Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತೀಯರಿಗೆ ಐರ್ಲೆಂಡ್‌ನಲ್ಲಿ ನೆಲೆಸಲು ಸುವರ್ಣಾವಕಾಶ: 52,000 ಜನರಿಗೆ ಶಾಶ್ವತ ವಾಸಸ್ಥಳ

Spread the love

ಭಾರತೀಯರೇ ಈ ಅವಕಾಶ ಮಿಸ್‌ ಮಾಡಿಕೊಳ್ಳದಿರಿ. ಈ ಸುಂದರವಾದ ದೇಶವು ಸುಮಾರು 52,000 ಜನರಿಗೆ ಶಾಶ್ವತವಾಗಿ ನೆಲೆಸಲು ಅವಕಾಶ ಮಾಡಿಕೊಡುತ್ತಿದೆ. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಬೇಕು. ಅಷ್ಟಕ್ಕೂ ಯಾವ ದೇಶ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

ನೀವು ವಿದೇಶದಲ್ಲಿ ವಾಸವಿರಲು ಬಯಸಿದರೆ ನಾವು ನಿಮಗಾಗಿ ಸುಂದರ ದೇಶದ ಬಗ್ಗೆ ಮಾಹಿತಿ ನೀಡುತ್ತೇವೆ.

ಆ ದೇಶವು ಭಾರತೀಯರನ್ನು ತಮ್ಮ ದೇಶದಲ್ಲಿ ವಾಸಿಸಲು ಅವಕಾಶ ಮಾಡಿಕೊಡುತ್ತಿದೆ. ಎಷ್ಟೇಂದರೆ ಬರೋಬ್ಬರಿ 52,000 ಮಂದಿಗೆ ಎಂಬುದನ್ನು ನಾವು ಹೇಳುತ್ತೇವೆ. ಇದು ಕೇವಲ ಪ್ರವಾಸವಲ್ಲ, ಶಾಶ್ವತವಾಗಿ ನೆಲೆಸಬಹುದಾದ ಅವಕಾಶ. ದೀರ್ಘಾವಧಿಯ ನಿವಾಸ ಎಂದು ಕರೆಯಲ್ಪಡುವ ಇಲ್ಲಿನ ಶಾಶ್ವತ ನಿವಾಸ (PR), EU/EEA ಇಲ್ಲಿ ನಾಗರಿಕರು ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ. ಅಷ್ಟಕ್ಕೂ ಆ ದೇಶ ಯಾವುದು ಎಂದು ಕೇಳುತ್ತಿದ್ದೀರಾ? ಆ ದೇಶ ಯಾವುದೂ ಅಲ್ಲ ‘ಐರ್ಲೆಂಡ್‌’.

ಹಾಗಾದರೆ ಈ ದೇಶದಲ್ಲಿ ಉಳಿಯಲು ಹೇಗೆ ಅರ್ಜಿ ಸಲ್ಲಿಸಬೇಕು? ಎಂಬುದರ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿ ನೀಡಲಾಗಿದೆ ಓದಿ. ಷರತ್ತುಗಳು ಅನ್ವಯ: ಯಾವುವು ಗೊತ್ತಾ?
ಐರ್ಲೆಂಡ್‌ನ PR ಪಡೆಯಲು, ನೀವು ಕೆಲವು ಪ್ರಮುಖ ಷರತ್ತುಗಳನ್ನು ತಿಳಿಯಬೇಕು. ಅದೇನೆಂದರೆ…

ನೀವು ಐರ್ಲೆಂಡ್‌ನಲ್ಲಿ ಕನಿಷ್ಠ 5 ವರ್ಷಗಳ ಕಾಲ ಕಾನೂನುಬದ್ಧವಾಗಿ ವಾಸಿಸಬೇಕು.
ನೀವು ಮಾನ್ಯ ಉದ್ಯೋಗ ಪರವಾನಗಿಯನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸುವ ವೇಳೆ ನೀವು ಉದ್ಯೋಗ ಮಾಡುತ್ತಿರಬೇಕು.
ನಿಮ್ಮ ಮೇಲೆ ಯಾವುದೇ ಕ್ರಿಮಿನಲ್ ದಾಖಲೆ ಇರಬಾರದು.
ಜೊತೆಗೆ ನೀವು ಸಾಕಷ್ಟು ಆರ್ಥಿಕ ಸ್ಥಿರತೆಯನ್ನು ಹೊಂದಿರಬೇಕು.
ನೀವು ಇಲ್ಲಿಯವರೆಗೆ ನಿಮ್ಮ ಎಲ್ಲಾ ವಲಸೆ ನಿಯಮಗಳನ್ನು ಪಾಲಿಸಿರಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತೆ?

ಐರ್ಲೆಂಡ್‌ನಲ್ಲಿ ನೀವು ಶಾಶ್ವತವಾಗಿ ನೆಲೆಸಲು ಈಗಾಗಲೇ ತಿಳಿಸಿದಂತೆ ಕನಿಷ್ಠ 5 ವರ್ಷಗಳ ಕಾಲ ವಾಸಿಸಿರಬೇಕು, ಮಾನ್ಯವಾದ ಪರವಾನಗಿಯನ್ನು ಹೊಂದಿರಬೇಕು, ಜೊತೆಗೆ ಆರ್ಥಿಕವಾಗಿ ಸುಭದ್ರವಾಗಿರಬೇಕಾದದು ಅತ್ಯವಶ್ಯಕವಾಗಿದೆ.

