Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ

Spread the love

ಬೆಂಗಳೂರು: ಎರಡು ವಾರದಲ್ಲಿ ಮೊದಲ ಬಾರಿಗೆ ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇವತ್ತು ಮತ್ತೆ ಇಳಿಕೆಯ ಹಾದಿಗೆ ಬಂದಿದೆ. ಆದರೆ, ಬೆಳ್ಳಿ ಬೆಲೆ ಭರ್ಜರಿ ಏರಿಕೆ ಕಂಡಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪದಲ್ಲಿದೆ. ಚಿನ್ನದ ಬೆಲೆ ಇವತ್ತು ಶುಕ್ರವಾರ ಗ್ರಾಮ್​ಗೆ 15 ರೂ ಮಾತ್ರವೇ ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಸಿಂಗಾಪುದಲ್ಲಿ ತುಸು ಹೆಚ್ಚಿದೆ. ಇನ್ನು ಬೆಳ್ಳಿ ಬೆಲೆ ಇವತ್ತು ಗ್ರಾಮ್​ಗೆ 2 ರೂ ಏರಿ 118 ರೂ ಮುಟ್ಟಿದೆ. ಜುಲೈ 23ರಂದು 119 ರೂನ ಗರಿಷ್ಠ ಮಟ್ಟಕ್ಕೆ ಬೆಳ್ಳಿ ಬೆಲೆ ಹೆಚ್ಚಿತ್ತು. ಈಗ ಅದರ ಸಮೀಪಕ್ಕೆ ಬೆಲೆ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,00,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 12,800 ರೂ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 22ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,00,530 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,520 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,180 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,00,530 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,180 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,150 ರೂ
  • ಚೆನ್ನೈ: 92,150 ರೂ
  • ಮುಂಬೈ: 92,150 ರೂ
  • ದೆಹಲಿ: 92,300 ರೂ
  • ಕೋಲ್ಕತಾ: 92,150 ರೂ
  • ಕೇರಳ: 92,150 ರೂ
  • ಅಹ್ಮದಾಬಾದ್: 92,200 ರೂ
  • ಜೈಪುರ್: 92,300 ರೂ
  • ಲಕ್ನೋ: 92,300 ರೂ
  • ಭುವನೇಶ್ವರ್: 92,150 ರೂ

Spread the love
Share:

administrator

Leave a Reply

Your email address will not be published. Required fields are marked *