Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗದಗ: ಹೋಟೆಲ್‌ನಲ್ಲಿ ಬಿರಿಯಾನಿ ತಿನ್ನಲು ಹೋಗಿದ್ದ ಯುವಕನ ಭೀಕರ ಹತ್ಯೆ

Spread the love

ಗದಗ: ಜಿಲ್ಲೆಯಲ್ಲಿ ಬಿರಿಯಾನಿ ತಿನ್ನಲು ಹೋಟೆಲ್ ಗೆ ತೆರಳಿದಂತ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವಂತ ಘಟನೆ ಗದಗದಲ್ಲಿ ನಡೆದಿದೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಬಿರಿಯಾನಿ ತಿನ್ನೋದಕ್ಕೆ ಬಸವರಾಜ್ ಮಮ್ಮಟಗೇರಿ(22) ಎಂಬ ಯುವಕ ತೆರೆಳಿದ್ದನು. ತಾಜ್ ಹೋಟೆಲ್ ಗೆ ಬಿರಿಯಾನಿ ತಿನ್ನಲು ತೆರಳಿದ್ದಂತ ಬಸವರಾಜ್ ಮಮ್ಮಟಗೇರಿಯನನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ತೆರಳಿಂದಂತ ಮೂವರು ಕಣ್ಣಿಗೆ ಕಾರದಪುಡಿ ಎರಚಿದ್ದಾರೆ.

ಆ ಬಳಿಕ ಮನಸೋ ಇಚ್ಛೆ ಹಲ್ಲೆ ಮಾಡಿ, ಹತ್ಯೆಗೈದು ಪರಾರಿಯಾಗಿದ್ದಾರೆ.

ಮಮ್ಮಟಗೇರಿಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ನರಗುಂದ ಡಿವೈಎಸ್ಪಿ ಪ್ರಭು ಭೇಟಿ ನೀಡಿ, ಪರಿಶೀಲಿಸಿದರು. ಈ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *