ಸತ್ತ ಸ್ನೇಹಿತನ ಹೆಣಕ್ಕೆ ಎಣ್ಣೆ-ಸಿಗರೇಟ್ ನೀಡಿದ ಗೆಳೆಯ

ಭಾರತ :ಸ್ನೇಹಿತರು ಇರ್ತಾರೆ ಎನ್ನುವ ಪ್ರಶ್ನೆಯೊಂದು ಕಾಡುವಂತೆ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಂತ್ಯಕ್ರಿಯೆ (funeral )ವೇಳೆಯಲ್ಲಿ ಸತ್ತ ಹೆಣಕ್ಕೆ ಎಣ್ಣೆ (alcohol) ಕುಡಿಸಿ, ಸಿಗರೇಟ್ (cigarettes) ಹೊತ್ತಿಸಿ ಬಾಯೊಳಗೆ ಇಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿ ಯ ಮೃತದೇಹವನ್ನು ಗುಂಡಿಯೊಳಗೆ ಮಲಗಿಸಿ, ಅಲ್ಲೇ ಇದ್ದ ಒಬ್ಬ ಯುವಕನು ಎಣ್ಣೆ ಬಾಟಲಿ ಹಿಡಿದು ಲೋಟಕ್ಕೆ ಎಣ್ಣೆ ಸುರಿಯುತ್ತಿದ್ದಾನೆ. ಕೊನೆಗೆ ಮತ್ತೊಬ್ಬ ಈ ಎಣ್ಣೆಯನ್ನು ಸತ್ತ ವ್ಯಕ್ತಗೆ ಕುಡಿಸಿದ್ದಾನೆ. ತದನಂತರದಲ್ಲಿ ಸಿಗರೇಟ್ ಹೊತ್ತಿಸಿ ಹೆಣದ ಬಾಯಿಗೆ ಇಟ್ಟಿದ್ದಾರೆ.
ವಿಡಿಯೋಗೆ ಈಗಾಗಲೇ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಬಳಕೆದಾರರೊಬ್ಬರು, ‘ನನ್ನ ಸ್ನೇಹಿತ ಸತ್ತರೂ ನಾನು ಹೀಗೆಯೇ ಮಾಡುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇದು ಸಹೋದರತ್ವವಲ್ಲ, ಇದನ್ನು ಮೂರ್ಖತನ ಎಂದು ಕರೆಯಲಾಗುತ್ತದೆ’ ಎಂದಿದ್ದಾರೆ.
ಇನ್ನೊಬ್ಬ ಬಳಕೆದಾರರು, ‘ಈ ರೀತಿಯ ಅಂತ್ಯಸಂಸ್ಕಾರವು ಭಾರತೀಯ ಸಂಸ್ಕೃತಿಯನ್ನು ನಾಶಪಡುತ್ತಿರುವುದರ ಸಂಕೇತವಾಗಿದೆ’ ಎಂದು ಖಾರವಾಗಿ ಹೇಳಿದ್ದಾರೆ. ಮತ್ತೊರ್ವ ಬಳಕೆದಾರರು, ‘ನನ್ನ ಟೈಮ್ಲೈನ್ನಲ್ಲಿ ಈ ವಿಡಿಯೋ ಏಕೆ ಕಾಣಿಸಿಕೊಂಡಿತು ಎಂದು ನನಗೆ ತಿಳಿದಿಲ್ಲ. ಆದರೆ ಸತ್ತ ವ್ಯಕ್ತಿ ಮತ್ತು ನಿಂತಿರುವ ವ್ಯಕ್ತಿ ಒಂದು ಕಾಲದಲ್ಲಿ ಆತ್ಮೀಯ ಗೆಳೆಯರು ಎಂದು ನಂಬುತ್ತೇನೆ ‘ ಎಂದಿದ್ದಾರೆ.