ಹಿಂದೂ ಗುರೂಜಿ ಫೋಟೋ ಬಳಸಿ ನಂಬಿಕೆ ಗಳಿಸಿದ್ದ ವಂಚಕ ರೋಷನ್ ಸಲ್ಡಾನಾ

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ರೋಷನ್ ಸಲ್ಡಾನಾ (Roshan Saldanha) ನನ್ನು ಪೊಲೀಸರು (Police) ವಿಚಾರಣೆ ನಡೆಸುತ್ತಿದ್ದು, ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ರೋಷನ್ ಸಲ್ಡಾನಾ ಹೆಣೆದಿರುವ ವಂಚನೆಯ ಮಾಯಾಜಾಲ ಕಂಡು ಮಂಗಳೂರು ಪೊಲೀಸರೇ ದಂಗಾಗಿದ್ದಾರೆ.

ರೋಷನ್ ಸಲ್ಡಾನಾ ದೇಶದ ಹಲವು ಭಾಗದ ಉದ್ಯಮಿಗಳಿಗೆ ವಂಚಿಸಿದ್ದಾನೆ. ಯಾರ‍್ಯಾರಿಗೆ ವಂಚಿಸಿದ್ದಾನೆ ಎಂಬುವುದು ವಿಚಾರಣೆ ವೇಳೆ ಬಾಯಿಟ್ಟಿದ್ದಾನೆ.
ಉದ್ಯಮಿಗಳೇ ಈತನ ಟಾರ್ಗೆಟ್
ಮಹಾರಾಷ್ಟ್ರದ ಓರ್ವ ಉದ್ಯಮಿಗೆ 5 ಕೋಟಿ ರೂ., ಮಹಾರಾಷ್ಟ್ರದ ಮತ್ತೊಬ್ಬ ಉದ್ಯಮಿಗೆ 10 ಕೋಟಿ ರೂ. ಮತ್ತು ಅಸ್ಸಾಂನ ಓರ್ವ ಉದ್ಯಮಿಯಿಂದ 20 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ. ಈ ಎಲ್ಲ ಉದ್ಯಮಿಗಳು ಇದೀಗ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ಆಗಮಿಸಿ, ದೂರು ನೀಡುತ್ತಿದ್ದಾರೆ. ಪೊಲೀಸರು ಬ್ಯಾಂಕ್ಗಳಿಗೆ ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ರೂ 3.5 ಕೋಟಿ ಹಣ ಹಾಗೂ ಅಸ್ಸಾಂ ರಾಜ್ಯದ ಓರ್ವ ವ್ಯಕ್ತಿಗೆ ಸಂಬಂಧಿಸಿದ 20 ಲಕ್ಷ ರೂ. ಹಣವನ್ನು ಪ್ರೀಜ್ ಮಾಡಸಿದ್ದಾರೆ.
ವಜ್ರದ ಉಂಗುರ ಧರಿಸಿದ್ದ ಆರೋಪಿ
ಆರೋಪಿ ರೋಷನ್ ಸಲ್ಡಾನಾ 2.75 ಕೋಟಿ ರೂಪಾಯಿ ಮೌಲ್ಯದ ವಜ್ರದ ಉಂಗುರ ಹಾಕುತ್ತಿದ್ದನು ಎಂದು ತಿಳಿದುಬಂದಿದೆ. ಸದ್ಯ ಮಂಗಳೂರು ಪೊಲೀಸರು ಈ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ.
ರೋಹನ್ ಮನೆಯಲ್ಲಿ ಹಿಂದೂ ಗುರೂಜಿ ಫೋಟೋ
ರೋಹನ್, ದೇಶದ ದೊಡ್ಡ ದೊಡ್ಡ ಕುಳಗಳಿಗೆ ಗಾಳ ಹಾಕುತ್ತಿದ್ದನು. ಐಷಾರಾಮಿ ವ್ಯಕ್ತಿಗಳು, ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದನು. ಭೂ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಸಿ, ಮಂಗಳೂರಿನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಕುದುರಿಸುತ್ತಿದ್ದನು. ರೋಹನ್, ಕೈಸ್ತ ಸಮುದಾಯದವನಾದರೂ ಹಿಂದೂ ಗುರೂಜಿ ಫೋಟೋವನ್ನು ತನ್ನ ಮನೆಯಲ್ಲಿ ಹಾಕಿದ್ದಾನು. ಈ ಮೂಲಕ ಕೂಡ ವಂಚಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ಹಿಂದೂ ಗುರೂಜಿ ನೀಮ್ ಕರೋಲಿ ಬಾಬಾ ಫೋಟೋವನ್ನು ರೋಷನ್ ತನ್ನ ಕಚೇರಿಯಲ್ಲಿ ಹಾಕಿದ್ದಾನೆ. ಆ ಮೂಲಕ ಉತ್ತರ ಭಾರತದ ಬಹುಕೋಟಿ ಉದ್ಯಮಿಗಳನ್ನು ವಂಚನೆಗೆ ನಾನು ಬಾಬಾ ಭಕ್ತ ಅಂತ ನಂಬಿಸುತ್ತಿದ್ದ ಎನ್ನಲಾಗಿದೆ.
