ವಂಚನೆ ಪ್ರಕರಣ: ಬಾಲಿವುಡ್ ನಟ ಸೋನು ಸೂದ್ ಗೆ ಬಂಧನ ವಾರೆಂಟ್.

ಲುಧಿಯಾನಾ: ವಂಚನೆ ಪ್ರಕರಣವೊಂದರಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಪಂಜಾಬ್ ನ ಲುಧಿಯಾನಾ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಲುಧಿಯಾನಾ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್
ರಮಣಪ್ರೀತ್ ಕೌರ್ ವಾರೆಂಟ್ ಜಾರಿಗೊಳಿಸಿದ್ದಾರೆ.
ಸುಮಾರು 10 ಲಕ್ಷ ರೂಪಾಯಿ ವಂಚನೆ ಆರೋಪಿಸಿ ಲೂಧಿಯಾನಾದ ವಕೀಲ ರಾಜೇಶ್ ಖನ್ನಾ ಎಂಬವರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಮೋಹಿತ್ ಶುಕ್ಲಾ ನಕಲಿ ರಿಜಿಕಾ ಕಾಯಿನ್ ನಲ್ಲಿ ಹೂಡಿಕೆ ಮಾಡುವ ಆಮಿಷ ತೋರಿಸಿ ವಂಚಿಸಿದ್ದರು ಎಂದು ಆಪಾದಿಸಲಾಗಿತ್ತು. ಈ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ಕೋರ್ಟ್, ಸೋನು ಸೂದ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಪ್ರತಿ ಬಾರಿಯೂ ಗೈರುಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಲೂಧಿಯಾನಾ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ರಮಣೀತ್ ಕೌರ್ ವಾರೆಂಟ್ ಜಾರಿಗೊಳಿಸಿದ್ದರು.