ಕನ್ನಡಿಗರ ಬಗ್ಗೆ ವಿವಾದದಿಂದ ಹಿಡಿದು ಪ್ಲಾಪ್ ಸಿನಿಮಾ ತನಕ – ಕಮಲ್ ಹಾಸನ್ ಗೆ ಹಿನ್ನಡೆ!
ತಮಿಳು ನಟ ಕಮಲ್ ಹಾಸನ್ ಕಳೆದ ಕೆಲವು ವಾರಗಳಿಂದ ಭಾಷಾ ವಿವಾದದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅಲ್ಲದೆ, ಕನ್ನಡಿಗರ ವಿರೋಧಕ್ಕೆ ಕಾರಣವಾಗಿದ್ದಾರೆ. ಇದರ ಬೆನ್ನಲ್ಲೇ ಇಂದು ತೆರೆಕಂಡ ಥಗ್ ಲೈಪ್ ಸಿನಿಮಾ ಪ್ರೇಕ್ಷಕರಲ್ಲಿ ನಿರಾಸೆ ಹುಟ್ಟಿಸಿದೆ
ಸಿನಿಮಾ ನೋಡಿದವರು ಏನಂದ್ರು ಗೊತ್ತೆ..?
ಹೌದು.. ಹಿರಿಯ ನಿರ್ದೇಶಕ ಮಣಿರತ್ನಂ ನಿರ್ದೇಶನದ ಮತ್ತು ಹಿರಿಯ ನಟ ಕಮಲ್ ಹಾಸನ್ ಹಾಗೂ ಸಿಂಬು ನಟಿಸಿರುವ ಥಗ್ ಲೈಫ್ ಸಿನಿಮಾ ಇಂದು ತೆರೆ ಕಂಡಿದೆ. ಬಹುನಿರೀಕ್ಷೆ ಹೊತ್ತು ಥಿಯೇಟರ್‌ಗೆ ಬಂದ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರಾಸೆ ಮೂಡಿಸಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಥಗ್ ಲೈಫ್ ನೋಡಿದ ಪ್ರೇಕ್ಷಕರು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಹಣ ಹಾಳು ಅಂತ ಹೇಳುತ್ತಿದ್ದಾರೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದ್ದು, ಯುವತಿಯರಿಬ್ಬರು ಕಮಲ್ ಸಿನಿಮಾ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.
ವಿಡಿಯೋದಲ್ಲಿ ಸುದ್ದಿ ವಾಹಿನಿಯೊಂದು ಸಿನಿಮಾದ ಬಗ್ಗೆ ಅಭಿಪ್ರಾಯ ಕೇಳುತ್ತಾರೆ ಆಗ ಯುವತಿಯರು.. ಬಿದ್ದು ಬಿದ್ದು ನಗುತ್ತಾ.. ಸಿನಿಮಾ ಕಥೆ ಚನ್ನಾಗಿಲ್ಲ.. ಯಾರ ಹೆಂಡತಿಯನ್ನು ಯಾರು ಇಟ್ಟುಕೊಳ್ತಾರೆ ಏಕೆ ಇಟ್ಟುಕೊಳ್ತಾರೆ ಅಂತ ಗೊತ್ತಾಗಲ್ಲ.. ಕಮಲ್ ಮತ್ತು ಸಿಂಬು ಅವರ ನಟನೆ ಚನ್ನಾಗಿದೆ ಆದರೆ ಕಥೆ ಚನ್ನಾಗಿಲ್ಲ.. ನಿದ್ದೆ ಬರುತ್ತೆ ಅಂತ ಹೇಳಿದ್ದಾರೆ..
ಅಲ್ಲದೆ, ಕರ್ನಾಟಕದಲ್ಲಿ ಈ ಸಿನಿಮಾ ಬಿಡುಗಡೆಯಾಗದೇ ಇರುವುದು ಕನ್ನಡಿಗರ ಭಾಗ್ಯ ಅಂತ ತಮಿಳಿನ ಅನೇಕ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಕುರಿತು ಹಲವಾರು ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.. ಒಟ್ಟಾರೆಯಾಗಿ ಫುಲ್ ಹೈಪ್‌ನಲ್ಲಿ ಕನ್ನಡದ ಬಗ್ಗೆ ಮಾತನಾಡಿದ್ದ ಕಮಲ್ ಸಿನಿಮಾ ಪ್ಲಾಪ್ ಆಗಿದ್ದಂತೂ ವಿಪರ್ಯಾಸ..