ಮಕ್ಕಳ ಆನ್‌ಲೈನ್ ಸುರಕ್ಷತೆಗೆ Google Chrome ಹೊಸ ಫೀಚರ್‌ಗಳು!

ಇಂದಿನ ದಿನಗಳಲ್ಲಿ ಮಕ್ಕಳನ್ನು ಮೊಬೈಲ್ ನಿಂದ ದೂರವಿಡುವುದು ತುಂಬಾ ಕಷ್ಟದ ಕೆಲಸ. ಪೋಷಕರಿಗೆ ಇದೊಂದು ಚ್ಯಾಲೆಂಜಿಂಗ್ ಕೆಲಸ ಎಂದೇ ಹೇಳಬಹುದು. ಇದಲ್ಲದೇ ಮಕ್ಕಳು ಮೊಬೈಲ್ನಲ್ಲಿ ಏನು ನೋಡುತ್ತಿರಬಹುದು, ಆನ್ಲೈನ್ ಗೇಮಿಂಗ್ ಹೀಗೆ ಹತ್ತು ಹಲವು ಗೊಂದಲಗಳು ಪೋಷಕರಲ್ಲಿರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ, ಗೂಗಲ್ ಕ್ರೋಮ್ ಹೊಸ ಫೀಚರ್ ಅನ್ನು ಹೊರ ತಂದಿದ್ದು, ಈ ಮೂಲಕ ಮಕ್ಕಳು ಪ್ರತೀ ದಿನ ಮೊಬೈಲ್ನಲ್ಲಿ ಏನು ನೋಡುತ್ತಾರೆ ಎಂಬುದನ್ನು ಪೋಷಕರು ಸುಲಭವಾಗಿ ತಿಳಿಯಬಹುದಾಗಿದೆ.
ಮಕ್ಕಳಿಗಾಗಿ ಆನ್‌ಲೈನ್ ಸುರಕ್ಷತೆ:
ಫ್ಯಾಮಿಲಿ ಲಿಂಕ್ : ನಿಮ್ಮ ಮಗುವು ಅಪ್ರಾಪ್ತ ವಯಸ್ಕರಾಗಿದ್ದರೆ , ನೀವು ಫ್ಯಾಮಿಲಿ ಲಿಂಕ್ ಮೂಲಕ ಅವನ/ಅವಳ Google ಖಾತೆಯನ್ನು ರಚಿಸಬಹುದು. ಖಾತೆಯನ್ನು ರಚಿಸಿದ ನಂತರ, ನೀವು Chrome ನಲ್ಲಿ ಸೆಟ್ಟಿಂಗ್‌ಗಳನ್ನು ನಿಮ್ಮ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಬಹುದು.
ವೆಬ್‌ಸೈಟ್ ಫಿಲ್ಟರ್: ಇದರಲ್ಲಿ ನೀವು ವಯಸ್ಕ ವಿಷಯವನ್ನು ಹೊಂದಿರುವ ಸೈಟ್‌ಗಳನ್ನು ನಿರ್ಬಂಧಿಸಬಹುದು ಅಥವಾ ನಿಮಗೆ ಬೇಕಾದ ಸೈಟ್‌ಗಳನ್ನು ಮಾತ್ರ ಅನುಮತಿಸಬಹುದು.
Google ಸುರಕ್ಷಿತ ಹುಡುಕಾಟ(Profile Management): ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದರಿಂದ, ಆಕ್ಷೇಪಾರ್ಹ ಅಥವಾ ಅನುಚಿತ ಚಿತ್ರಗಳು ಮತ್ತು ವೀಡಿಯೊಗಳು Google ಹುಡುಕಾಟದಲ್ಲಿ ಗೋಚರಿಸುವುದಿಲ್ಲ. ಇದು ಮಕ್ಕಳಿಗೆ ಹುಡುಕಾಟವನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ.
ಅಪ್ಲಿಕೇಶನ್ ಪರ್ಮಿಷನ್: ನಿಮ್ಮ ಮಗುವಿನ Chrome ಡೇಟಾದಲ್ಲಿ ಯಾವ ಅಪ್ಲಿಕೇಶನ್‌ಗಳು ಬಳಕೆಯಲ್ಲಿವೆ ಎಂಬುದನ್ನು ಸಹ ನೀವು ನೋಡಬಹುದು.
ಗೆಸ್ಟ್ ಮೋಡ್: ನಿಮ್ಮ ಮನೆಯಲ್ಲಿ ಅನೇಕ ಮಕ್ಕಳಿದ್ದರೆ ಅಥವಾ ನಿಮ್ಮ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಕಂಪ್ಯೂಟರ್ ಹಂಚಿಕೊಂಡರೆ, ಗೆಸ್ಟ್ ಮೋಡ್ ತುಂಬಾ ಉಪಯುಕ್ತವಾಗಿದೆ. ಯಾರಾದರೂ Chrome ಅನ್ನು ಗೆಸ್ಟ್ ಮೋಡ್ ಚಲಾಯಿಸಿದಾಗ, ಅವರ ಬ್ರೌಸಿಂಗ್ ಇತಿಹಾಸ, ಕುಕೀಗಳು ಮತ್ತು ಯಾವುದೇ ಡೌನ್‌ಲೋಡ್ ಮಾಡಿದ ಫೈಲ್‌ಗಳನ್ನು ಪೋಷಕರು ತಿಳಿದುಕೊಳ್ಳಬಹುದು.
ಆಯಡ್ ಬ್ಲಾಕರ್: ಇವು ಜಾಹೀರಾತುಗಳನ್ನು ನಿರ್ಬಂಧಿಸುತ್ತವೆ, ಇದು ಮಕ್ಕಳು ಅನಗತ್ಯ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದನ್ನು ತಡೆಯಬಹುದು.
ಪೋಷಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮ ಮಗುವಿನೊಂದಿಗೆ ಇಂಟರ್ನೆಟ್ ಬಳಕೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು. ಆನ್‌ಲೈನ್‌ನಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಅವರಿಗೆ ತಿಳಿಸಿ.
