ಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್ ಮತ್ತು ತರುಣ್ ರಾಜ್ ಜಾಮೀನು ವಜಾ

ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೇ ಮಾರ್ಚ್ 16 ರಂದು ರನ್ಯಾ ರಾವ್ (Ranya Rao) ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಇದೀಗ ನಟಿಯ ಜೊತೆಗೆ ತರುಣ್ ರಾಜ್‌ಗೂ ಕೋರ್ಟ್ ಜಾಮೀನು ನಿರಾಕರಿಸಿದೆ.
ರನ್ಯಾ ಸ್ಟೇಟ್ಮೆಂಟ್ ಮೇಲೆ ಮಾರ್ಚ್ 9 ರಂದು ಡಿಆರ್ ಐ ಅಧಿಕಾರಿಗಳಿಂದ ತರುಣ್ ರಾಜ್ ಅರೆಸ್ಟ್ ಆಗಿದ್ದರು. ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿ ವಜಾ ಆಗಿದೆ. ಮುಖ್ಯ ಕಾರಣ ಇಲ್ಲಿದೆ.
ಆರೋಪಿ ತರುಣ್ ರಾಜ್ ನಿಂದ ಕಸ್ಟಮ್ಸ್ ಆಕ್ಟ್ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಕಸ್ಟಮ್ಸ್ ಆಕ್ಟ್ U/s.135(1)(a)(b) ಉಲ್ಲಂಘನೆ ಮಾಡಿ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಇಬ್ಬರ ಪಾಲುದಾರಿಕೆಯಲ್ಲಿ ದುಬೈನಲ್ಲಿ ಕಂಪನಿ ಹೊಂದಿದ್ದರು ಎನ್ನಲಾಗಿದೆ.
