ಬೆಂಗಳೂರಿಗೆ ಜಾಗತಿಕ ಗರಿಮೆ: ಸ್ಟಾರ್ಟ್ಅಪ್ ಇಕೋಸಿಸ್ಟಂನಲ್ಲಿ ವಿಶ್ವದಲ್ಲೇ 14ನೇ ಸ್ಥಾನ!

ಬೆಂಗಳೂರು, ಜೂನ್ 14: ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿರುವ ರಾಜಧಾನಿ ಬೆಂಗಳೂರು ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ ಟಾಪ್ 20 ಸಾರ್ಟ್ಪ್ ಇಕೋಸಿಸ್ಟಂ ನಗರಗಳ ಪಟ್ಟಿಯಲ್ಲಿ ಬೆಂಗಳೂರು 14ನೇ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರು ಈ ಬಾರಿ ಏಳು ಸ್ಥಾನ ಜಿಗಿತ ಕಂಡಿದೆ. ಕಳೆದ ವರ್ಷ ಬೆಂಗಳೂರು 21ನೇ ಸ್ಥಾನದಲ್ಲಿತ್ತು. ವಿಶ್ವದ ಟಾಪ್ 20 ಸ್ಟಾರ್ಟ್ಅಪ್ ನಗರಗಳಲ್ಲಿ ಬೆಂಗಳೂರು ಅತಿದೊಡ್ಡ ಜಿಗಿತ ದಾಖಲಿಸದಂತಾಗಿದೆ ಎಂದು ಸ್ಟಾರ್ಟ್ ಅಪ್ ಜಿನೋಮ್ನ ಗ್ಲೋಬಲ್ ಸ್ಟಾರ್ಟ್ಅಪ್ ಇಕೋಸಿಸ್ಟಂ ರಿಪೋರ್ಟ್ 2025ರ ವರದಿ ನೀಡಿದೆ.
ಈ ವರದಿಯಲ್ಲಿ ಸ್ಥಾನ ಪಡೆದ ಭಾರತೀಯ ನಗರಗಳಲ್ಲಿ, ಬೆಂಗಳೂರು ಅಗ್ರಸ್ಥಾನದಲ್ಲಿದೆ. ದೆಹಲಿ 29ನೇ ಸ್ಥಾನದಲ್ಲಿದೆ ಮತ್ತು ಮುಂಬೈ 40ನೇ ಸ್ಥಾನದಲ್ಲಿದೆ. ಜಿಎಸ್ಇಅಪ್ ವರದಿ ಪ್ರಕಾರ ಸಿಲಿಕಾನ್ ವ್ಯಾಲಿ ಮೊದಲ, ನ್ಯೂಯಾರ್ಕ್ ಎರಡನೇ ಮತ್ತು ಲಂಡನ್ ಮೂರನೇ ಸ್ಥಾನ ಪಡೆದಿದೆ. ಜಾಗತಿಕವಾಗಿ ಟಾಪ್ 50 AI ನಗರಗಳಲ್ಲಿ ಬೆಂಗಳೂರು ಐದನೇ ಸ್ಥಾನ ಪಡೆದಿದೆ.
ಕಳೆದ ವರ್ಷ ಅತಿದೊಡ್ಡ ಐಪಿಒಗಳಲ್ಲಿ ಒಂದಾದ ಸ್ವಿಗ್ಗಿಯ, ಗೋಡಿಜಿಟ್, ಇಂಡಿಜೀನ್ ಮತ್ತು ಬ್ಲ್ಯಾಕ್ಬಕ್ ಷೇರುಮಾರುಕಟ್ಟೆ ಪ್ರವೇಶಿಸಿದ್ದು ಹಾಗೂ ಡೀಪ್ಟೆಕ್ ಇಕೋಸಿಸ್ಟಂ ವಿಚಾರದಲ್ಲಿ ಕರ್ನಾಟಕ ಸರ್ಕಾರ ನೀಡುತ್ತಿರುವ ಪ್ರೋತ್ಸಹದಿಂದ ಈ ಸಾಧನೆ ಯಶಸ್ವಿಯಾಗಿದೆ.
2024ರಲ್ಲಿ ಭಾರತವು ಶತಕೋಟಿ ಡಾಲರ್ ಮೌಲ್ಯದ ಐಪಿಒಗಳ ಸೃಷ್ಟಿಗೆ ಕಾರಣವಾಗಿದೆ. ಸ್ವಿಗ್ಗಿಯು 96 ಸಾವಿರ ಕೋಟಿ ರೂ., ಗೋಡಿಜಿತ್ 30 ಸಾವಿರ ಕೋಟಿ ರೂ., ಇಂಡಿಜಿನ್ 1 11 ಸಾವಿರ ಕೋಟಿ ರೂ., ಬ್ಲ್ಯಾಕ್ ಬಕ್ ಕಂಪನಿ 8600 ಕೋಟಿ ರೂ. ಮೌಲ್ಯದ ಐಪಿಒ ಬಿಡುಗಡೆ ಮಾಡಿತ್ತು. ಈ ಮೂಲಕ ಕಂಪನಿಯಲ್ಲಿ ಆರಂಭದಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ಲಾಭವಾಗಿತ್ತು. ಇದು ದೇಶದಲ್ಲಿ ಸ್ಟಾರ್ಟ್ಅಪ್ಗಳಿಗೆ ಸಿಗುತ್ತಿರುವ ಅತ್ಯುತ್ತಮ ಇಕೋ ಸಿಸ್ಟಂಗೆ ಸಾಕ್ಷಿಯಾಗಿದೆ ಎಂದು ವರದಿಯಲ್ಲಿದೆ.