ಸಿಡ್ನಿಯಲ್ಲಿ ಅನಿಲ ಸೋರಿಕೆ: ರೆಸ್ಟೋರೆಂಟ್‌ನಲ್ಲಿ ಒಬ್ಬ ಸಾವು, ಹಲವರಿಗೆ ಗಾಯ

ಸಿಡ್ನಿ: ಮಂಗಳವಾರ ಸಿಡ್ನಿಯ ವಾಯುವ್ಯದಲ್ಲಿರುವ ರೆಸ್ಟೋರೆಂಟ್ನಲ್ಲಿ ಅನಿಲ ಸೋರಿಕೆಯಾಗಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ

ವರದಿಗಳ ಪ್ರಕಾರ, ರಿವರ್ಸ್ಟೋನ್ನಲ್ಲಿರುವ ಹವೇಲಿ ಇಂಡಿಯನ್ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿದೆ.
ರೆಸ್ಟೋರೆಂಟ್ನಲ್ಲಿ ಅನಿಲ ಸೋರಿಕೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿವೆ. ಆಸ್ಪತ್ರೆಗೆ ದಾಖಲಾದ ಏಳು ಜನರಲ್ಲಿ ಐವರು ಪೊಲೀಸ್ ಅಧಿಕಾರಿಗಳು ಎಂದು ವರದಿಯಾಗಿದೆ. ಈ ಘಟನೆ ಬೆಳಿಗ್ಗೆ 9 ರಿಂದ 9:30 ರ ನಡುವೆ ನಡೆದಿದೆ. ಅನಿಲ ಸೋರಿಕೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
