ಮನೆಗಳ್ಳನ ಜೊತೆ ಸ್ನೇಹ: ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್, ಪೇದೆ ಅಮಾನತು

ಬೆಂಗಳೂರು: ಕಾಯುವವರೇ, ಕೊಲ್ಲುವವರಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮೂಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಖ್ಯಾತ ಮನೆಗಳ್ಳನ ಜತೆ ಪೊಲೀಪ್ಪನ ಕಳ್ಳಾಟ ಬಯಲಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಹೌದು ಕಳ್ಳನ ಜೊತೆಗೆ ಪೊಲೀಸ್ ರೂಮ್ ಶೇರ್ ಮಾಡಿದ್ದಲ್ಲದೆ ಖಾಕಿ ಬಟ್ಟೆ ಧರಿಸಿ ಕುಖ್ಯಾತ ಮನೆಗಳ್ಳ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ ಈ ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಪೇದೆ ಹೆಚ್ ಆರ್ ಸೋನಾರ್ ನನ್ನು ಅಮಾನತು ಮಾಡಲಾಗಿದೆ.

ಕಳ್ಳತನ ಸೇರಿ ಹಲವಾರು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ ಬಾಂಬೆ ಸಲೀಮ್ @ ಸಲೀಂ, ಜೊತೆ ಸೋನಾರ್ ರೂಮ್ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಸೋನಾರ್ ನ ಪೊಲೀಸ್ ಯೂನಿಫಾರ್ಮ್ ಹಾಕೊಂಡು ಕುಖ್ಯಾತ ಮನೆಗಳ್ಳ ಬಿಟ್ಟಿ ಬಿಲ್ಡಪ್ ತಗೊಂಡಿದ್ದಾನೆ. ಪೊಲೀಸ್ ಡ್ರೆಸ್ಸು ಹ್ಯಾಟು ಹಾಕೊಂಡು ಪತ್ನಿಗೆ ವಿಡಿಯೋ ಕಾಲ್ ಮಾಡಿ ಖಾಕಿ ಬಟ್ಟೆ ಮರ್ಯಾದೆಯನ್ನ ತೆಗೆದಿದ್ದಾನೆ.
ಇಷ್ಟೇಲ್ಲಾ ಮಾಡ್ತಿದ್ರು ಪೇದೆ ಸೋನಾರ್ ಕಣ್ಣಿಗೆ ಕಾಣಲಿಲ್ವ? ಇಲ್ಲ ಸೋನಾರ್ ಮುಂದೆಯೇ ಖಾಕಿ ಬಟ್ಟೆ ತೊಟ್ಟು ಕಳ್ಳನೊಬ್ಬ ಈ ರೀತಿ ಖಾಕಿ ಬಟ್ಟೆ ತೊಟ್ಟು ಪತ್ನಿ ಜೊತೆಗೆ ಲಲ್ಲೆ ಹೊಡಿತಿದ್ರು ಸೋನಾರ್ ಏನ್ ಮಾಡ್ತಿದ್ದ ಅನ್ನೋದನ್ನ ಸೋನಾರ್ ಹೇಳಬೇಕು.
ಬಾಂಬೆ ಸಲೀಮ್ ಪೊಲೀಸ್ರು ಕೈಗೆ ಲಾಕ್ ಆದಾಗ ಸಲೀಮ್ ಮೊಬೈಲ್ ನಲ್ಲಿ ಸೋನಾರ್ ಯೂನಿ ಫಾರ್ಮ್ ಫೋಟೋ ನೋಡಿ ವಿಚಾರಿಸಿದಾಗ ಪೇದೆ ಸೋನಾರ್ ಹಾಗೂ ಬಾಂಬೆ ಸಲೀಮ್ ನ ಸ್ನೇಹ ಬಯಲಾಗಿದೆ. ಇನ್ನೂ ಒಬ್ಬ ಕುಖ್ಯಾತ ಮನೆಗಳ್ಳನ ಜೊತೆಗೆ ಒಬ್ಬ ಪೇದೆ ರೂಮ್ ಶೇರ್ ಮಾಡುವಷ್ಟು ಸ್ನೇಹ ಏನಿದೆ ಅನ್ನೋ ತನಿಖೆ ನಡೆಯಬೇಕಿದೆ. ಸದ್ಯ ಈ ಫೋಟೋ ವೈರಲ್ ಆಗ್ತಿದ್ದಂತೆ ಪೇದೆ ಸೋನಾರ್ ನ ಪೂರ್ವ ವಿಭಾಗ ಡಿಸಿಪಿ ಅಮಾನತ್ತು ಮಾಡಿದ್ದಾರೆ. ಸದ್ಯ ಈ ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
