ನಿರಂತರ ಸಮಾಜಸೇವೆಯ ಫಲ: ಪ್ರಮೋದ್ ಉಚ್ಚಿಲ್ ಅವರಿಗೆ “ಸಮಾಜ ಸೇವಾ ಡಾಕ್ಟರೇಟ್” ಗೌರವ

ಕಳೆದ ಹಲವು ದಶಕಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪ್ರಮೋದ್ ಉಚ್ಚಿಲ್ ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಾಗಿದೆ. “ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ (ASIA International Culture Research University)” ಆಡಳಿತ ಮಂಡಳಿಯು ಅವರಿಗೆ ದಿನಾಂಕ 28.03.2026 ರಂದು ಪ್ರತಿಷ್ಠಿತ “ಸಮಾಜ ಸೇವಾ ಡಾಕ್ಟರೇಟ್” ಪದವಿಯನ್ನು ನೀಡಿ ಗೌರವಿಸಿತು. ಪ್ರಮೋದ್ ಅವರ ಸುದೀರ್ಘ ಸಾಮಾಜಿಕ ಕಾಳಜಿಗೆ ಈ ಗೌರವವು ಮೈಲಿಗಲ್ಲಾಗಿ ಒಲಿದುಬಂದಿದೆ.
