Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಹಾರ ಲೇಬಲ್‌ನಲ್ಲಿ ‘ಶೇ. 100ರಷ್ಟು’ ಪದ ಬಳಕೆ ತಡೆಯಲು ಎಫ್‌ಎಸ್‌ಎಸ್‌ಎಐ ಸೂಚನೆ

Spread the love

ಹೈದರಾಬಾದ್: ಆಹಾರದ ಲೇಬಲ್, ಪ್ಯಾಕೇಜ್ ಹಾಗೂ ಜಾಹೀರಾತುಗಳಲ್ಲಿ ”ಶೇ. 100ರಷ್ಟು” ಎಂಬ ಪದ ಬಳಸಬಾರದು. ಈ ರೀತಿಯ ಪದ ಗ್ರಾಹಕರ ದಾರಿ ತಪ್ಪಿಸಬಹುದು ಎಂದು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಉತ್ಪಾದನಾ ಕಂಪೆನಿಗಳಿಗೆ ಗುರುವಾರ ಸಲಹೆ ನೀಡಿದೆ.

ಶೇ. 100ರಷ್ಟು” ಎಂಬ ಪದ 2006ರ ಆಹಾರ ಭದ್ರತೆ ಹಾಗೂ ಗುಣಮಟ್ಟ (ಎಫ್‌ಎಸ್‌ಎಸ್) ಕಾಯ್ದೆ ಅಡಿಯಲ್ಲಿ ಯಾವುದೇ ರೀತಿಯಲ್ಲಿ ವ್ಯಾಖ್ಯಾನವನ್ನು ಹೊಂದಿಲ್ಲ ಎಂದು ಮೇ 28ರ ದಿನಾಂಕದ ಸಲಹೆಯಲ್ಲಿ ಪ್ರಾಧಿಕಾರ ತಿಳಿಸಿದೆ. ಲೇಬಲ್ ಹಾಗೂ ಜಾಹೀರಾತುಗಳಲ್ಲಿ ಈ ಪದವನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅದು ಹೇಳಿದೆ.

”ಶೇ. 100ರಷ್ಟು” ಪದವನ್ನು ಪ್ರತ್ಯೇಕವಾಗಿ ಅಥವಾ ಇತರ ಕೆಲವು ಅಂಶಗಳೊಂದಿಗೆ ಬಳಸಿದರೆ, ಇದು ಅತ್ಯಂತ ಶುದ್ಧ ಅಥವಾ ಪರಿಪೂರ್ಣ ಗುಣಮಟ್ಟದ್ದು ಎಂಬ ಗ್ರಹಿಕೆಗೆ ಕಾರಣವಾಗಬಹುದು. ಆ ಮೂಲಕ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿರುವ ಇತರ ವಸ್ತುಗಳು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬ ಭಾವನೆ ಗ್ರಾಹಕರಲ್ಲಿ ಮೂಡಬಹುದು ಎಂದು ಸಲಹೆ ತಿಳಿಸಿದೆ.

ಪ್ರಾಧಿಕಾರದ ಈ ನಡೆಯನ್ನು ಲೇಬಲ್ ಹಾಗೂ ಜಾಹೀರಾತುಗಳ ಮೂಲಕ ಆಹಾರ ಉತ್ಪನ್ನಗಳ ದಾರಿತಪ್ಪಿಸುವ ಪ್ರಚಾರವನ್ನು ನಿಗ್ರಹಿಸುವಲ್ಲಿನ ಪ್ರಮುಖ ಹೆಜ್ಜೆ ಎಂದು ಪರಿವೀಕ್ಷಕರು ಪರಿಗಣಿಸಿದ್ದಾರೆ. ಆಹಾರದ ಲೇಬಲ್‌ಗಳ ಮೇಲೆ ‘ಶೇ. 100ರಷ್ಟು’ ಪದ ಬಳಕೆಗೆ ಸಂಬಂಧಿಸಿ ದಿಲ್ಲಿ ಉಚ್ಚ ನ್ಯಾಯಾಲಯದ ಮುಂದೆ ಎಫ್‌ಎಸ್‌ಎಸ್‌ಎಐ ತನ್ನ ಹಿಂದಿನ ನಿಲುವಿನ ಹಿನ್ನೆಲೆಯಲ್ಲಿ ಈ ಸಲಹೆ ಹೊರಬಿದ್ದಿದೆ.

”ಶೇ. 100ರಷ್ಟು ಹಣ್ಣಿನ ರಸ” ಎಂಬ ಪ್ರತಿಪಾದನೆಯನ್ನು ಎಫ್‌ಎಸ್‌ಎಸ್‌ಐ ನಿಷೇಧಿಸಿರುವುದನ್ನು ಪ್ರಶ್ನಿಸಿ ಡಾಬರ್ ಕಂಪೆನಿ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿತ್ತು.


Spread the love
Share:

administrator

Leave a Reply

Your email address will not be published. Required fields are marked *