Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾರ್ಪೋರೇಟ್ ಜಗತ್ತನ್ನು ಬಿಟ್ಟು ಕಲೆಯತ್ತ ಹೆಜ್ಜೆ: ಅನಿಲ್ ಜಂಗಿಡ್ ಅವರ ಕತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್

Spread the love

ಪ್ರತಿಯೊಬ್ಬರೂ ಕೈತುಂಬಾ ಸಂಬಳ ಸಿಗುವ ಕೆಲಸ ಬೇಕು ಎಂದು ಹಂಬಲಿಸ್ತಾರೆ. ಅದಕ್ಕಾಗಿ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಪಡೆಯಲು ಸಾಕಷ್ಟು ಹರಸಾಹಸ ಮಾಡುವುದುಂಟು. ಆದರೆ ಇಲ್ಲೊಬ್ಬ ವ್ಯಕ್ತಿ ತಿಂಗಳಿಗೆ ಕೋಟಿ ಕೋಟಿ ಸಂಬಳ ಬರುತ್ತಿದ್ದ ಕಾರ್ಪೋರೇಟ್ ಕೆಲಸ ತೊರೆದು ಸಂಗೀತ ಕ್ಷೇತ್ರದೆಡೆಗೆ ಮುಖ ಮಾಡಿದ್ದಾರೆ.

ಸದ್ಯ ಈ ಕುರಿತ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಅಮೆಜಾನ್‌ನಲ್ಲಿ ಮಾಜಿ ಉತ್ಪನ್ನ ವ್ಯವಸ್ಥಾಪಕ ಮತ್ತು ಅಹಮದಾಬಾದ್‌ನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಳೆಯ ವಿದ್ಯಾರ್ಥಿ ಅನಿಲ್ ಜಾಂಗಿಡ್(Anil Jangid) ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅನಿಲ್ ಸಂಗೀತ ಕ್ಷೇತ್ರದಲ್ಲಿ ವೃತ್ತಿಜೀವನ ಮುಂದುವರಿಸಲು ತನಗೆ ಸಿಗುತ್ತಿದ್ದ ಆರು ಅಂಕಿಗಳ ಸಂಬಳ ಮತ್ತು ಸುರಕ್ಷಿತ ಕಾರ್ಪೊರೇಟ್ ಕೆಲಸವನ್ನ ತ್ಯಜಿಸಿದ್ದಾರೆ.

ಅಮೆಜಾನ್‌ನಲ್ಲಿ ಉತ್ಪನ್ನ ವ್ಯವಸ್ಥಾಪಕನಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅನಿಲ್ ತಿಂಗಳಿಗೆ ಕೋಟ್ಯಾಂತರ ರೂಪಾಯಿ ವೇತನವನ್ನು ಪಡೆಯುತ್ತಿದ್ದರು. ಇನ್ನೇನು ಜೀವನ ಸೆಟಲ್ ಅನ್ನುವಷ್ಟರಲ್ಲಿ ಅನಿಲ್ ಕೆಲಸ ತೊರೆದಿದ್ದು, ಸಾಕಷ್ಟು ಜನರಿಗೆ ಶಾಕ್ ನೀಡಿದೆ. ಈ ಕುರಿತು ಅವರ ಸಹೋದ್ಯೋಗಿ ಶ್ರವಣ್ ಟಿಕೂ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

“ಇದು ನನ್ನ ಆತ್ಮೀಯ ಗೆಳೆಯ ಅನಿಲ್ ಜಂಗಿಡ್ ಅವರ ಕಥೆ. ಕೆಲವು ವರ್ಷಗಳ ಹಿಂದೆ ಅವರು ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನಾನು ಅವರನ್ನು ಭೇಟಿಯಾದೆ. ಅವರದ್ದು ಪ್ರತಿಷ್ಠಿತ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯನ್ನು ಹೊಂದಿದ್ದು ಕೈ ತುಂಬಾ ಸಂಬಳವನ್ನೂ ಪಡೆಯುತ್ತಿದ್ದರು. ಆದರೆ ಅವೆಲ್ಲವನ್ನೂ ತೊರೆದು ಸಂಗೀತದಲ್ಲಿ ವೃತ್ತಿಜೀವನವನ್ನು ಮುಂದುವರಿಸಿದ್ದಾರೆ. ನಾವೆಲ್ಲರೂ ಕಲಾವಿದರು ಅಥವಾ ಸ್ವತಃ ತಮ್ಮದೇ ಉದ್ಯಮ ಪ್ರಾರಂಭಿಸುವ ಕನಸು ಕಾಣುತ್ತೇವೆ, ಆದರೆ ಅದನ್ನು ನನಸು ಮಾಡುವುದು ಅಷ್ಟು ಸುಲಭವಲ್ಲ. ಆದರೆ ಅನಿಲ್ ಎಲ್ಲವನ್ನು ತೊರೆದು ಇಂದು ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ” ಎಂದು ಟಿಕು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅನಿಲ್ ಅವರ ಚೊಚ್ಚಲ ಹಾಡು “#SunLoZara” ಬಿಡುಗಡೆಯನ್ನು ಒಳಗೊಂಡಿರುವ ಪೋಸ್ಟ್ ವೈರಲ್ ಆಗಿದೆ. ಲಿಂಕ್ಡ್‌ಇನ್ ಪೋಸ್ಟ್ ಎಲ್ಲೆಡೆ ಗಮನ ಸೆಳೆದಿದ್ದು, ಅನೇಕ ಬಳಕೆದಾರರು ಜಂಗಿಡ್ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *