Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

11 ವರ್ಷದ ಬಾಲಕನ ಹೊಟ್ಟೆಯಲ್ಲಿ ಸಿಕ್ಕಿತು ಚಿನ್ನ

Spread the love

ಚೀನಾ : ಮಕ್ಕಳ ವಿಷಯದಲ್ಲಿ ಹೆತ್ತವರು ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಸಣ್ಣ ಮಕ್ಕಳು ನಾಣ್ಯ, ಬಾಟಲಿ ಮುಚ್ಚಳ ನುಂಗಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಹನ್ನೊಂದು ವರ್ಷದ ಬಾಲಕನೊಬ್ಬನು ಚಿನ್ನದ ಗಟ್ಟಿ ನುಂಗಿದ್ದು, ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಘಟನೆಯು ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ನಡೆದಿದೆ. ಹೌದು ಪೋಷಕರು ಬಾಲಕನ ಹೊಟ್ಟೆ ಊದಿಕೊಂಡಿರುವುದನ್ನು ಗಮನಿಸಿದ್ದಾರೆ. ಆದರೆ ಈ ಹುಡುಗನಿಗೆ ಹೊಟ್ಟೆ ನೋವು ಸೇರಿದಂತೆ ಇನ್ಯಾವುದೋ ಲಕ್ಷಣಗಳು ಕಾಣಿಸಿರಲಿಲ್ಲ. ಈ ಬಾಲಕನ ಹೊಟ್ಟೆ ಊದಿಕೊಂಡಿರುವ ಬಗ್ಗೆ ಅನುಮಾನಗೊಂಡ ಪೋಷಕರು ಸುಝೌ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆಯಲ್ಲಿ ವೈದ್ಯರು ಎಕ್ಸ್-ರೇ ಮಾಡಿದ್ದು ಬಾಲಕನ ಹೊಟ್ಟೆಯಲ್ಲಿ ಘನ ಲೋಹದ ವಸ್ತುವೊಂದು ಸಿಲುಕಿಕೊಂಡಿರುವುದು ತಿಳಿದು ಬಂದಿದೆ. ಆ ಬಳಿಕ ಸ್ಕ್ಯಾನ್ ಮಾಡಿ ನೋಡಿದಾಗ 100 ಗ್ರಾಂ ತೂಕದ ಚಿನ್ನದ ಗಟ್ಟಿ ಇರುವುದು ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೇ ಈ ಚಿನ್ನದ ಗಟ್ಟಿಯು ಮಲದ ಮೂಲಕ ಹೊರ ಹೋಗಲು ಸಾಧ್ಯವಾಗುವಂತೆ ಔಷಧಿಯನ್ನು ನೀಡಿದ್ದಾರೆ.

ಈ ಬಾಲಕನ ಹೊಟ್ಟೆ ಊದಿಕೊಂಡಿರುವ ಬಗ್ಗೆ ಅನುಮಾನಗೊಂಡ ಪೋಷಕರು ಸುಝೌ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆಯಲ್ಲಿ ವೈದ್ಯರು ಎಕ್ಸ್-ರೇ ಮಾಡಿದ್ದು ಬಾಲಕನ ಹೊಟ್ಟೆಯಲ್ಲಿ ಘನ ಲೋಹದ ವಸ್ತುವೊಂದು ಸಿಲುಕಿಕೊಂಡಿರುವುದು ತಿಳಿದು ಬಂದಿದೆ. ಆ ಬಳಿಕ ಸ್ಕ್ಯಾನ್ ಮಾಡಿ ನೋಡಿದಾಗ 100 ಗ್ರಾಂ ತೂಕದ ಚಿನ್ನದ ಗಟ್ಟಿ ಇರುವುದು ಕಂಡು ವೈದ್ಯರೇ ಶಾಕ್ ಆಗಿದ್ದಾರೆ.

ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೇ ಈ ಚಿನ್ನದ ಗಟ್ಟಿಯು ಮಲದ ಮೂಲಕ ಹೊರ ಹೋಗಲು ಸಾಧ್ಯವಾಗುವಂತೆ ಔಷಧಿಯನ್ನು ನೀಡಿದ್ದಾರೆ. ಇದಾದ ಎರಡು ದಿನಗಳ ಬಳಿಕ ಮತ್ತೆ ಸ್ಕ್ಯಾನ್‌ನಲ್ಲಿ ಪರೀಕ್ಷಿಸಿದ ವೇಳೆ ಚಿನ್ನದ ಗಟ್ಟಿಯು ಬಾಲಕನ ಹೊಟ್ಟೆಯಲ್ಲೇ ಇರುವುದು ತಿಳಿದು ಬಂದಿದೆ. ಔಷಧಿಯಿಂದ ಯಾವುದೇ ಪ್ರಯೋಜನವಾಗದ ಕಾರಣ ವೈದ್ಯರು ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ.

ಹೌದು, ಹುಡುಗನಿಗೆ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಚಿನ್ನದ ಗಟ್ಟಿಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನು ಶೀಘ್ರವೇ ಚೇತರಿಸಿಕೊಂಡಿದ್ದು, ಯಥಾಪ್ರಕಾರ ಊಟ ತಿಂಡಿ ಸೇವಿಸಲು ಪ್ರಾರಂಭಿಸಿದ್ದಾನೆ. ಹುಡುಗನ ಆರೋಗ್ಯದಲ್ಲಿ ಬಹುಬೇಗನೆ ಚೇತರಿಕೆ ಕಂಡಿದ್ದು, ಆರೋಗ್ಯ ಸುಧಾರಿಸಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ವೈದ್ಯರು ಬಾಲಕನನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *