ಪ್ರೇಮ ನಿವೇದನೆಗೆ ‘ಯೆಸ್’ ಎಂದ ಗೆಳತಿ; ಹಿನ್ನೆಲೆಯಲ್ಲಿ ಜ್ವಾಲಾಮುಖಿ ಸ್ಫೋಟ! ಅವಿಸ್ಮರಣೀಯ ಘಟನೆ ಸೆರೆ

ಸೆಂಟ್ರಲ್ ಅಮೆರಿಕಾ ಪ್ರೇಮ ನಿವೇದನೆ ಯೆಸ್ ಎಂದರೆ ಅತ್ಯಂತ ಸುಂದರ ಹಾಗೂ ಅವಿಸ್ಮರಣೀಯ ಕ್ಷಣವಾಗಿ ಮಾರ್ಪಡಲಿದೆ. ಒಂದು ವೇಳೆ ಪ್ರಪೋಸಲ್‌ಗೆ ಉತ್ತರ ನೋ ಆಗಿದ್ದರೆ, ಅದಕ್ಕಿಂತ ದುರಂತ ಮತ್ತೊಂದಿಲ್ಲ ಅನ್ನೋ ಭಾರ ತಲೆ ಮೇಲೆ ಶಾಶ್ವತವಾಗಿ ಬೀಳಲಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಪ್ರಪೋಸಲ್‌ಗೆ ಗೆಳಯ ಅಥವ ಗಳತಿ ಯೆಸ್ ಹೇಳಲೇಬುಕ ಅನ್ನೋ ಸಂದರ್ಭ ಸೃಷ್ಟಿಸುತ್ತಾರೆ.

ಸುಂದರ ತಾಣದಲ್ಲಿ, ಸಂತೋಷದಲ್ಲಿರುವಾಗ ಪ್ರೇಮ ನಿವೇದನೆ ಮಾಡುತ್ತಾರೆ. ಹೀಗೆ ಇಲ್ಲೊಂದು ಜೋಡಿ ಪ್ರವಾಸಕ್ಕೆ ತೆರಳಿದೆ. ಪರ್ವತದ ಮೇಲೆ ಹತ್ತಿ ಫೋಟೋ ತೆಗೆಸಿಕೊಳ್ಳುತ್ತಿದ್ದಂತೆ ಗೆಳೆಯ ರಿಂಗ್ ತೆಗೆದು ಪ್ರಪೋಸ್ ಮಾಡಿದ್ದಾನೆ. ಗೆಳೆಯನ ಪ್ರಪೋಸಲ್ ನೋಡಿದ ಗೆಳತಿಗೆ ಒಂದು ಕ್ಷಣ ಅಚ್ಚರಿಯಾಗಿದೆ. ಆದರೆ ಭಾವನೆಗಳನ್ನು ನಿಯಂತ್ರಣ ಮಾಡಿ ಯೆಸ್ ಎಂದಿದ್ದಾಳೆ. ಇಷ್ಟೇ ನೋಡಿ, ಈ ಜೋಡಿಯ ಹಿಂಭಾಗದಲ್ಲಿರುವ ದೂರದ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇದರೊಂದಿಗೆ ಇವರಿಬ್ಬರ ಸಂಭ್ರಮ ಶುರುವಾಗಿದೆ.
ಗೆಳತಿಗೆ ಸದ್ದಿಲ್ಲದೆ ಪ್ರಪೋಸ್, ಪರ್ವತದ ಹಿಂದೆ ನಡೆಯಿತು ಅಚ್ಚರಿ
ಈ ಸ್ಮರಣೀಯ ಪ್ರಪೋಸಲ್ ನಡೆದಿದ್ದು ಸೆಂಟ್ರಲ್ ಅಮೆರಿಕದ ಗೌಟೆಮಾಲ್ ಪರ್ವತದಲ್ಲಿ. ಮಾರ್ಗನ್ ಅಲೆಕ್ಸಾ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಗೆಳೆಯರ ತಂಡ ಪ್ರವಾಸಕ್ಕೆ ತೆರಳಿದೆ. ಗೌಟೆಮಾಲ್ ಪರ್ವತ ಹತ್ತಿದ ಗೆಳೆಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತನ್ನ ಗೆಳತಿ ಜೊತೆ ಈತನೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಇದೇ ವೇಳೆ ಗೆಳೆಯ ಸದ್ದಿಲ್ಲದೆ ಜೇಬಿನಿಂದ ರಿಂಗ್ ತೆಗೆದು ಮಂಡಿಯೂರಿ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ.
ಭಾವುಕಳಾದ ಗೆಳತಿಯಿಂದ ಒಕೆ
ಯಾವುದರ ಅರಿವಿಲ್ಲದೆ ಫೋಟೋಗೆ ಫೋಸ್ ನೀಡುತ್ತಿದ್ದ ಗೆಳತಿ ಹಿಂದಿರುಗಿದಾಗ ಗೆಳೆಯ ಮಂಡಿಯೂರಿ ರಿಂಗ್ ಚಾಚಿ ಹಿಡಿದು ಪ್ರಪೋಸ್ ಮಾಡುತ್ತಿರುವ ದೃಶ್ಯ ನೋಡಿದ್ದಾಳೆ. ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾಳೆ. ಜೊತೆಗೆ ಭಾವುಕಳಾಗಿದ್ದಾಳೆ. ಈಕೆ ಕೂಡ ಗೆಳೆಯನಿಂದ ಪ್ರಪೋಸ್ ನಿರೀಕ್ಷೆ ಮಾಡಿದ್ದಳು. ಭಾವನೆಗಳನ್ನು ನಿಯಂತ್ರಣ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆನಂದ ಬಾಷ್ಪದೊಂದಿಗೆ ಗೆಳೆಯನ ಪ್ರಪೋಸಲ್‌ಗೆ ಒಕೆ ಎಂದಿದ್ದಾಳೆ.
ವೈರಲ್ ವಿಡಿಯೋಗೆ ಭರ್ಜರಿ ಕಮೆಂಟ್
ಗೆಳತಿ ಒಕೆ ಎನ್ನುತ್ತಿದ್ದಂತೆ ದೂರದ ಪರ್ವತದಲ್ಲಿ ಹೊಗೆಯಾಡುತ್ತಿದ್ದ ಜ್ವಾಲಾಮುಖಿ ಪರ್ವತ ಸ್ಫೋಟಗೊಂಡಿದೆ. ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಇದು ಕೂಡ ಈ ಜೋಡಿ ಪ್ರಪೋಸಲ್‌ನಲ್ಲಿ ಸೆರೆಯಾಗಿದೆ. ಈ ಘಟನೆ ಈ ಜೋಡಿಯನ್ನು ಪುಳಕಿತರನ್ನಾಗಿ ಮಾಡಿದೆ. ಇಷ್ಟೇ ಅಲ್ಲ ಇತರ ಗೆಳೆಯರು ಶಿಳ್ಳೆ ಚಪ್ಪಾಳೆ ಮೂಲಕ ಪ್ರಪೋಸಲ್ ಹಾಗೂ ಜ್ವಾಲಾಮುಖಿ ಸಂದರ್ಭವನ್ನು ಸಂಭ್ರಮಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಹಲವರು ಈ ವಿಡಿಯೋಗೆ ಕಮೆಂಟ ಮಾಡಿದ್ದಾರೆ.