Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಿವಾಳಿಯಿಂದ ಫೀನಿಕ್ಸ್‌ನಂತೆ ಪುನರುತ್ಥಾನ: ಅನಿಲ್ ಅಂಬಾನಿ ಬಿಸಿನೆಸ್ ಜಗತ್ತಿಗೆ ಭರ್ಜರಿ

Spread the love

ನವದೆಹಲಿ: ಮುಕೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಒಂದು ಕಾಲದಲ್ಲಿ ಪೂರ್ಣ ಪಾಪರ್ ಆದಂಥವರು. ದೊಡ್ಡ ದೊಡ್ಡ ಬ್ಯುಸಿನೆಸ್ ಕೈಲಿದ್ದರೂ ದಿವಾಳಿ ಎದ್ದಿದ್ದರು. ಅವರ ಕಥೆ ಮುಗಿದೇ ಹೋಯಿತು ಎಂದುಕೊಂಡು ಕೆಲ ವರ್ಷಗಳೇ ಗತಿಸಿವೆ. ಈಗ ನೋಡನೋಡುತ್ತಿದ್ದಂತೆಯೇ ಅನಿಲ್ ಅಂಬಾನಿ ಬ್ಯುಸಿನೆಸ್ ಸಾಮ್ರಾಜ್ಯ ಬೆಳೆಯತೊಡಗಿದೆ. ಎಲ್ಲವೂ ಕೂಡ ಭಾರೀ ಬ್ಯುಸಿನೆಸ್ ನಡೆಯುವ ಕ್ಷೇತ್ರಗಳೇ. ಒಂದೊಂದೇ ದೃಢ ಹೆಜ್ಜೆ ಇಡುತ್ತಿರುವ ಅನಿಲ್ ಅಂಬಾನಿ ಮತ್ತೆ ವಿಶ್ವದ ಅಗ್ರಮಾನ್ಯ ಶ್ರೀಮಂತರ ಸಾಲಿಗೆ ಸೇರ್ಪಡೆಯಾದರೆ ಅಚ್ಚರಿ ಇಲ್ಲ.

ರಿಲಾಯನ್ಸ್ ಗ್ರೂಪ್​​ನಲ್ಲಿನ ಅವರ ಮೂರು ಕಂಪನಿಗಳ ಷೇರುಗಳು ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಬೇಡಿಕೆ ಪಡೆದಿವೆ. ರಿಲಾಯನ್ಸ್ ಪವರ್, ರಿಲಾಯನ್ಸ್ ಹೋಂ ಫೈನಾನ್ಸ್ ಮತ್ತು ರಿಲಾಯನ್ಸ್ ಇನ್​ಫ್ರಾ ಷೇರುಬೆಲೆ ಹೆಚ್ಚಿದೆ.

ಜರ್ಮನಿಗೆ ಮದ್ದುಗುಂಡು ಸರಬರಾಜು ಮಾಡಲಿರುವ ರಿಲಾಯನ್ಸ್ ಡಿಫೆನ್ಸ್

ರಿಲಾಯನ್ಸ್ ಡಿಫೆನ್ಸ್ ಸಂಸ್ಥೆ ಜರ್ಮನಿಯ ಕಂಪನಿಯೊಂದಕ್ಕೆ ಮದ್ದು ಗುಂಡುಗಳನ್ನು ಸರಬರಾಜು ಮಾಡುವ ಗುತ್ತಿಗೆ ಪಡೆದುಕೊಂಡಿದೆ. ಜರ್ಮನಿಯ ಶಸ್ತ್ರಾಸ್ತ್ರ ತಯಾರಕ ಸಂಸ್ಥೆಯಾದ ರೇನ್​ಮೆಟಾಲ್ ಎಜಿಯೊಂದಿಗೆ ರಿಲಾಯನ್ಸ್ ಡಿಫೆನ್ಸ್ ಈ ಒಪ್ಪಂದ ಮಾಡಿಕೊಂಡಿರುವುದು ಮಹತ್ವದ ಸಂಗತಿ. ಮದ್ದುಗುಂಡುಗಳ ತಯಾರಿಕೆಗೆಂದು ಮಹಾರಾಷ್ಟ್ರದಲ್ಲಿ ಗ್ರೀನ್​​ಫೀಲ್ಡ್ ಘಟಕವನ್ನು ಅನಿಲ್ ಅಂಬಾನಿಯವರು ಸ್ಥಾಪಿಸಲಿದ್ದಾರೆ. ಜರ್ಮನ್ ಕಂಪನಿಯಿಂದ ಬಹಳ ಅಮೂಲ್ಯವಾದ ಕಚ್ಛಾವಸ್ತುಗಳು ಸಿಗಬಹುದು. ಇದು ರಿಲಾಯನ್ಸ್ ಡಿಫೆನ್ಸ್​​ಗೆ ಮತ್ತಷ್ಟು ಯೋಜನೆಗಳನ್ನು ಸೆಳೆಯಲು ಅನುಕೂಲವಾಗಬಹುದು.

