ಮದುವೆಗೆ ನಿರಾಕರಿಸಿದ ಯುವತಿ ಕಿಡ್ನ್ಯಾಪ್: ಮಾರಕಾಸ್ತ್ರ ಸಮೇತ ಅಪಹರಿಸಿದ್ದ ಐವರು ಆರೋಪಿಗಳು 12 ಗಂಟೆಯಲ್ಲಿ ಬೆಂಗಳೂರಿನಲ್ಲಿ ಬಂಧನ

ಬೆಂಗಳೂರು: ಮದುವೆಗೆ ನಿರಾಕರಿಸಿದ್ದ ಯುವತಿಯನ್ನ ಕಿಡ್ನ್ಯಾಪ್ ಮಾಡಿದ್ದ ಐವರವನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ರಂಗನಾಥ್, ರಾಜೇಶ್, ಚಂದನ್, ಶ್ರೇಯಸ್, ಮಂಜುನಾಥ್ ಬಂಧಿತರು. ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ಯುವತಿ ಕುಟುಂಬಸ್ಥರು ದೂರು ನೀಡಿದ್ದರು. ಸದ್ಯ ಯುವತಿ ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ನಡೆದದ್ದೇನು?
ಕಿಡ್ನ್ಯಾಪ್ ಆಗಿದ್ದ ಯುವತಿಗೆ ಆರೋಪಿ ರಂಗನಾಥ್ ಪರಿಚಯವಿದ್ದ. ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಕೊಲೆ ಕೇಸ್ಯೊಂದರಲ್ಲಿ ಜೈಲಿಗೂ ಹೋಗಿದ್ದ. ಜೈಲಿನಿಂದ ಬಂದ ಬಳಿಕ ಮದುವೆಯಾಗಲು ಯುವತಿಗೆ ಒತ್ತಡ ಹಾಕಿದ್ದ. ಮನೆ ಬಳಿ ಕೂಡ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಮದುವೆ ಮಾಡಿಕೊಡಲು ಯುವತಿಯ ಕುಟುಂಬಸ್ಥರು ನಿರಾಕರಿಸಿದ್ದರು.
ಇದರಿಂದ ರಂಗನಾಥ್ ಕೆರಳಿದ್ದ. ತನ್ನ ಗ್ಯಾಂಗ್ಯೊಂದಿಗೆ ಚಿಕ್ಕಲ್ಲಸಂದ್ರದಲ್ಲಿ ವಾಸವಿದ್ದ ಯುವತಿಯನ್ನು ಬುಧವಾರ ಮನೆ ಬಳಿಯೇ ತೆರಳಿ ರಂಗನಾಥ್ ಆ್ಯಂಡ್ ಗ್ಯಾಂಗ್ ಮಾರಕಾಸ್ತ್ರ ಸಮೇತ ಆಟೋ, ಬೈಕ್ನಲ್ಲಿ ಬಂದು ಕಿಡ್ನ್ಯಾಪ್ ಮಾಡಿದ್ದರು.
12 ಗಂಟೆಯೊಳಗೆ ಆರೋಪಿಗಳ ಬಂಧನ
ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ಯುವತಿ ಕುಟುಂಬಸ್ಥರು ದೂರು ನೀಡಿದ್ದರು. ಸದ್ಯ ಯುವತಿಯನ್ನು ರಕ್ಷಿಸಿ ಕಿಡ್ನ್ಯಾಪ್ ಮಾಡಿದ್ದ 12 ಗಂಟೆಯೊಳಗೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಹಾಡಹಗಲೇ ಗುತ್ತಿಗೆದಾರನ ಅಪಹರಣ
ಹುಬ್ಬಳ್ಳಿ ನಗರದಲ್ಲಿ ಶುಕ್ರವಾರ ಹಾಡಹಗಲೇ ಸಿವಿಲ್ ಗುತ್ತಿಗೆದಾರನ ಅಪಹರಣ ಮಾಡಿರುವಂತಹ ಘಟನೆ ನಡೆದಿದೆ. ಹುಬ್ಬಳ್ಳಿ ನಗರದ ನಿವಾಸಿ ಮೋಹನ್ ಚೌಹಾನ್ ಅಪಹರಣಕ್ಕೊಳಗಾದ ಗುತ್ತಿಗೆದಾರ. ಮೋಹನ್ ಚೌಹಾನ್, ಧಾರವಾಡ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಅನೇಕ ಜಿಲ್ಲೆಗಳಲ್ಲಿ ರಸ್ತೆ, ಸರ್ಕಾರಿ ಕಚೇರಿ ಸೇರಿದಂತೆ ಅನೇಕ ಸಿವಿಲ್ ಕಾಮಗಾರಿಗಳನ್ನು ಮಾಡಿದ್ದು, ಉತ್ತಮ ಹೆಸರು ಸಂಪಾದಿಸಿದ್ದ
ಆದರೆ ನಿನ್ನೆ ಮಧ್ಯಾಹ್ನ ಹನ್ನೆರಡು ಮೂವತ್ತರ ಸಮಯದಲ್ಲಿ, ಹುಬ್ಬಳ್ಳಿ ನಗರದ ತೋಳನಕೆರೆ ಸಮೀಪದಲ್ಲಿರುವ ತಮ್ಮ ಕಚೇರಿಯಲ್ಲಿ ಕೂತಿದ್ದಾಗ ಮೋಹನ್ ಚೌಹಾನ್ ರನ್ನು ಅಪಹರಣ ಮಾಡಲಾಗಿತ್ತು. ಕಾರ್ ಮತ್ತು ಕ್ರೂಸರ್ನಲ್ಲಿ ಬಂದಿದ್ದ ಹದಿನೈದಕ್ಕೂ ಹೆಚ್ಚು ದುಷ್ಕರ್ಮಿಗಳು, ಮೋಹನ್ ಅವರ ಕಚೇರಿಗೆ ನುಗ್ಗಿ, ಅಲ್ಲಿನ ಸಿಬ್ಬಂದಿಗೆ ಬೆದರಿಕೆ ಹಾಕಿ, ಮೋಹನ್ ಚೌಹಾನ್ ನನ್ನು ಸಿನಿಮಾ ಶೈಲಿಯಲ್ಲಿ ಎತ್ತಿಕೊಂಡು ಎಸ್ಕೇಪ್ ಆಗಿದ್ದರು. ಬಿಡಿಸಲು ಹೋದವರ ಮೇಲೆ ಕೂಡ ಅಟ್ಯಾಕ್ ಮಾಡಿದ್ದರು.