Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ನಾಳೆಯಿಂದ (ನ.1) 5ನೇ ರೈಲು ಸಂಚಾರ; ರೈಲಿಗಾಗಿ ಕಾಯುವಿಕೆ ಅವಧಿ 15 ನಿಮಿಷಕ್ಕೆ ಇಳಿಕೆ

Spread the love

ಬೆಂಗಳೂರು: ಯೆಲ್ಲೋ ಮೆಟ್ರೋ (Yellow Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದ್ದು, ನಾಳೆಯಿಂದ (ನ.1) ಐದನೇ ಸೆಟ್ ರೈಲು ಟ್ರ್ಯಾಕಿಗಿಳಿಯಲಿದೆ. ಈ ಮೂಲಕ ಯೆಲ್ಲೋ ಮಾರ್ಗದಲ್ಲಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿವೆ.

ಹೌದು, ಶನಿವಾರ (ನ.1) ನಮ್ಮ ಮೆಟ್ರೋದ ಯೆಲ್ಲೋ ಲೈನ್‌ಗೆ 5ನೇ ರೈಲು ಸೇರ್ಪಡೆಯಾಗಲಿದೆ. ಹೊಸ ರೈಲು ಸಂಚಾರದಿಂದ ಪ್ರಯಾಣಿಕರ ಕಾಯುವಿಕೆ 20 ನಿಮಿಷದಿಂದ 15 ನಿಮಿಷಕ್ಕೆ ಇಳಿಕೆಯಾಗಲಿದೆ. ಈ ಮೂಲಕ ಪೀಕ್ ಅವರ್‌ನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ

ಈಗಾಗಲೇ ಐದನೇ ರೈಲಿನ ಪರೀಕ್ಷೆ ಮುಗಿದಿದ್ದು, ಕೊನೆಯ ಹಂತದ ತಾಂತ್ರಿಕ ಪರೀಕ್ಷೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಈ ಮೂಲಕ ಐದನೇ ರೈಲು ನಾಳೆಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.


Spread the love
Share:

administrator

Leave a Reply

Your email address will not be published. Required fields are marked *