Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಾಜಾ: ಯುದ್ಧಭೀಡಿತ ಜನಜೀವನ, ಅಗತ್ಯ ವಸ್ತುಗಳ ದುಬಾರಿ ಬೆಲೆಗಳಿಂದ ಸಂಕಷ್ಟದಲ್ಲಿ ಜನರು

Spread the love

Food security in Gaza 'at risk of worsening,' UN warns

ಗಾಜಾ: ಯುದ್ಧಪೀಡಿತಾ ಗಾಜಾದಲ್ಲಿ ಹಬ್ಬದ ದಿನವೂ ಜನರು ಸಂತಸದಿಂದ ತಮ್ಮ ಕುಟುಂಬಗಳೊಂದಿಗೆ ಪ್ರತಿ ವರ್ಷದಂತೆ ಹಬ್ಬವನ್ನಾಚರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಲ್ಲಿ ಮಾರಾಟವಾಗುತ್ತಿರುವ ಅಗತ್ಯ ವಸ್ತುಗಳು ಕೂಡಾ ಅತ್ಯಂತ ದುಬಾರಿಯಾಗಿದ್ದು, ಜನರ ಕೈಗೆಟಕುವುದೇ ಅಸಾಧ್ಯವಾಗುತ್ತಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋ ಗಾಜಾ ಜನರ ಸ್ಥಿತಿ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದನ್ನು ಪರೋಕ್ಷವಾಗಿ ತೋರಿಸಿದೆ. ವ್ಯಕ್ತಿಯೊಬ್ಬರು ಪಾರ್ಲೆ-ಜಿ ಬಿಸ್ಕತ್ತಿನ ಪೊಟ್ಟಣವನ್ನು ಮಗುವಿಗೆ ನೀಡುತ್ತಿರುವುದು, ಹಾಗೂ ಮಗು ಆ ಬಿಸ್ಕತ್ತಿನ ಪೊಟ್ಟಣವನ್ನು ಖುಷಿಯಿಂದ ಸ್ವೀಕರಿಸುವುದು ಕಂಡುಬಂದಿತ್ತು. ಅಸಲಿಗೆ ಮಗು ಅದೆಷ್ಟೋ ದಿನಗಳ ಬಳಿಕ ಬಿಸ್ಕತ್ತಿನ ಪ್ಯಾಕೆಟ್‌ ಅನ್ನು ನೋಡಿತ್ತು. ಏಕೆಂದರೆ ಗಾಜಾದಲ್ಲಿ 5 ರೂ. ಬೆಲೆಯ ಬಿಸ್ಕತ್ತು ಕೂಡಾ ಸಾವಿರಾರು ರೂ.ಗೆ ಮಾರಾಟವಾಗುತ್ತಿದೆ.

ಈ ವಿಡಿಯೋ ವೈರಲ್‌ ಆದ ಬಳಿಕ ಗಾಜಾದಲ್ಲಿ ಯಾವ್ಯಾವ ಅಗತ್ಯ ವಸ್ತುಗಳು ಎಷ್ಟೆಷ್ಟು ಬೆಲೆಗೆ ಮಾರಾಟವಾಗುತ್ತಿದೆ ಎನ್ನುವುದನ್ನು ಎನ್‌ಡಿಟಿವಿ ಪಟ್ಟಿ ಮಾಡಿದೆ. ಅವುಗಳವಿವರ ಇಲ್ಲಿದೆ.

1 ಲೀಟರ್ ಅಡುಗೆ ಎಣ್ಣೆ- 170 ಶೆಕೆಲ್ (ಸುಮಾರು 4,177 ರೂ.)
1 ಕಿಲೋಗ್ರಾಂ ಸಕ್ಕರೆ- 200 ಶೆಕೆಲ್ (ಸುಮಾರು 4,914 ರೂ.)
1 ಕಿಲೋಗ್ರಾಂ ಹಾಲಿನ ಪುಡಿ- 35 ಶೆಕೆಲ್ (ಸುಮಾರು 860 ರೂ.)
1 ಕಿಲೋಗ್ರಾಂ ಹಿಟ್ಟು- 60 ಶೆಕೆಲ್ (ಸುಮಾರು 1,474 ರೂ.)
1 ಕಿಲೋಗ್ರಾಂ ಉಪ್ಪು- 20 ಶೆಕೆಲ್ (ಸುಮಾರು 491 ರೂ.)
1 ಕಿಲೋಗ್ರಾಂ ಬೆಂಡೆಕಾಯಿ- 45 ಶೆಕೆಲ್ (ಸುಮಾರು 1,106 ರೂ.)
1 ಕಿಲೋಗ್ರಾಂ ಬಾತುಕೋಳಿ ಮಾಂಸ- 30 ಶೆಕೆಲ್ (ಸುಮಾರು 737 ರೂ.)
1 ಕಿಲೋಗ್ರಾಂ ಟೊಮೆಟೊ- 45 ಶೆಕೆಲ್ (ಸುಮಾರು 1,106 ರೂ.)
1 ಕಿಲೋಗ್ರಾಂ ಈರುಳ್ಳಿ- 180 ಶೆಕೆಲ್ (ಸುಮಾರು 4,423 ರೂ.)
1 ಕಿಲೋಗ್ರಾಂ ಆಲೂಗಡ್ಡೆ- 80 ಶೆಕೆಲ್ (ಸುಮಾರು 1,966 ರೂ.)
1 ಕಿಲೋಗ್ರಾಂ ಬದನೆಕಾಯಿ- 35 ಶೆಕೆಲ್ (ಸುಮಾರು 860 ರೂ.)
1 ಕಿಲೋಗ್ರಾಂ ನಿಂಬೆಹಣ್ಣು: 60 ಶೆಕೆಲ್ (ಅಂದಾಜು 1,474 ರೂ.)
1 ಕಿಲೋಗ್ರಾಂ ಬೇಳೆ- 35 ಶೆಕೆಲ್ (ಅಂದಾಜು 860 ರೂ.)
1 ಕಪ್ ಕಾಫಿ- 180 ಶೆಕೆಲ್ (ಅಂದಾಜು 4,423 ರೂ.)
1 ಬಾಕ್ಸ್ ಮೇಕೆ ಮಾಂಸ- 200 ಶೆಕೆಲ್ (ಅಂದಾಜು 4,914 ರೂ.)


Spread the love
Share:

administrator

Leave a Reply

Your email address will not be published. Required fields are marked *