ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ನಾಲ್ಕನೇ ಮೆಟ್ರೋ ರೈಲು ಸಂಚಾರ ಆರಂಭ”

ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ನಾಲ್ಕನೇ ಮೆಟ್ರೋ ರೈಲು ಸಂಚಾರ ಇಂದು ಬೆಳಗ್ಗೆ 6 ಗಂಟೆಗೆ ಶುರುಮಾಡಿದೆ. ಇದರೊಂದಿಗೆ, ಮೆಟ್ರೋದಲ್ಲಿ ಪ್ರಯಾಣಿಕರ ದಟ್ಟಣೆಗೆ ತುಸು ರಿಲೀಫ್ ದೊರೆಯಲಿದೆ. ಈವರೆಗೆ ಕೇವಲ 3 ರೈಲುಗಳು ಇದ್ದುದರಿಂದ 25 ನಿಮಿಷಕ್ಕೆ ಒಮ್ಮೆ ಮೆಟ್ರೋ ರೈಲು ಸಂಚರಿಸುತ್ತಿತ್ತು. ಈಗ ಈ ಅವಧಿ 19 ನಿಮಿಷಕ್ಕೆ ಇಳಿಕೆಯಾಗಿದೆ.
