ಸಿನೆಮಾ ವಿಲನ್ ನಿಂದ ಬಿಯರ್ ಸಾಮ್ರಾಜ್ಯದ ರಾಜನಾದ ಈ ಹೀರೋ

ಅನೇಕ ಬಾಲಿವುಡ್ ನಟರು ಆಸ್ತಿ, ಸ್ಟಾರ್ಟ್ ಅಪ್‌ಗಳು ಮತ್ತು ನಿರ್ಮಾಣ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ, ಆದರೆ ಇಂದು ನಾವು 190 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಮತ್ತು ಬ್ರಾಡ್ ಪಿಟ್ ಅವರೊಂದಿಗೆ ಅಂತರರಾಷ್ಟ್ರೀಯ ಯೋಜನೆಯಲ್ಲಿ ಕೆಲಸ ಮಾಡಿರುವ ಖಳನಾಯಕನ (Bollywood Villain) ಬಗ್ಗೆ ಹೇಳುತ್ತಿದ್ದೇವೆ. ಬ್ರೂವರೀಸ್‌ನಲ್ಲಿ ಹೂಡಿಕೆ ಮಾಡಿರುವ ಅವರು ಈಗ ದೇಶದ ಅತಿದೊಡ್ಡ ಬಿಯರ್ ಕಂಪನಿಗಳಲ್ಲಿ ಒಂದನ್ನು ಹೊಂದಿದ್ದಾರೆ. 1971 ರಲ್ಲಿ ಸಿನಿಮಾಗೆ ಪಾದಾರ್ಪಣೆ ಮಾಡಿದ ನಟ
ಇವತ್ತು ನಾವು ಹೇಳುತ್ತಿರುವ ನಟನ ಹೆಸರು ಡ್ಯಾನಿ ಡೆನ್ಜೊಂಗ್ಪಾ (Danny Denzongpa). ಇವರು ನಾರ್ತ್ ಈಸ್ಟ್ ನ ಸಿಕ್ಕಿಂನವರು. ಡ್ಯಾನಿ ಜರೂರತ್ (1971) ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇವರು ಪದ್ಮಶ್ರೀ ಪ್ರಶಸ್ತಿ ವಿಜೇತರು ಕೂಡ ಹೌದು. ಅಷ್ಟೇ ಅಲ್ಲ ಕಳೆದ ಐದು ದಶಕಗಳಿಂದ ಹಿಂದಿ ಚಲನಚಿತ್ರೋದ್ಯಮದ ಅವಿಭಾಜ್ಯ ಅಂಗವಾಗಿದ್ದಾರೆ ಈ ನಟ. ಉತ್ತಮ ವೃತ್ತಿಜೀವನದ ಹೊರತಾಗಿ, ಹಿರಿಯ ನಟ ಯಶಸ್ವಿ ಉದ್ಯಮಿಯೂ ಆಗಿದ್ದು, ಈಶಾನ್ಯ ರಾಜ್ಯಗಳಲ್ಲಿ ಮುಖ್ಯವಾಗಿ ಸಿಕ್ಕಿಂನಲ್ಲಿ ಬಿಯರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಭಾರತದ ಮೂರನೇ ಅತಿದೊಡ್ಡ ಬಿಯರ್ ಕಂಪನಿ