ಸೌರಶಕ್ತಿ ನಿಗಮದೊಂದಿಗೆ 25 ವರ್ಷ ಒಪ್ಪಂದ ಮಾಡಿಕೊಂಡ ರಿಲಾಯನ್ಸ್ ಪವರ್

ರಿಲಾಯನ್ಸ್ ಪವರ್​​ನ ಅಂಗಸಂಸ್ಥೆಯಾದ ರಿಲಾಯನ್ಸ್ ಎನ್​​ಯು ಸನ್​​ಟೆಕ್ ಇತ್ತೀಚೆಗೆ ಒಂದು ದೊಡ್ಡ ಒಪ್ಪಂದಕ್ಕೆ ಸಹಿಹಾಕಿತ್ತು. ಭಾರತೀಯ ಸೌರಶಕ್ತಿ ನಿಗಮವಾದ ಎಸ್​​ಇಸಿಐ ಜೊತೆ 25 ವರ್ಷ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಂಡಿದೆ. ಸೌರವಿದ್ಯುತ್ ಅನ್ನು ಸರಬರಾಜು ಮಾಡುವ ಗುತ್ತಿಗೆ ಇದು.

ಸೋಲಾರ್ ಮತ್ತು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಯೋಜನೆ ಇದಾಗಿದ್ದು, ಇಡೀ ಏಷ್ಯಾದಲ್ಲಿ ಒಂದೇ ಸ್ಥಳದಲ್ಲಿ ಇಂಥ ಅತಿದೊಡ್ಡ ಯೋಜನೆ ಇದಾಗಿದೆ. ಮುಂದಿನ ಎರಡು ವರ್ಷದಲ್ಲಿ 10,000 ಕೋಟಿ ರೂ ಹೂಡಿಕೆಯಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ. ಅದಾದ ಬಳಿಕ ಒಂದು ಕೆಡಬ್ಲ್ಯುಎಚ್​​ಗೆ 3.53 ರೂನಂತೆ ಸೌರ ವಿದ್ಯುತ್ ಅನ್ನು ರಿಲಾಯನ್ಸ್ ಸಂಸ್ಥೆ ಮಾರಲಿದೆ.

ಇದರ ಜೊತೆಗೆ ರಿಲಾಯನ್ಸ್ ಇನ್​​ಫ್ರಾ, ರಿಲಾಯನ್ಸ್ ಹೋಮ್ ಫೈನಾನ್ಸ್ ಕಂಪನಿಗಳೂ ಕೂಡ ಮಹತ್ವದ ಪ್ರಾಜೆಕ್ಟ್​​ಗಳನ್ನು ಪಡೆದಿವೆ. ಈ ನಾಲ್ಕು ಕಂಪನಿಗಳು ಅನಿಲ್ ಅಂಬಾನಿ ಅವರನ್ನು ಫೀನಿಕ್ಸ್​​ನಂತೆ ಮೇಲೇರಲು ರೆಕ್ಕೆಗಳನ್ನು ಒದಗಿಸಿವೆ. ಮುಂದಿನ ದಿನಗಳಲ್ಲಿ ಅಣ್ಣ ಮುಕೇಶ್​ರಂತೆ ಅನಿಲ್ ಅಂಬಾನಿಯ ಖದರ್ ಕೂಡ ಹೆಚ್ಚಾಗಬಹುದು.


Spread the love
Share:

administrator

Leave a Reply

Your email address will not be published. Required fields are marked *