ನೀವು ಅರ್ಜಿ ಸಲ್ಲಿಸಲು ನಿಮ್ಮೊಂದಿಗೆ ಅರ್ಜಿ ನಮೂನೆ, ಪಾಸ್‌ಪೋರ್ಟ್, ಐರಿಶ್ ನಿವಾಸ ಪರವಾನಗಿ (IRP) ಕಾರ್ಡ್, ಹಳೆಯ ಉದ್ಯೋಗ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರದಂತಹ ಅಗತ್ಯ ದಾಖಲೆಗಳನ್ನು ನಿಮ್ಮ ಬಳಿ ಹೊಂದಿರಬೇಕು.

ಅರ್ಜಿಯನ್ನು ಸಲ್ಲಿಸಿದ ನಂತರ ಏನಾಗುತ್ತೆ?
ಅರ್ಜಿ ಸಲ್ಲಿಸಿದ ನಂತರ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಭಾರತೀಯ ರೂಪಾಯಿಗಳಲ್ಲಿ ನೀವು ಸುಮಾರು 51,254 ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಪ್ರಕ್ರಿಯೆ ಪೂರ್ಣಗೊಳ್ಳಲು ಸರಿ ಸುಮಾರು 6-8 ತಿಂಗಳುಗಳನ್ನು ತೆಗೆದುಕೊಳ್ಳಬಹುದು.

ಎಲ್ಲಾ ಸರಿಯಾಗಿದ್ದು, ಅಂದುಕೊಂಡಂತೆ ಆದರೆ ನಿಮಗೆ ಅನುಮೋದನೆ ದೊರೆಯುತ್ತದೆ. ತದನಂತರ ನಿಮಗೆ ಸ್ಟ್ಯಾಂಪ್ 4 ವೀಸಾ ಸಿಗುತ್ತದೆ, ಇದು ದೀರ್ಘಾವಧಿಯ ನಿವಾಸದ ಪುರಾವೆಯಾಗಿದೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ.

ಐರ್ಲೆಂಡ್‌ನಲ್ಲಿ ನೆಲೆಸಲು ಯಾಕೆ ಉತ್ತಮ?
ಐರ್ಲೆಂಡ್ ಒಂದು ಸುಂದರವಾದ ದೇಶವಾಗಿದೆ. ಈ ದೇಶವು ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಹಣಕಾಸು ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಅವಕಾಶ ನೀಡುತ್ತವೆ. ಇವುಗಳ ಜೊತೆಗೆ ಉತ್ತಮ ಜೀವನ ಮಟ್ಟ, ಉತ್ತಮ ಉದ್ಯೋಗಾವಕಾಶಗಳು, ಆರೋಗ್ಯ ರಕ್ಷಣೆ ಮತ್ತು ಉತ್ತಮ ಶಿಕ್ಷಣಗಳ ಕಾರಣ ಈ ದೇಶ ಅತ್ಯುತ್ತಮವಾಗಿದೆ.

ಈ ಮುಖ್ಯ ಅಂಶಗಳನ್ನು ತಿಳಿಯಿರಿ
ಈ ದೇಶದಲ್ಲಿ ವಾಸಿಸಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಶುಲ್ಕ: 500 (ಸರಿಸುಮಾರು ರೂ. 51,254)

ವಾಸದ ಸ್ಥಿತಿ: ಐರ್ಲೆಂಡ್‌ನಲ್ಲಿ 5 ವರ್ಷಗಳ ಕಾಲ ವಾಸಿಸಬೇಕು

ಮೊದಲ ಹಂತ: ಮಾನ್ಯ ಉದ್ಯೋಗ ಪರವಾನಗಿಯನ್ನು ಹೊಂದಿರಬೇಕು (2 ವರ್ಷಗಳವರೆಗೆ)

ಎರಡನೇ ಹಂತ: ಸ್ಟ್ಯಾಂಪ್ 4 ವೀಸಾಕ್ಕೆ ಅರ್ಜಿ ಸಲ್ಲಿಸಿ (3 ವರ್ಷಗಳವರೆಗೆ)

ಅಂತಿಮ ಹಂತ: ನಂತರ ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸಿ.

ಐರ್ಲೆಂಡ್ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ
ಐರ್ಲೆಂಡ್ ಒಂದು ಶಾಂತ ಹಾಗೂ ಸುಂದರವಾದ ದೇಶವಾಗಿ ಹೆಸರುವಾಸಿಯಾಗಿದೆ. ಇಲ್ಲಿ ಸಾಕಷ್ಟು ಐತಿಹಾಸಿಕ ತಾಣಗಳನ್ನು ನೀವು ಪರಿಶೀಲಿಸಬಹುದು. ಸಂಗೀತ ಮತ್ತು ವರ್ಣರಂಜಿತ ಬೀದಿಗಳಿಗೂ ಐರ್ಲೆಂಡ್‌ ಹೆಸರುವಾಸಿಯಾಗಿದೆ. ವಿದೇಶದಲ್ಲಿ ಬದುಕು ಕಂಡುಕೊಳ್ಳಬೇಕು, ಉದ್ಯೋಗ ಮಾಡಬೇಕು ಎಂದು ನೀವು ಬಯಸುತ್ತಿದ್ದರೆ ಬಹುಶಃ ಈ ದೇಶ ನಿಮ್ಮ ಪಟ್ಟಿಯಲ್ಲಿರಲಿ. (All PC: pexels)


Spread the love
Share:

administrator

Leave a Reply

Your email address will not be published. Required fields are marked *