Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಹನ ಸವಾರರಿಗೆ ಗುಡ್‌ನ್ಯೂಸ್‌: ನಿಯಮ ಉಲ್ಲಂಘನೆ ದಂಡದಲ್ಲಿ ಮತ್ತೆ ಶೇ.50 ರಷ್ಟು ರಿಯಾಯಿತಿ ಘೋಷಿಸಿದ ರಾಜ್ಯ ಸರ್ಕಾರ!

Spread the love

ಬೆಂಗಳೂರು: ವಾಹನ ಸವಾರರಿಗೆ ರಾಜ್ಯ ಸರ್ಕಾರ (State Govt) ಗುಡ್‌ನ್ಯೂಸ್ ಕೊಟ್ಟಿದ್ದು, ನಿಯಮ ಉಲ್ಲಂಘಿಸಿದ್ರೆ ಶೇ.50ರಷ್ಟು ದಂಡ ಪಾವತಿಸಲು ಅವಕಾಶ ನೀಡಿದ್ದಾರೆ.

ಸಾರಿಗೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿ ಆದೇಶ ಹೊರಡಿಸಿದ್ದು, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ನ.21ರಿಂದ ಡಿ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸಲು ರಿಯಾಯಿತಿ ಘೋಷಿಸಿದ್ದಾರೆ.

ಆನ್‌ಲೈನ್ ಪೇಮೆಂಟ್‌ಗಳಾದ ಕೆಎಸ್‌ಪಿ, ಬಿಟಿಪಿ, ಬೆಂಗಳೂರು ಒನ್, ಕರ್ನಾಟಕ ಒನ್, ಟ್ರಾಫಿಕ್ ಪೊಲೀಸರ ಬಳಿಯೂ ತಮ್ಮ ದಂಡದ ರಿಯಾಯಿತಿ ಮೊತ್ತವನ್ನು ಜನ ಪಾವತಿಸಬಹುದು. ಡಿ.12ರ ಬಳಿಕ ಪೂರ್ಣ ಪ್ರಮಾಣದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಶೇ.50ರಷ್ಟು ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಹೊರಡಿಸುತ್ತಿರುವ 5ನೇ ಬಾರಿಯ ಆದೇಶ ಇದಾಗಿದೆ.

ಇದಕ್ಕೂ ಮುನ್ನ ಆ.23ರಿಂದ ಸೆ.12ರವರೆಗೂ ದಂಡದ ಶೇ.50ರಷ್ಟನ್ನು ಪಾವತಿಸಲು ಅವಕಾಶ ನೀಡಿತ್ತು. ಈ ವೇಳೆ ಬೆಂಗಳೂರು ಒಂದರಲ್ಲೇ 55 ಕೋಟಿ ರೂ.ಗೂ ಹೆಚ್ಚು ದಂಡ ಸಂಗ್ರಹವಾಗಿತ್ತು


Spread the love
Share:

administrator

Leave a Reply

Your email address will not be published. Required fields are marked *