ಹಿಜಾಬ್ ಇಲ್ಲದೆ ಜೀನ್ಸ್ ಧರಿಸಿದ್ದ ಯುವತಿಯರ ಮೇಲೆ ಹಲ್ಲೆ

ಇಸ್ಲಾಮಾಬಾದ್: ಹಿಜಾಬ್ ಧರಿಸಿದೆ ಜೀನ್ಸ್ಪ್ಯಾಂಟ್ ಧರಿಸಿದ್ದ ಇಬ್ಬರು ಯುವತಿಯರಿಗೆ ಪುರುಷರ ಗುಂಪೊಂದು ಕಿರುಕುಳ ನೀಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲ ಎನ್ನುವ ಕೂಗು ಕೇಳಿಬಂದಿದೆ. ಇಬ್ಬರು ಯುವತಿಯರು ಜೀನ್ಸ್ ಮತ್ತು ಟಾಪ್ ಧರಿಸಿ ಜನನಿಬಿಡ ಬೀದಿಯಲ್ಲಿ ಹಿಜಾಬ್ ಇಲ್ಲದೆ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದ್ದಕ್ಕಿದ್ದಂತೆ ಪುರುಷರ ಗುಂಪೊಂದು ಅವರನ್ನು ಸುತ್ತುವರೆದು, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.ಪ್ರಾಣಿಗಳು ಸಹ ಈ ರೀತಿ ವರ್ತಿಸುವುದಿಲ್ಲ ಎಂದು ಬಳಕೆದಾರರಯ ಕಿಡಿಕಾರಿದ್ದಾರೆ.