ಸ್ನೇಹಿತೆಯ ಕಣ್ಣೆದುರು ಸಿಂಹದ ದಾಳಿಗೆ ಬಾಲಕಿ ಬಲಿ! ಕೀನ್ಯಾದ ಭೀಕರ ಘಟನೆ

ಕೀನ್ಯಾ :14 ವರ್ಷದ ಬಾಲಕಿಯೊಬ್ಬಳು ಸಿಂಹ ದಾಳಿಗೆ ಸಿಲುಕಿ ತನ್ನ ಸ್ನೇಹಿತೆಯ ಕಣ್ಮುಂದೆಯೇ ಮೃತಪಟ್ಟಿರುವ ಘಟನೆ ಕೀನ್ಯಾದ ನೈರೋಬಿ ಹೊರವಲಯದಲ್ಲಿ ನಡೆದಿದೆ.

ಕೀನ್ಯಾದ ನೈರೋಬಿ ರಾಷ್ಟ್ರೀಯ ಉದ್ಯಾನವನದಿಂದ ತಪ್ಪಿಸಿಕೊಂಡು ಬಂದ ಸಿಂಹ, ಉದ್ಯಾನವನದ ಗಡಿ ಪ್ರದೇಶದಲ್ಲಿರುವ ಬಾಲಕಿ ಮನೆಯ ಆವರಣದಲ್ಲಿ ಆಕೆಯ ಮೇಲೆ ದಾಳಿ ಮಾಡಿ ಕೊಂದಿದೆ.
ಇನ್ನೂ ಕೀನ್ಯಾ ವನ್ಯಜೀವಿ ಸೇವೆ (ಕೆಡಬ್ಲ್ಯೂಎಸ್) ದಾಳಿ ನಡೆದ ಸ್ಥಳಕ್ಕೆ ಧಾವಿಸಿದ್ದು, ಆ ಮಗು ಇದ್ದ ಮನೆ ಸಿಂಹದ ಗುಹೆಯಿಂದ ಸಮೀಪದಲ್ಲೇ ಇದೆ ಎಂದು ತಿಳಿಸಿದ್ದಾರೆ. ಘಟನೆಯನ್ನು ಕಂಡ ಇನ್ನೊಂದು ಮಗು ನಮಗೆ ಮಾಹಿತಿ ನೀಡಿತು ಎಂದು ಅವರು ತಿಳಿಸಿದ್ದಾರೆ. ಮಗುವನ್ನು ಪತ್ತೆಹಚ್ಚಲು ಕೆಡಬ್ಲ್ಯೂಎಸ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಎಂಬಗತಿ ಎಂಬ ನದಿಯ ಬಳಿ ಬಾಲಕಿ ಶವ ಪತ್ತೆಯಾಗಿದೆ.
ಈ ಮೃಗಾಲಯವು ನಗರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದ್ದು, ಸಿಂಹಗಳು, ಕತ್ತೆಕಿರುಬಗಳು, ಚಿರತೆಗಳು ಹಾಗೂ ಹುಲಿಗಳಂತಹ ಮುಂತಾದ ಪ್ರಾಣಿಗಳಿರುವುದಾಗಿ ತಿಳಿದು ಬಂದಿದೆ. ಪ್ರಾಣಿಗಳು ನಗರಕ್ಕೆ ಪ್ರವೇಶಿಸದಂತೆ ತಡೆಯಲು ಉದ್ಯಾನದ ಸುತ್ತಲೂ ಮೂರು ಕಡೆ ಬೇಲಿ ನಿರ್ಮಿಸಲಾಗಿದೆ. ಆದರೆ ಪ್ರಾಣಿಗಳು ಬಂದು ಹೋಗಲು ಅವಕಾಶ ನೀಡಲು ದಕ್ಷಿಣ ಭಾಗದಲ್ಲಿ ಬೇಲಿ ನಿರ್ಮಿಸಿಲ್ಲ ಎಂಬುದು ಗೊತ್ತಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಪ್ರಾಣಿಗಳಿಂದ ಅಟ್ಟಹಾಸ:
ಕೀನ್ಯಾದಲ್ಲಿ ಸಿಂಹಗಳು ಜನರ ಮೇಲೆ ದಾಳಿ ಮಾಡುತ್ತಿರುವುದು ಇದು ಮೊದಲೇನಲ್ಲ. ವಿಶೇಷವಾಗಿ ಆಹಾರಕ್ಕಾಗಿ ಹೊರ ಬರುವ ಈ ಪ್ರಾಣಿಗಳು ಮಾನವನ ಮೇಲೆ ದಾಳಿ ಮಾಡಲು ಮುಂದಾಗುತ್ತವೆ. ಕಳೆದ ವರ್ಷ ಮೃಗಾಲಯದ ಪಕ್ಕದ ಮನೆಯಲ್ಲಿ ಸಿಂಹವೊಂದು ದೊಡ್ಡ ಬಿಳಿ ನಾಯಿಯನ್ನು ಕೊಲ್ಲುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆನೆ ಮೇರೆ ಕಾಡಿನಲ್ಲಿ ಮೇಯುತ್ತಿದ್ದಾಗ ಒಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿ, ಆತನ ಎದೆಗೆ ಗಾಯಗೊಳಿಸಿದ್ದಾಗಿ ತಿಳಿದು ಬಂದಿತ್ತು. ನಂತರ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪ್ರಾಣ ಕಳೆದುಕೊಂಡರು
