ಗೂಗಲ್ ಮ್ಯಾಪ್ ತಂಡ ಕಳ್ಳರೆಂದು ಭಾವಿಸಿ ಥಳಿಸಿದ ಗ್ರಾಮಸ್ಥರು

ಘಟಂಪುರ: ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿ ಜನ ಥಳಿಸಿರುವ ಘಟನೆ ಉತ್ತರ ಪ್ರದೇಶದ ಘಟಂಪುರದಲ್ಲಿ ನಡೆದಿದೆ. ಠಾಣೆಯ ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ತಪ್ಪಾಗಿ ಭಾವಿಸಿದ್ದರು.

ಗ್ರಾಮಸ್ಥರು ಕಾರನ್ನು ಸುತ್ತುವರೆದು ಗದ್ದಲ ಸೃಷ್ಟಿಸಲು ಪ್ರಾರಂಭಿಸಿದಾಗ,ಸಿಬ್ಬಂದಿ ಭಯಭೀತರಾಗಿದ್ದರು.ಪೊಲೀಸರಿಗೆ ಕರೆ ಮಾಡಿದ್ದರು.ಸಾಧ್ ಪೊಲೀಸರು ಸ್ಥಳಕ್ಕೆ ತಲುಪಿ ಜನರಿಗೆ ವಿವರಿಸಿದರು. ಇದಾದ ನಂತರ ಕಾರನ್ನು ಕಳುಹಿಸಲಾಯಿತು.
ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಘಟನೆಗಳಿಂದ ಜನರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಶಹಪುರ್ ಉಮ್ರಾ ಗ್ರಾಮದಲ್ಲಿ ಒಂಬತ್ತು ತಿಂಗಳ ಶಿಶುವಿನ ಹಣೆಗೆ ಬಂದೂಕಿಟ್ಟು, ದರೋಡೆ ಮಾಡಿದ ಪ್ರಕರಣವೂ ವರದಿಯಾಗಿದೆ.
ಗುರುವಾರ, ಗೂಗಲ್‌ನ ಸ್ಟ್ರೀಟ್ ವ್ಯೂ ಮ್ಯಾಪಿಂಗ್ ಕಾರು, 360 ಡಿಗ್ರಿ ಕ್ಯಾಮೆರಾ ಹೊತ್ತು ಹಾದುಹೋದಾಗ, ಊರಿಗೆ ಕಳ್ಳರು ಬಂದಿದ್ದಾರೆಂಬ ವದಂತಿ ಶರವೇಗದಲ್ಲಿ ಹಬ್ಬಿತ್ತು. ಇದಾದ ನಂತರ, ಗ್ರಾಮಸ್ಥರು ಕಾರನ್ನು ಎಲ್ಲಾ ಕಡೆಯಿಂದ ಸುತ್ತುವರೆದು ಗದ್ದಲ ಸೃಷ್ಟಿಸಲು ಪ್ರಾರಂಭಿಸಿದರು. ಕಾರನ್ನು ನಿಲ್ಲಿಸಲು ಅವರು ರಸ್ತೆಯ ಮೇಲೆ ಮರದ ದಿಮ್ಮಿಗಳನ್ನು ಹಾಕಿದರು. ಕಾರಿನಲ್ಲಿದ್ದ ಸಿಬ್ಬಂದಿ ಭಯಭೀತರಾಗಿದ್ದರು.
ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿದರು. ಮಾಹಿತಿಯ ಮೇರೆಗೆ ಪೊಲೀಸರು ಆಗಮಿಸಿ ಜನರಿಗೆ ವಿವರಿಸಿದರು. ಗ್ರಾಮಸ್ಥರಿಗೆ ವಿವರಿಸಿದ ನಂತರ ಕಾರನ್ನು ಸುರಕ್ಷಿತವಾಗಿ ಕಳುಹಿಸಲಾಯಿತು ಎಂದು ಇನ್ಸ್‌ಪೆಕ್ಟರ್ ಹೇಳಿದರು.
ತಡರಾತ್ರಿ ಕಳ್ಳರು ಕಾರಿನಲ್ಲಿ ಬಂದು ಕಳ್ಳತನ ಮಾಡಿರುವ ಸಾಕಷ್ಟು ಘಟನೆಗಳು ಅಲ್ಲಿ ಅಂಭವಿಸಿದೆ. ಹೀಗಾಗಿ ಜನರು ಜಾಗರೂಕರಾಗಿದ್ದು, ಅಲ್ಲಿ ಓಡಾಡುವ ಎಲ್ಲಾ ವಾಹನಗಳ ಮೇಲೆ ನಿಗಾ ಇಡುತ್ತಿದ್ದಾರೆ. ಆಗಸ್ಟ್ 28ರಂದು ಗೂಗಲ್ ಮ್ಯಾಪ್ ತಂಡವುಪೊಲೀಸರು ಅಥವಾ ಗ್ರಾಮ ಅಧಿಕಾರಿಗಳಿಗೆ ಪೂರ್ವ ಸೂಚನೆ ನೀಡದೆ ರಸ್ತೆ ಮಟ್ಟದ ಸಮೀಕ್ಷೆಯನ್ನು ನಡೆಸುತ್ತಿತ್ತು. ಆಗ ಊರಿನವರು ಅವರು ಕಳ್ಳರೆಂದು ಥಳಿಸಿದ್ದಾರೆ.
ಪೊಲೀಸರು ಗ್ರಾಮಸ್ಥರು ಮತ್ತು ಸಮೀಕ್ಷಾ ತಂಡವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಗ್ರಾಮಸ್ಥರು ನಮ್ಮನ್ನು ಸುತ್ತುವರೆದರು. ಅವರು ನಮ್ಮ ದಾಖಲೆಗಳನ್ನು ಪರಿಶೀಲಿಸಿದ್ದರೆ, ಅವರಿಗೆ ನಮ್ಮ ಉದ್ದೇಶ ಅರ್ಥವಾಗುತ್ತಿತ್ತು ಎಂದು ಆ ತಂಡದ ನಾಯಕ ಸಂದೀಪ್ ತಿಳಿಸಿದ್ದಾರೆ.
