Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳಗಾವಿಯಲ್ಲಿ 15 ವರ್ಷದ ಬಾಲಕಿಗೆ ಸಾಮೂಹಿಕ ಅತ್ಯಾಚಾರ: ಮೂವರು ಅಪ್ರಾಪ್ತರ ವಿರುದ್ಧ ಪೋಕ್ಸೋ ಕೇಸ್

Spread the love

ಬೆಳಗಾವಿ : ಮೂವರು ಅಪ್ರಾಪ್ತ ಬಾಲಕರು ಸೇರಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೆಳಗಾವಿ ನಗರದ ಹೊರವಲಯದ ರೆಸಾರ್ಟ್ ನಲ್ಲಿ ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹೀಗೆ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮನೆಗೆ ತೀರಿದಾಗ ತೀವ್ರ ಹೋಟರ್ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಕೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಆ ನಂತರ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಈ ನೀಚ ಕೃತ್ಯ ಬಯಲಾಗಿದೆ.ಇನ್ನು ಸಾಕೀಬ್ ಸೇರಿದಂತೆ ಇಬ್ಬರು ಅಪ್ರಾಪ್ತರು ಸಾರಿ ಒಟ್ಟು ಮೂವರು ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.

ಈ ಬಾಲಕಿಯ ಸ್ನೇಹಿತ ಮೊದಲಿಗೆ ಆಕೆಯನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದಾನೆ.ಆ ನಂತರ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡಿ ಮೂವರು ಅಪ್ರಾಪ್ತ ಆರೋಪಿಗಳು ಸಾಮೂಹಿಕವಾಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಇನ್ನೂ ವಿಪರಿಯಸ ಅಂದ್ರೆ ಈ ಪ್ರಕರಣದ ಮೂರು ಆರೋಪಿಗಳ ಪೈಕಿ ಪೊಲೀಸ್ ಅಧಿಕಾರಿಯ ಮಗ ಕೂಡ ಶಾಮಿಲಾಗಿದ್ದಾನೆ ಎನ್ನಲಾಗಿದೆ.ಈತನನ್ನು ಹೊರತು ಪಡಿಸಿ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *