ್ ಲೈಟ್ 708 ರೂಪಾಯಿ (ದೀಪಾವಳಿ ಆಫರ್ 479 ರೂಪಾಯಿ)
- ಬೇಸಿಕ್ ಪ್ಲಾನ್ 1560 ರೂಪಾಯಿ (ದೀಪಾವಳಿ ಆಫರ್ 1,000 ರೂಪಾಯಿ)
- ಸ್ಟಾಂಡರ್ಡ್ ಪ್ಲಾನ್ 2520 ರೂಪಾಯಿ (ದೀಪಾವಳಿ ಆಫರ್ 1,600 ರೂಪಾಯಿ)