Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗೋಲ್ಗಪ್ಪ ಮಾರಾಟದಿಂದ ಇಸ್ರೋವರೆಗೆ: ರಾಮದಾಸ್‌ ಅವರ ಯಶಸ್ಸಿನ ಸ್ಫೂರ್ತಿದಾಯಕ ಪಯಣ

Spread the love

ಮುಂಬೈ: ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಖೈರ್‌ಬೋಡಿ ಗ್ರಾಮದ ರಾಮದಾಸ್ ಹೇಮರಾಜ್ ಮಾರ್ಬಡೆ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ. ದೃಢನಿಶ್ಚಯ, ತನ್ನ ಮೇಲಿನ ನಂಬಿಕೆ ಮತ್ತು ಕಠಿಣ ಪರಿಶ್ರಮದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಟೆಕ್ನಿಯನ್ ಆಗಿ ಆಯ್ಕೆಯಾಗಿದ್ದಾರೆ

ಹಳ್ಳಿಯಿಂದ ಹಳ್ಳಿಗೆ ಹೋಗುತ್ತಾ ಗೋಲ್ಗಪ್ಪ ಮಾರಾಟ ಮಾರುತ್ತಿದ್ದ ರಾಮದಾಸ್ ಕಥೆಯೇ ಬಲುರೋಚಕ.

ಹಗಲಿನಲ್ಲಿ ಗೋಲ್ಗಪ್ಪ ಮಾರಾಟ, ರಾತ್ರಿ ಓದು: ರಾಮದಾಸ್ ತಂದೆ ಭಂಡಾರ ಜಿಲ್ಲೆಯ ಡೊಂಗರ್‌ಗಾಂವ್ ಜಿಲ್ಲಾ ಪರಿಷತ್ ಶಾಲೆಯಲ್ಲಿ ಪ್ಯೂನ್ ಆಗಿದ್ದರು. ತಾಯಿ ಗೃಹಿಣಿ. ರಾಮದಾಸ್ ಗುಮಾಧವಾಡದ ಗಣೇಶ ಪ್ರೌಢಶಾಲೆಯಿಂದ ಮತ್ತು ತಿರೋಡಾದ ಸಿ.ಜಿ. ಪಟೇಲ್ ಕಾಲೇಜಿನಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದರು. ಬಳಿಕ ಓದಿಗೆ ಹಣಕಾಸಿನ ಕೊರತೆ ಎದುರಾಗಿತ್ತು. ಆದರೂ, ರಾಮದಾಸ್ ನಾಸಿಕ್‌ನ ವೈಸಿಎಂ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ತನ್ನ ಕುಟುಂಬವನ್ನು ಪೋಷಿಸಲು ಮತ್ತು ಶಿಕ್ಷಣಕ್ಕೆ ಹಣಕಾಸು ಒದಗಿಸಲು, ರಾಮದಾಸ್ ಹಗಲಿನಲ್ಲಿ ಗೋಲ್ಗಪ್ಪಗಳನ್ನು ಮಾರಿ ರಾತ್ರಿ ಓದುತ್ತಿದ್ದರು.

ಇಸ್ರೋದಲ್ಲಿ ಕೆಲಸ ಮಾಡುವ ಕನಸು: ರಾಮ್‌ದಾಸ್ ಇಸ್ರೋದಲ್ಲಿ ಕೆಲಸ ಮಾಡುವ ಕನಸು ಕಂಡಿದ್ದರು. ಆದ್ದರಿಂದ ತಿರೋರಾದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐಟಿಐ) ಸೇರಿಕೊಂಡರು. ಪಂಪ್ ಆಪರೇಟರ್-ಕಮ್-ಮೆಕ್ಯಾನಿಕ್ ಕೋರ್ಸ್ ಪೂರ್ಣಗೊಳಿಸಿದರು.

ಇಸ್ರೋದಲ್ಲಿ ಆಯ್ಕೆ: 2023ರಲ್ಲಿ ಇಸ್ರೋ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಕಾಲ್ಫಾರ್ಮ್ ಮಾಡಿತ್ತು. ರಾಮದಾಸ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ರು. 2024 ರಲ್ಲಿ ನಾಗ್ಪುರದಲ್ಲಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 2024ರ ಆಗಸ್ಟ್ 29 ರಂದು ಶ್ರೀಹರಿಕೋಟಾದಲ್ಲಿ ಫಿಸಿಕಲ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಕ್ಕೆ ಇಸ್ರೋ ಆಯ್ಕೆ ಮಾಡಿಕೊಂಡಿತು. 2025 ರ ಮೇ 19 ರಂದು ಶ್ರೀಹರಿಕೋಟಾದಲ್ಲಿರುವ ಇಸ್ರೋದ ಬಾಹ್ಯಾಕಾಶ ಕೇಂದ್ರದಲ್ಲಿ ಪಂಪ್ ಆಪರೇಟರ್-ಕಮ್-ಮೆಕ್ಯಾನಿಕ್ ಆಗಿ ರಾಮದಾಸ್ ಮಾರ್ಬಡೆ ಸೇರಿದ್ದಾರೆ.

ರಾಮದಾಸ್ ಯಶಸ್ಸು ಅವರ ಕುಟುಂಬಕ್ಕೆ ಸಂತೋಷ ತಂದಿದೆ. ಗೊಂಡಿಯಾ ಜಿಲ್ಲೆಗೆ ಹೆಮ್ಮೆ ತಂದಿದೆ. ಗೋಲ್ಗಪ್ಪ ಮಾರಾಟ ಮಾರುತ್ತಿದ್ದವ ಇಸ್ರೋ ತಂತ್ರಜ್ಞರಾಗುವವರೆಗಿನ ಅವರ ಪ್ರಯಾಣ ಅನೇಕರಿಗೆ ಸ್ಫೂರ್ತಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *