ಚಿನ್ನದ ಬೆಲೆ ಕುಸಿತ: ಇಂದು 10 ಗ್ರಾಂಗೆ ₹88,800 – ಗ್ರಾಹಕರಿಗೆ ಬಂಪರ್ ಗಿಫ್ಟ್!

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ (Gold rate today) ಇವತ್ತು ಸೋಮವಾರ ಸಖತ್ ಇಳಿಕೆ ಕಂಡಿದೆ. ಗ್ರಾಮ್ಗೆ ಬರೋಬ್ಬರಿ 165 ರೂಗಳಷ್ಟು ಬೆಲೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ ಬಹುತೇಕ 185 ರೂಗಳಷ್ಟು ಕಡಿಮೆ ಆಗಿದೆ. 10 ಗ್ರಾಮ್ ಆಭರಣ ಚಿನ್ನದ ಬೆಲೆ 1,650 ರೂಗಳ ಇಳಿಕೆ ಆಗಿದೆ. 9,045 ರೂ ಇದ್ದ ಬೆಲೆ 8,880 ರೂಗೆ ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನಿವಾರ ಪೇಟೆಯಲ್ಲಿ ಬೆಲೆ ವ್ಯತ್ಯಯವಾಗಿಲ್ಲ. ಮಲೇಷ್ಯಾ ಸೇರಿ ಕೆಲವೇ ಕೆಲವು ದೇಶಗಳಲ್ಲಿ ಹಳದಿ ಲೋಹದ ಬೆಲೆ ತಗ್ಗಿದೆ. ಇನ್ನು, ಬೆಳ್ಳಿಯೂ ಕೂಡ ಚಿನ್ನದ ರೀತಿ ಇವತ್ತು ಬೆಲೆ ಇಳಿಕೆ ಕಂಡಿದೆ. ಗ್ರಾಮ್ಗೆ ಒಂದು ರೂನಷ್ಟು ದರ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 88,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 96,880 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 88,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,900 ರುಪಾಯಿಯಲ್ಲಿ ಇದೆ.ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 12ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 96,880 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,660 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 96,880 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 88,800 ರೂ
ಚೆನ್ನೈ: 88,800 ರೂ
ಮುಂಬೈ: 88,800 ರೂ
ದೆಹಲಿ: 88,950 ರೂ
ಕೋಲ್ಕತಾ: 88,800 ರೂ
ಕೇರಳ: 88,800 ರೂ
ಅಹ್ಮದಾಬಾದ್: 88,850 ರೂ
ಜೈಪುರ್: 88,950 ರೂ
ಲಕ್ನೋ: 88,950 ರೂ
ಭುವನೇಶ್ವರ್: 88,800 ರೂ