ಡಿಎನ್‌ಎ ವರದಿಯ ಪ್ರಕಾರ, ಡ್ಯಾನಿ ಡೆನ್ಜೊಂಗ್ಪಾ ಒಡೆತನದ ಮೂರು ಬ್ರೂವರೀಸ್‌ಗಳು ವರ್ಷಕ್ಕೆ ಸುಮಾರು 6.8 ಲಕ್ಷ ಎಚ್‌ಎಲ್ ಮದ್ಯವನ್ನು ಉತ್ಪಾದಿಸುತ್ತವೆ. ಯುಕ್ಸಮ್ ಬ್ರೂವರೀಸ್ (Yuksom Breweries) ಭಾರತದ ಮೂರನೇ ಅತಿದೊಡ್ಡ ಬಿಯರ್ ಕಂಪನಿಯಾಗಿದ್ದು, ಪ್ರತಿ ವರ್ಷ ಈಶಾನ್ಯ ಪ್ರದೇಶದ ಆರ್ಥಿಕತೆಗೆ ಸುಮಾರು 100 ಕೋಟಿ ರೂ. ಕೊಡುಗೆ ನೀಡುತ್ತದೆ ಎಂದು ವರದಿ ಹೇಳಿದೆ. 11 ಬಿಯರ್ ಬ್ರಾಂಡ್‌ಗಳ ಮಾಲಿಕ
ಯುಕ್ಸಮ್ ಬ್ರೂವರೀಸ್ 11 ವಿಭಿನ್ನ ಬಿಯರ್ ಬ್ರಾಂಡ್‌ಗಳನ್ನು ಉತ್ಪಾದಿಸುತ್ತವೆ. ಅವುಗಳಲ್ಲಿ ಮುಖ್ಯವಾದುವು ಡ್ಯಾನ್ಸ್‌ಬರ್ಗ್ 16000 (Dansberg 16000), ಜೂಮ್, ಹಿಮಾಲಯನ್ ಬ್ಲೂ. ಈ ಬ್ರಾಂಡ್ ಗಳಿಂದಾಗಿಯೇ ಈ ನಟ / ಬ್ಯುಸಿನೆಸ್ ಮ್ಯಾನ್ ಇಂದು ನೂರಾರು ಕೋಟಿಯ ಒಡೆಯರಾಗಿದ್ದಾರೆ. ನಿವ್ವಳ ಮೌಲ್ಯ 200 ಕೋಟಿಗೂ ಹೆಚ್ಚು
2009 ರಲ್ಲಿ, ಭಾರತದಲ್ಲಿ ಬಿಯರ್ ಮಾರುಕಟ್ಟೆ (beer market) ವೇಗವಾಗಿ ವಿಸ್ತರಿಸುತ್ತಿತ್ತು, ವಿಜಯ್ ಮಲ್ಯ ಅವರ ಯುನೈಟೆಡ್ ಬ್ರೂವರೀಸ್ ಬಹುತೇಕ ಇಡೀ ಭಾರತವನ್ನು ವಶಪಡಿಸಿಕೊಂಡಿತ್ತು. ಮಲ್ಯ ಅವರ ಸ್ವಾಧೀನ ಯೋಜನೆಗಳ ಬಗ್ಗೆ ಕೇಳಿದ ನಂತರ, ಡ್ಯಾನಿ ಸ್ವತಃ ರೈನೋ ಏಜೆನ್ಸೀಸ್ ಅನ್ನು ಖರೀದಿಸಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡರು ಎಂದು MSN ವರದಿ ಮಾಡಿದೆ. ಹಿಂದಿ ಚಿತ್ರರಂಗದ ಶ್ರೇಷ್ಠ ಖಳನಾಯಕರಲ್ಲಿ ಒಬ್ಬರಾದ ಡ್ಯಾನಿ ಡೆನ್ಜೊಂಗ್ಪಾ ಒಬ್ಬ ಯಶಸ್ವಿ ನಟ ಹಾಗೂ ಯಶಸ್ವಿ ಉದ್ಯಮಿ. ಡ್ಯಾನಿ ಭಾರತದ ಮೂರನೇ ಅತಿದೊಡ್ಡ ಬಿಯರ್ ಕಂಪನಿಯಾದ ಯುಕ್ಸಮ್ ಬ್ರೂವರೀಸ್‌ನ ಮಾಲೀಕರು. ಡ್ಯಾನಿ ಅವರ ನಿವ್ವಳ ಮೌಲ್ಯ ಸುಮಾರು $30.4 ಮಿಲಿಯನ್ ಅಂದರೆ ಸುಮಾರು 252 ಕೋಟಿ ರೂ. ಆಗಿದೆ.

