Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗೋವಾ ನೈಟ್‌ಕ್ಲಬ್ ಅಗ್ನಿ ಅವಘಡ: ಬೆಂಗಳೂರು ಮೂಲದ ಯುವಕ ಸೇರಿ 25 ಸಾವು; ಪರಿಹಾರ ಘೋಷಣೆ

Spread the love

ಕಾರವಾರ/ಬೆಂಗಳೂರು: ಗೋವಾದ (Goa Nightclub Fire) ಹಡೆಪಡೆಯಲ್ಲಿನ ನೈಟ್‌ಕ್ಲಬ್‌ನ ಅಗ್ನಿ ಅವಘಡದಲ್ಲಿ 25 ಜನ ಮೃತಪಟ್ಟಿದ್ದು, ಬೆಂಗಳೂರು (Bengaluru) ಮೂಲದ ಇಶಾಕ್ ಸಾವನ್ನಪ್ಪಿರುವುದನ್ನು ಗೋವಾದ ಹಣಜುಣ ಪೊಲೀಸರು ದೃಢಪಡಿಸಿದ್ದಾರೆ.

ಬೆಂಗಳೂರಿನಿಂದ ಪಣಜಿಗೆ (Panaji) ಬಂದು ನಂತರ ಇಲ್ಲಿನ ಅರ್ಪೋರಾ ನೈಟ್‌ಕ್ಲಬ್‌ಗೆ ಬಂದಿದ್ದ ಇಶಾಕ್ ಕ್ಲಬ್‌ನಲ್ಲಿ ಘಟನೆ ನಡೆಯುವ ಮುಂಚೆಯೇ ತೆರಳಿದ್ದ. ಆದರೇ ಕ್ಲಬ್‌ನಲ್ಲಿ ಮೊಬೈಲ್ ಬಿಟ್ಟು ಬಂದ ಕಾರಣ ಮರಳಿ ಕ್ಲಬ್‌ಗೆ ಪ್ರವೇಶಿಸಿದ್ದು ಈ ವೇಳೆ ಕ್ಲಬ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ದಟ್ಟ ಹೊಗೆ ತುಂಬಿ ಹೊರಬರಲಾಗದೇ ಅಲ್ಲಿಯೇ ಸಿಲುಕಿ ಸಜೀವ ದಹನವಾಗಿದ್ದಾರೆ

ಇನ್ನು ದುರ್ಘಟನೆ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ಸರ್ಕಾರದಿಂದ ಮೃತರಿಗೆ ತಲಾ ಐದು ಲಕ್ಷ ರೂ., ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂ., ಗಾಯಾಳುಗಳಿಗೆ ಗೋವಾ ಸರ್ಕಾರದಿಂದ 50 ಸಾವಿರ ರೂ. ಹಾಗೂ ಪ್ರಧಾನಿಗಳ ನಿಧಿಯಿಂದ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ನೈಟ್‌ಕ್ಲಬ್‌ನಲ್ಲಿ ನಡೆದ ಕೆಲವರ ಗುರುತು ಮಾತ್ರ ಪತ್ತೆಯಾಗಿದ್ದು, ಇವರ ಮೃತದೇಹವನ್ನು ಅವರ ಮನೆಗೆ ಕಳುಹಿಸುವ ಖರ್ಚನ್ನು ಸರ್ಕಾರವೇ ಬರಿಸಲಿದೆ. ಇದಕ್ಕಾಗಿ ಪೊಲೀಸ್ ಎಸ್.ಡಿ.ಎಂ ಸಮಿತಿ ಸ್ಥಾಪನೆ ಮಾಡಲಾಗಿದೆ. ಈ ದುರ್ಘಟನೆ ಬಳಿಕ ಎಲ್ಲಾ ನೈಟ್ ಕ್ಲಬ್‌ಗಳ ಆಡಿಟ್ ನಡೆಸಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗುತ್ತದೆ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಇನ್ನು ಘಟನೆ ಸಂಬಂಧ ಹಣಜುಣ ಪೊಲೀಸರು ನಾಲ್ವರು ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ. ಕ್ಲಬ್ ಮಾಲೀಕ ಸೌರಭ್ ಲುಥರಾ, ಗೌರವ್ ಲುಥರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಮೋದ್ ಸಾವಂತ್ ತಿಳಿಸಿದ್ದಾರೆ

ಮೃತರಾದವರು ಯಾರು?
ದುರ್ಘಟನೆಯಲ್ಲಿ ಮೃತರಾದವರ ಗುರುತು ಪತ್ತೆಯಾಗಿದ್ದು, ಜಾರ್ಖಂಡಿನ ಮೋಹಿತ ಎಟವಾ ಮುಂಡಾ (18), ಪ್ರದೀಪ್ ಮಹತೋ (22), ಬಿನೋದ್ ಮಹತೋ (19), ಅಸ್ಸಾಂನ ರಾಹುಲ್ ತಾಂತಿ (60) ಉತ್ತರಖಂಡನ ಸತೀಶ್‌ಸಿಂಗ್ ರಾಣಾ (26), ಅಸ್ಸಾಂನ ಮನೋಜಿತ್ ಮಲ್ (24), ಹರಿಯಾಣದ ಚೂರ್ಣ ಪುನ್ (33), ಉತ್ತರಾಖಂಡ್‌ನ ಸುರೇಂದ್ರ ಸಿಂಗ್ (38) ಪಶ್ಚಿಮ ಬಂಗಾಳದ ಸುಭಾಷ್ ಛೆತ್ರಿ (22), ಉತ್ತರಾಖಂಡ್‌ನ ಜಿತೇನ್ ಸಿಂಗ್ (21), ಸುಮೀತ್ ನೇಗಿ (44), ದೆಹಲಿಯ ಸರೋಜ್ ಜೋಶಿ (42) ಹಾಗೂ ಬೆಂಗಳೂರಿನ ಇಶಾಕ್ ಎಂದು ಗುರುತಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *