Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗೌರಿಯೇ ನನ್ನ ಮೂರನೇ ಪತ್ನಿ: ಬೆಂಗಳೂರು ಮೂಲದ ಹುಡುಗಿ ಜೊತೆಗಿನ ಸಂಬಂಧದ ಬಗ್ಗೆ ಆಮೀರ್ ಖಾನ್ ಸ್ಪಷ್ಟನೆ!

Spread the love

ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ.

ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.

ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ಆ ನಂತರ ಮತ್ತೆ ಮದುವೆಯಾಗುತ್ತಾರೆ. ಉದಾಹರಣೆಗೆ ಆಮಿರ್ ಖಾನ್.

ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಕೆಲ ದಿನಗಳಿಂದ ಆಮಿರ್ ಖಾನ್ ಸದ್ಯ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಜೊತೆ ಪ್ರೇಮ ಗೀತೆ ಹಾಡುತ್ತಾ ನೆಮ್ಮದಿಯಾಗಿದ್ದಾರೆ. ಆಮಿರ್ ಖಾನ್ ಹೃದಯ ಕದ್ದ ಚಂದ್ರಚಕೋರಿ ಬೆಂಗಳೂರಿನವರು ಎನ್ನುವುದು ಕೂಡ ಜಗಜ್ಜಾಹೀರಾಗಿದೆ. ಆ ಚೆಲುವೆಯ ಹೆಸರು ಗೌರಿ ಎಂದು ಕೂಡ ಎಲ್ಲರಿಗೆ ಗೊತ್ತಾಗಿದೆ.

ಆದರೆ ಇದೇ ಗೌರಿಯ ಜೊತೆ ಆಮಿರ್ ಖಾನ್ ಮದುವೆಯಾಗಿದ್ದಾರೆ ಎನ್ನುವುದು ಅನೇಕರಿಗೆ ಗೊತ್ತಿರಲಿಲ್ಲ. ಈ ವಿಚಾರವನ್ನು ಆಮಿರ್ ಖಾನ್ ಸದ್ಯ ಹೇಳಿದ್ದಾರೆ.

ಹೌದು, ಅಸಲಿಗೆ ತಮ್ಮ ಸಿತಾರೆ ಜಮೀನ್ ಪರ್ ಚಿತ್ರ ಗೆದ್ದ ಖುಷಿಯಲ್ಲಿ ಆಮಿರ್ ಖಾನ್ ”ದಿ ಇಂಡಿಯನ್ ಎಕ್ಸ್‌ಪ್ರೆಸ್‌”ನ ‘ಸ್ಕ್ರೀನ್ಸ್‌’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಹಲವಾರು ವಿಚಾರಗಳ ಕುರಿತು ಮಾತನಾಡಿರುವ ಆಮಿರ್ ಖಾನ್ ಗೌರಿ ಮತ್ತು ತಮ್ಮ ಸಂಬಂಧದ ಕುರಿತು ಕೂಡ ಮಾತನಾಡಿದ್ದಾರೆ. ನಾನು ಈಗಾಗಲೇ ಗೌರಿಯನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಆಮಿರ್ ಖಾನ್, ಸಂಬಂಧದ ವಿಚಾರದಲ್ಲಿ ನಾನು ಮತ್ತು ಗೌರಿ ತುಂಬಾನೇ ಗಂಭೀರವಾಗಿದ್ದೇವೆ ಎಂದು ಹೇಳಿದ್ದಾರೆ. ಈ ಸಂಬಂಧ ಮುಂದುವರೆಸುವ ಬದ್ಧತೆ ಇಬ್ಬರಲ್ಲಿಯೂ ಇದೆ ಎಂದು ಹೇಳಿರುವ ಆಮಿರ್ ಖಾನ್, ನಾವು ಇಬ್ಬರು ಜೊತೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.

ಮುಂದುವರೆದು ಗೌರಿಯನ್ನು ನಾನು ಮನಃಪೂರ್ವಕವಾಗಿ ನನ್ನ ಪತ್ನಿ ಎಂದು ಅಂದುಕೊಂಡಿದ್ದೇನೆ ಎಂದು ಹೇಳಿರುವ ಆಮಿರ್ ಖಾನ್, ನಾನು ಈಗಾಗಲೇ ಗೌರಿ ನನ್ನ ಪತ್ನಿಯೆಂದು ಅಂದುಕೊಂಡಿದ್ದೇನೆ.. ನಿಮ್ಮೆಲ್ಲರ ಎದುರು ಔಪಚಾರಿಕವಾಗಿ ನಾವು ಮದುವೆಯಾಗಬೇಕಾ.. ಬೇಡವಾ ಎನ್ನುವ ಗೊಂದಲ ನನ್ನದು ಎಂದು ಹೇಳಿದ್ದಾರೆ. ಈ ವಯಸ್ಸಿನಲ್ಲಿ ಅಧಿಕೃತವಾಗಿ ಮದುವೆಯಾಗಬೇಕಾ ಬೇಡ್ವಾ ಎನ್ನುವ ಪ್ರಶ್ನೆ ಇಬ್ಬರಲ್ಲಿಯೂ ಇದೆ ಅದಕ್ಕೆ ಉತ್ತರ ಆದಷ್ಟು ಬೇಗ ಕೊಡುವುದಾಗಿ ಕೂಡ ಹೇಳಿದ್ದಾರೆ.

ಆಮಿರ್ ಖಾನ್ ಅವರ ಈ ಮಾತುಗಳನ್ನು ಕೇಳಿದ ಅನೇಕರು, ಸದ್ಯ ಆಮಿರ್ ಖಾನ್ ಅವರಿಗೆ ಅಧಿಕೃತವಾಗಿ ಮದುವೆಯಾಗುವಂತೆ ಸಲಹೆ ನೀಡುತ್ತಿದ್ದಾರೆ. ಮೂರನೇ ಮದುವೆಯಾಗಿದ್ದೀರಾ ಆದರೆ ಸಮಾಜದ ಎದುರಲ್ಲ ಹೀಗಾಗಿ ನಿಮ್ಮ ಬದುಕಿನಲ್ಲಿ ಬಂದ ಗೌರಿ ಯಾರು ಎನ್ನುವ ಪ್ರಶ್ನೆ ಎದ್ದೇಳುತ್ತೆ, ಈ ಕಾರಣಕ್ಕಾದರೂ ನೀವು ಮದುವೆಯಾಗಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನುಳಿದಂತೆ ಇದೇ ಸಂದರ್ಶನದಲ್ಲಿ ಆಮಿರ್ ಖಾನ್ ತಮ್ಮ ಮುಂಬರುವ ಚಿತ್ರಗಳ ಕುರಿತು ಕೂಡ ಮಾತನಾಡಿದ್ದಾರೆ. ಮಹಾಭಾರತ ಚಿತ್ರವನ್ನು ಮಾಡುವುದಾಗಿ ಕೂಡ ಇನ್ನೊಮ್ಮೆ ಘೋಷಿಸಿದ್ದಾರೆ. ಮಹಾಭಾರತ ಚಿತ್ರದ ಕೆಲಸಗಳು ನಡೆಯುತ್ತಿವೆ, ಮಹಾಭಾರತ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಮಹಾಕಾವ್ಯ ಹೀಗಾಗಿ ಆ ವಿಷಯವನ್ನು ಹೇಳದೇ ನಾನು ಇರಲಾರೆ ಎಂದು ಹೇಳಿದ್ದಾರೆ. ನನ್ನ ಕನಸಿನ ಮಹಾಭಾರತಕ್ಕೆ ನಾನು ಹೊಸ ಮುಖಗಳ ಹುಡುಕಾಟ ನಡೆಸಿದ್ದೇನೆ ಎಂದು ಕೂಡ ಆಮಿರ್ ಖಾನ್ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *